Advertisement

ಬಿಗ್‌ ಬಾಶ್‌ ಟಿ20 ಲೀಗ್‌ನಲ್ಲಿ ಆಡುವ ಶಫಾಲಿ, ರಾಧಾ ಯಾದವ್‌

10:58 PM May 13, 2021 | Team Udayavani |

ಹೊಸದಿಲ್ಲಿ: ಆಸ್ಟ್ರೇ ಲಿಯದಲ್ಲಿ ನಡೆಯಲಿರುವ 2021ರ ವನಿತಾ ಬಿಗ್‌ ಬಾಶ್‌ ಟಿ20 ಲೀಗ್‌ನಲ್ಲಿ ಭಾರತದ ಬ್ಯಾಟಿಂಗ್‌ ಸೆನ್ಸೇಶನ್‌ ಶಫಾಲಿ ವರ್ಮ ಮತ್ತು ಎಡಗೈ ಸ್ಪಿನ್ನರ್‌ ರಾಧಾ ಯಾದವ್‌ ಆಡಲಿದ್ದಾರೆ.

Advertisement

ಇಬ್ಬರೂ ಎರಡೂ ಬಾರಿಯ ಚಾಂಪಿಯನ್‌ ಸಿಡ್ನಿ ಸಿಕ್ಸರ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇವರಲ್ಲಿ ಶಫಾಲಿ ಅವರ ಒಡಂಬಡಿಕೆ ಈಗಾಗಲೇ ಆಂತಿಮಗೊಂಡಿದೆ. ರಾಧಾ ಯಾದವ್‌ ಅವರ ಸೇರ್ಪಡೆ ಕುರಿತು ಮಾತುಕತೆ ನಡೆಯುತ್ತಿದೆೆ.

ಇದರೊಂದಿಗೆ ಬಿಗ್‌ ಬಾಶ್‌ನಲ್ಲಿ ಆಡಲಿಳಿಯುವ ಭಾರತೀಯ ಆಟ ಗಾರ್ತಿಯರ ಸಂಖ್ಯೆ ಐದಕ್ಕೆ ಏರಲಿದೆ. ಈಗಾಗಲೇ ಹರ್ಮನ್‌ಪ್ರೀತ್‌ ಕೌರ್‌ (ಸಿಡ್ನಿ ಥಂಡರ್‌), ಸ್ಮತಿ ಮಂಧನಾ (ಬ್ರಿಸ್ಬೇನ್‌ ಹೀಟ್‌) ಮತ್ತು ವೇದಾ ಕೃಷ್ಣಮೂರ್ತಿ (ಹೋಬರ್ಟ್‌ ಹರಿಕೇನ್ಸ್‌) ಆಸೀಸ್‌ ಲೀಗ್‌ನಲ್ಲಿ ಆಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next