Advertisement

ಜನನ ಲಿಂಗಾನುಪಾತ: ಕರ್ನಾಟಕದಲ್ಲಿ 11 ಅಂಕ ಇಳಿಕೆ

08:15 AM Feb 18, 2018 | |

ಹೊಸದಿಲ್ಲಿ: ಜನನ ಲಿಂಗಾನುಪಾತ ಕರ್ನಾಟಕ ಸೇರಿದಂತೆ 21 ದೊಡ್ಡ ರಾಜ್ಯಗಳಲ್ಲಿ ಗಮನಾರ್ಹ ಇಳಿಕೆ ಕಂಡಿದೆ. ನೀತಿ ಆಯೋಗ ಈ ವರದಿಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದಲ್ಲಿ 11 ಅಂಕ ಇಳಿಕೆ ಕಂಡಿದೆ. ಗುಜರಾತ್‌ನಲ್ಲಿ 53 ಪಾಯಿಂಟ್‌ಗಳಷ್ಟು ಇಳಿಕೆ ಕಂಡಿರುವುದು ಎಚ್ಚರಿಕೆಯ ಗಂಟೆಯಾಗಿದೆ. ಇದರಿಂದಾಗಿ ಲಿಂಗ ಆಧರಿತ ಗರ್ಭಪಾತ ಪ್ರಕರಣ ಹೆಚ್ಚುತ್ತಿದೆಯೇ ಎಂಬ ಅನುಮಾನವೂ ಉಂಟಾಗಿದೆ.

Advertisement

2012-14ರ ವರ್ಷವನ್ನು ಮೂಲ ವರ್ಷವನ್ನಾಗಿರಿಸಿ ಕೊಂಡು ಈ ವಿಶ್ಲೇಷಣೆ ಮಾಡಲಾಗಿದ್ದು, ಆಗ ಅನುಪಾತ 1000:907ರಷ್ಟಿತ್ತು. ಪ್ರಸಕ್ತ ವರ್ಷ ಇದು 1000:854 ಕ್ಕೆ ಇಳಿಕೆ ಕಂಡಿದೆ. ಗುಜರಾತ್‌ ನಂತರದಲ್ಲಿ ಹರಿಯಾಣದಲ್ಲಿ ಹೆಚ್ಚು ಇಳಿಕೆಯಾಗಿದ್ದು, 35 ಅಂಶ ಕುಸಿದಿದೆ. ಇದೇ ರೀತಿ ರಾಜಸ್ಥಾನ (32), ಉತ್ತರಾಖಂಡ (27), ಮಹಾರಾಷ್ಟ್ರ (18), ಹಿಮಾಚಲ ಪ್ರದೇಶ (14), ಛತ್ತೀಸ್‌ಗಢ (12)ದಲ್ಲೂ ಇಳಿಕೆ ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ  ಗರ್ಭಧಾರಣೆ ಪೂರ್ವ ಮತ್ತು ಶೈಶವ ಪೂರ್ವ ತಪಾಸಣೆ ತಂತ್ರಗಳ ಕಾಯ್ದೆ 1994ರ ಪರಿಣಾಮಕಾರಿ ಅನುಷ್ಠಾನ ಕೈಗೊಳ್ಳುವ ಅಗತ್ಯವಿದೆ ಎಂದು ನೀತಿ ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next