Advertisement
ಜಲಮಂಡಳಿಯು ಕೆ.ಸಿ ವ್ಯಾಲಿಯಲ್ಲಿ 55 ಎಂಎಲ್‌ಡಿ ಸಾಮರ್ಥ್ಯದ ಎರಡು ಹಾಗೂ 108 ಎಂಎಲ್‌ಡಿ ಸಾಮರ್ಥ್ಯದ ಒಂದು ಕೊಳಚೆ ನೀರು ಶುದ್ಧೀಕರಣ ಘಟಕ ಸ್ಥಾಪಿಸಿದೆ. ಇಲ್ಲಿ ಶುದ್ಧೀಕರಣಗೊಂಡ ನಂತರ ಪ್ರತಿ ದಿನ 135 ದಶಲಕ್ಷ ಲೀಟರ್ ನೀರನ್ನು ಪಂಪ್ ಮಾಡಿ ಪೈಪ್ ಮೂಲಕ ಕೋಲಾರದ ಲಕ್ಷ್ಮಿಸಾಗರ ಕೆರೆಗೆ ಬಿಡಲಾಗುತ್ತಿದೆ.ದ್ವಿತೀಯ ಹಂತದಲ್ಲಿ ಸಂಸ್ಕರಣೆಯಾಗುವ ಕೊಳಚೆ ನೀರನ್ನು ಮುಂಭಾಗದ ಕೋಡಿಗೆ ಹರಿಬಿಡಲಾಗುತ್ತಿದೆ. ಇತ್ತೀಚೆಗೆ ಜೋರು ಮಳೆಯಾದ ಪರಿಣಾಮ ಕೋಡಿಯ ನೀರು ಸಂಸ್ಕರಣ ಘಟಕದ ಟ್ಯಾಂಕ್‌ಗೆ ಹರಿದು ಆ
ನೀರು ಸಂಪೂರ್ಣ ಕಲುಷಿತಗೊಂಡಿದೆ. ಕೊಳಚೆ ನೀರು ಟ್ಯಾಂಕ್‌ಗೆ ಬಂದು ಸೇರಿರುವುದು ತಿಳಿಯದೆ ಕೊಳಚೆ ಮಿಶ್ರಿತ ನೀರನ್ನು ಸಣ್ಣ ನೀರಾವರಿ ಇಲಾಖೆಯು ಪೈಪ್ ಮೂಲಕ ಕೋಲಾರದ ಲಕ್ಷ್ಮೀಸಾಗರ ಕೆರೆಗೆ ಹರಿಸಿದೆ. ಪೈಪ್‌ಲೈನ್ ಮಾರ್ಗದ ಏರಿಳಿತದ ಹಾದಿಯಲ್ಲಿ ಕೊಳಚೆ ನೀರು ಸಾಗುವಾಗ ನೊರೆ ಸೃಷ್ಟಿಯಾಗಿದೆ. ಕೆಸಿ ವ್ಯಾಲಿಯಲ್ಲಿ ಪ್ರತಿನಿತ್ಯ ಸಂಸ್ಕರಣೆಯಾಗುವ ನೀರಿನ ಗುಣಮಟ್ಟವನ್ನು ಪರೀಕ್ಷೆ ಮಾಡಲಾಗುತ್ತದೆ. ಅಂತೆಯೇ ಟ್ಯಾಂಕಿನ ನೀರನ್ನು ಪರೀಕ್ಷೆ ಮಾಡಿದಾಗ ಪೊಟೆನ್ಶಿಯಲ್ ಆಫ್ ಹೈಡ್ರೋಜನ್ (ಪಿಎಚ್) ಹೆಚ್ಚಾಗಿರುವುದು ತಿಳಿದು
ಬಂದಿದ್ದು, ಇದರಿಂದಲೇ ಲಕ್ಷ್ಮಿಸಾಗರ ಕೆರೆಯಲ್ಲಿ ನೊರೆ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಹೀಗಾಗಿ, ತಕ್ಷಣ ಕಟ್ಟೆ ನಿರ್ಮಿಸಿ ಕೊಳಚೆನೀರು ಸಂಸ್ಕರಿಸಿದ ನೀರು ಕೆರೆಗೆ ಸೇರದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.