Advertisement

ಒಳಚರಂಡಿ ತ್ಯಾಜ್ಯ ನೀರು ಪಯಸ್ವಿನಿ ಪಾಲು

04:47 PM Nov 01, 2017 | Team Udayavani |

ಸುಳ್ಯ: ನಗರದ ಒಳಚರಂಡಿ ಅವ್ಯವಸ್ಥೆಯಿಂದ ಮ್ಯಾನುವೆಲ್‌ಗ‌ಳಲ್ಲಿ ತ್ಯಾಜ್ಯ ನೀರು ಉಕ್ಕಿ ನಗರದಲ್ಲಿ ದುರ್ನಾತ ಬೀರುತ್ತಿದ್ದು, ಕಂದಡ್ಕ ಹೊಳೆಯ ಮೂಲಕ ಪಯಸ್ವಿನಿ ಪಾಲಾಗುತ್ತಿದೆ!

Advertisement

ವೆಟ್‌ವೆಲ್‌ನಲ್ಲಿ ಕೊಳಚೆ ನೀರು ತುಂಬಿರುವ ಕಾರಣ, ಅದರಿಂದ ಪಂಪ್‌ ಮೇಲಕ್ಕೆತ್ತಲು ಸುಲಭವಾಗಲು, ವೆಟ್‌
ಲೆಟ್‌ ತೂತು ಮಾಡಿ ಮಲಿನ ನೀರನ್ನು ಹೊರ ಚರಂಡಿಗೆ ಬಿಡಲಾಗಿತ್ತು. ಪರಿಣಾಮ, ಜಟ್ಟಿಪಳ್ಳದ ವಿಶ್ವ ಕಾಂಪ್ಲೆಕ್ಸ್‌
ಬಳಿ ತೋಟದ ಉಜಿರೆಕಣಿ ಮೂಲಕ ತ್ಯಾಜ್ಯ ನೀರು ಕಂದಡ್ಕ ಹೊಳೆಯಿಂದ ಪಯಸ್ವಿನಿಗೆ ಸೇರುತ್ತಿದೆ.

ಕಾಂಪ್ಲೆಕ್ಸ್‌ ಮಾಲಕ ಸಂದೇಶ್‌ ಕುರುಂಜಿ ಹಾಗೂ ಸರಳಾಯ ಅವರ ತೋಟದಲ್ಲಿ ತ್ಯಾಜ್ಯ ಬೀಡುಬಿಟ್ಟಿದೆ. ಕಾಂಪ್ಲೆಕ್ಸ್‌ನ ನೆಲ ಮಹಡಿಯ ಅಂಗಡಿಗಳ ಎದುರುಗಡೆ ಇರುವ ತಡೆಗೋಡೆಯಿಂದ ತ್ಯಾಜ್ಯ ನೀರು ಸೋರುತ್ತಿದೆ. ಪರಿಸರದ ಸುತ್ತಮುತ್ತಲ ಬಾವಿಗಳಿಗೆ ಕಲುಷಿತ ನೀರು ಸೇರಿರುವ ಆತಂಕ ಉಂಟಾಗಿದೆ.

ಈ ಮಧ್ಯೆ ನಗರ ಪಂಚಾಯತ್‌ ತಾತ್ಕಾಲಿಕ ಕ್ರಮವಾಗಿ ಒಳಚರಂಡಿ ಮುಚ್ಚಲು ತೀರ್ಮಾನಿಸಿದೆ. ವೆಟ್‌ವೆಲ್‌ ಅನ್ನು ಖಾಲಿ ಮಾಡಿ, ಅಗತ್ಯ ಇರುವೆಡೆ ಕಾಂಕ್ರೀಟ್‌ ಮಾಡಿ, ವೆಟ್‌ವೆಲ್‌ಗೆ ನೀರು ಸೇರದಂತೆ ಕ್ರಮ ಕೈಗೊಳ್ಳಲಾಗುವುದು.
ಈಗಾಗಲೇ ದುರಸ್ತಿ ಕಾರ್ಯ ಆರಂಭಗೊಂಡಿದೆ ಎಂದು ತಿಳಿಸಿದೆ.

ಕಾಮಗಾರಿ ಆರಂಭದಿಂದಲೇ ಅವ್ಯವಸ್ಥೆಯ ಗೂಡಾಗಿದ್ದ ಒಳಚರಂಡಿ ಘಟಕ ಪ್ರಯೋಜನಕಾರಿ ಎನಿಸಲಿಲ್ಲ.
ಹೊಸ ಗದ್ದೆಯಲ್ಲಿನ ಘಟಕದ ಬಳಿ ದಿನವೂ ದುರ್ನಾತ ಬೀರಿ ಸುತ್ತಮುತ್ತಲಿನ 30ಕ್ಕೂ ಅಧಿಕ ಮನೆಗಳಿಗೆ ಸಂಕಷ್ಟ ಉಂಟಾಗಿದೆ. ಆದರೂ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆದಿಲ್ಲ ಅನ್ನುವುದು ಸಾರ್ವಜನಿಕರ ಆರೋಪ.

Advertisement

ಹಾಳಾದ ಪಂಪ್‌
ಹೊಸಗದ್ದೆಯಲ್ಲಿ ನಿರ್ಮಿಸಲಾಗಿರುವ ಶುದ್ಧೀಕರಣ ಘಟಕದಲ್ಲಿನ ಮೂರು ಪಂಪ್‌ಗ್ಳು ಕೆಟ್ಟಿವೆ. ವರ್ಷ ಕಳೆದರೂ
ದುರಸ್ತಿ ಆಗಿಲ್ಲ. ಪರಿಣಾಮ, ಕೊಳಚೆ ನೀರನ್ನು ಪಂಪ್‌ ಮಾಡಲಾಗದೆ ವೆಟ್‌ ವೆಲ್‌ ತುಂಬಿ ರಸ್ತೆಯ ಮ್ಯಾನುವೆಲ್‌
ಮೂಲಕ ಹೊರ ಬರುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next