Advertisement
ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸೋಮವಾರ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಅವರು ಮಾತ ನಾಡಿದರು.
ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಆಗಿರುವುದರಿಂದ ಸಣ್ಣಪುಟ್ಟ ಗೊಂದಲ ಸಹಜ. ಅದನ್ನು ಬಗೆಹರಿಸಲು ಸಮನ್ವಯ ಸಮಿತಿ ಇದೆ. ಎರಡೂ ಪಕ್ಷಗಳ ಹೈಕಮಾಂಡ್ ಇದೆ. ಅವರು ಚರ್ಚಿಸಿ ಗೊಂದಲ ನಿವಾರಿಸಲಿದ್ದಾರೆ. ಜಾತ್ಯತೀತ ಸರಕಾರ ಬೇಕೆಂದು ಸಮ್ಮಿಶ್ರ ಸರಕಾರ ರಚಿಸಲಾಗಿದೆ. ಇದಕ್ಕಾಗಿ ಕಾಂಗ್ರೆಸ್ ಹೊಂದಾಣಿಕೆ ಮಾತ್ರವಲ್ಲ ತ್ಯಾಗವನ್ನೂ ಮಾಡಿದೆ. ಸಮ್ಮಿಶ್ರ ಸರಕಾರ 5 ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಿದೆ. ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಮಾಡುವಾಗ ಗೃಹ ಸಚಿವನೆಂಬ ನೆಲೆಯಲ್ಲಿ ನನ್ನ ಸಲಹೆ ಪಡೆದೇ ನಿರ್ಧಾರ ಕೈಗೊಳ್ಳಲಾಗಿತ್ತು. ನನ್ನ ಬಳಿ ಸಮಾಲೋಚನೆ ಮಾಡಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲ. ಮಾಧ್ಯಮಗಳಿಗೆ ಸುಳ್ಳು ಮಾಹಿತಿ ಯಾರು ಕೊಟ್ಟಿದ್ದಾರೆ ಎಂಬುದು ಗೊತ್ತಿಲ್ಲ’ ಎಂದರು.
ದ.ಕ. ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿರುವ ಬ್ರ್ಯಾಂಡ್ ಮಂಗಳೂರು ಯೋಜನೆ ಬಗ್ಗೆ ಸಚಿವರು ಶ್ಲಾಘನೆ ವ್ಯಕ್ತಪಡಿಸಿದರು.
Related Articles
Advertisement
ಡ್ರಗ್ಸ್ ಹಾವಳಿ: ಕಠಿನ ಕ್ರಮಗಾಂಜಾ ಮತ್ತು ಡ್ರಗ್ಸ್ ಹಾವಳಿ ನಿಯಂತ್ರಿಸಲು ಪೊಲೀಸರು ಕ್ರಮ ಜರಗಿಸಿದ್ದು, ಶ್ಲಾಘನೀಯ ಕ್ರಮ. 8 ಮೆಡಿಕಲ್ ಕಾಲೇಜು ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ 1,80,000 ವಿದ್ಯಾರ್ಥಿಗಳು ಕಲಿಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡ್ರಗ್ಸ್ ಪಿಡುಗು ನಿವಾರಣೆಗೆ ಕಠಿನ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಅನಂತ ಕುಮಾರ್ ಹೇಳಿಕೆಗೆ ಪ್ರತಿಕ್ರಿಯೆಯೇ ತಪ್ಪು: ಪಾಟೀಲ್
ಮಂಗಳೂರು/ಪುತ್ತೂರು: ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಬಗ್ಗೆ ಮಾತನಾಡುವುದೇ ತಪ್ಪು ಅನಿಸುತ್ತದೆ. ಅವರು ಯಾವತ್ತೂ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿ ಯಲ್ಲಿ ಇರಬಯಸುವವರು ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ಸೋಮವಾರ ಮಂಗಳೂರು ಮತ್ತು ಪುತ್ತೂರಿಗೆ ಆಗಮಿಸಿದ್ದ ಅವರು ಸುದ್ದಿಗಾರರ ಜತೆ ಮಾತ ನಾಡಿದರು.
ಕೊಡಗಿನ ಕಾರ್ಯಕ್ರಮ ವೊಂದರಲ್ಲಿ ಪಾಲ್ಗೊಂಡಿದ್ದ ಅನಂತ ಕುಮಾರ್ ಹೆಗಡೆ “ಹಿಂದೂ ಹುಡುಗಿ ಮೈ ಮುಟ್ಟಿದ ಕೈ ಇರಬಾರದು’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೆಗಡೆ ಅವರಿಗೆ ಪಾರ್ಲಿಮೆಂಟ್, ಸಂವಿಧಾನದ ಮೇಲೆ ಗೌರವ ಇಲ್ಲ. ಸಂವಿಧಾನವನ್ನೇ ಬದಲಾಯಿಸಲು ಹೊರಟವರು ಅವರು. ಇದು ಅವ ರಿಗೆ ಶೋಭೆಯಲ್ಲ. ಇಂಥವರಿಗೆ ಚುನಾವಣೆಯಲ್ಲಿ ಜನರು ಸರಿಯಾದ ಉತ್ತರ ಕೊಡುತ್ತಾರೆ ಎಂದು ಹೇಳಿದರು. ಗ್ರಾಮ ಪಂಚಾಯತ್ ಸದಸ್ಯ ರಾಗಲೂ ನಾಲಾಯಕ್ಕು
ಅನಂತ ಅವರು ಪಾರ್ಲಿಮೆಂಟ್‌ನಲ್ಲಿ ಇರಲು ಯೋಗ್ಯರಲ್ಲ; ಮಾತ್ರ ವಲ್ಲದೆ ಗ್ರಾ.ಪಂ.ಸದಸ್ಯರಾಗಲು ಕೂಡ ಅರ್ಹರಲ್ಲ. ಸಂವಿಧಾನದಲ್ಲಿ ನೀಡಲಾದ ಅವಕಾಶ ಪಡೆದು ಹೆಗಡೆ ಸಂಸದರಾಗಿದ್ದಾರೆ. ಆದರೆ ಅದೇ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂದೂ ಹೇಳುತ್ತಾರೆ. ಭಾರತದ ಸಂವಿಧಾನ ಶ್ರೇಷ್ಠ ಎಂದು ಪಾಟೀಲ್ ತಿಳಿಸಿದರು. ವಿವಾದಾತ್ಮಕ ಹೇಳಿಕೆ ನೀಡಿದ ಅವರ ವಿರುದ್ಧ ಕೇಸು ದಾಖಲಿಸಲು ಅವಕಾಶ ಇದೆಯೇ ಎನ್ನುವ ಕುರಿ ತಂತೆ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಕಾಂಗ್ರೆಸ್ ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ರಾಜೀ ನಾಮೆಗೂ ಸಿದ್ಧ ಎಂದಿರುವ ಮುಖ್ಯ ಮಂತ್ರಿ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, ಇದರ ಬಗ್ಗೆ ನನಗೇನೂ ತಿಳಿದಿಲ್ಲ. ಮಾಹಿತಿ ತಿಳಿದುಕೊಂಡ ಬಳಿಕವಷ್ಟೇ ಹೇಳಲು ಸಾಧ್ಯ ಎಂದರು.