Advertisement

ಸೇವಾದಳ ಕಲಿಸುತ್ತದೆ ರಾಷ್ಟ್ರಪ್ರೇಮ-ಜೀವನದಲ್ಲಿ ಶಿಸ್ತು

05:39 AM Feb 01, 2019 | Team Udayavani |

ಮಲೇಬೆನ್ನೂರು: ಸ್ವಾತಂತ್ರ್ಯ ಹೋರಾಟಗಾರರಲ್ಲಿ ಶಿಸ್ತು ಬೆಳೆಸಲು ಮಹಾತ್ಮ ಗಾಂಧೀಜಿ ಸೇವಾದಳ ಸ್ಥಾಪಿಸಿದ್ದರು ಎಂದು ರಾಜ್ಯಸಭೆ ಮಾಜಿ ಸದಸ್ಯ ಹಾಗೂ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಕೆ.ಆರ್‌. ಜಯದೇವಪ್ಪ ನುಡಿದರು.

Advertisement

ಅವರು ಪಟ್ಟಣದ ಶಾದಿಮಹಲ್‌ನಲ್ಲಿ ಹುತಾತ್ಮರ ದಿನಾಚರಣೆ ಆಂಗವಾಗಿ ಏರ್ಪಡಿಸಿದ್ದ ಭಾರತ ಸೇವಾದಳ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ ಉದ್ಘಾಟಿಸಿ ಮಾತನಾಡಿದರು.

ಶಿಸ್ತು ಕಲಿಸುವ ಸೇವಾದಳಕ್ಕೆ ಪ್ರತಿಯೊಬ್ಬ ವಿದ್ಯಾರ್ಥಿ ಸೇರಬೇಕು. ರಾಷ್ಟ್ರ ಪ್ರೇಮ, ಹಿರಿಯರಿಗೆ ಗೌರವ ಸಲ್ಲಿಸುವುದನ್ನು ಸೇವಾದಳ ಕಲಿಸುತ್ತದೆ. ಸ್ವಾತಂತ್ರ್ಯ ಹೋರಾಟಗಾರರನ್ನು ಕೇವಲ ಸ್ವಾತಂತ್ರ್ಯ ದಿನಾಚರಣೆ ಅಥವಾ ಗಣರಾಜ್ಯೋತ್ಸವ ಇನ್ನಿತರೆ ಸಂದರ್ಭಗಳಲ್ಲಿ ಮಾತ್ರ ನೆನೆಯದೆ, ಸದಾ ಕಾಲ ಸ್ಮರಿಸುತ್ತಿರಬೇಕು ಎಂದರು.

ಶಾಸಕ ರಾಮಪ್ಪ ಮಾತನಾಡಿ, ರಾಷ್ಟ್ರವನ್ನು ರಕ್ಷಿಸುತ್ತಿರುವ ಸೈನಿಕರಿಗೆ ಹೆಚ್ಚಿನ ಸೌಲಭ್ಯಗಳು ಸಿಗುವಂತೆ ಪ್ರಧಾನ ಮಂತ್ರಿಗಳು ಯೋಜನೆಗಳನ್ನು ರೂಪಿಸಬೇಕು ಎಂದರು.

ಜಿಪಂ ಮಾಜಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ ಮಾತನಾಡಿ, ಉತ್ತಮ ಜೀವನಕ್ಕೆ ಶಿಸ್ತು ಮುಖ್ಯ. ಎಲ್ಲಾ ಶಾಲೆಗಳಲ್ಲೂ ಸೇವಾದಳ ಘಟಕವನ್ನು ಪ್ರಾರಂಭಿಸಬೇಕು ಎಂದರು.

Advertisement

ಗೌರವ ಡಾಕ್ಟರೇಟ್ ಪಡೆದ ಹಿರಿಯ ಮುಖಂಡ ಕೆ.ಪಿ. ಸಿದ್ದಬಸಪ್ಪ, ನಿವೃತ್ತ ಯೋಧರು ಹಾಗೂ ಹುತಾತ್ಮ ಯೋಧರ ಕುಟುಂಬವರ್ಗದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಜಾಮಿಯಾ ನ್ಯಾಷನಲ್‌ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ಬಿ. ಮೊಹಮ್ಮದ್‌ ರೋಷನ್‌ ಸಾಬ್‌ ಧ್ವಜಾರೋಹಣ ನೆರವೇರಿಸಿದರು. ಜಾಮೀಯಾ ನ್ಯಾಷನಲ್‌ ಶಾಲೆಯ ಆವರಣದಿಂದ ಶಾದಿ ಮಹಲ್‌ವರೆಗೆ ಶಾಲಾ ಮಕ್ಕಳ ಪ್ರಾಭಾತಫೇರಿ ನಡೆಯಿತು.

ತಾಪಂ ಅಧ್ಯಕ್ಷೆ ಶ್ರೀದೇವಿ, ಎಪಿಎಂಸಿ ಸದಸ್ಯ ಜಿ. ಮಂಜುನಾಥ್‌ ಪಟೇಲ್‌, ಪಿ.ಎಸ್‌. ಹನುಮಂತಪ್ಪ, ಜಿಗಳಿ ಆನಂದಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಬಿ. ಆಬೀದ್‌ ಅಲಿ, ದಾವಣಗೆರೆ ಡಯಟ್ ಉಪನಿರ್ದೇಶಕ ಎಚ್.ಕೆ. ಲಿಂಗರಾಜು, ಸಿಇಒ ನೀಲಗಿರಿಯಪ್ಪ, ಬಿಇಒ ಯು. ಬಸವರಾಜಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಮಕೃಷ್ಣಪ್ಪ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎ. ಪರಶುರಾಮಪ್ಪ, ಗಣ್ಯರಾದ ಬಿ.ಟಿ. ತಿಪ್ಪಣ್ಣರಾಜು, ನಜೀರ್‌ ಅಹ್ಮದ್‌, ಜಿ. ಹಾಲಪ್ಪ, ನಿಂಗಪ್ಪ, ಶೃತಿ ಇನಾಂದಾರ್‌, ಪುರಸಭೆ ಸದಸ್ಯರು ಇದ್ದರು.

ಜಾಮಿಯಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಎ.ಬಿ. ಫೈಜು ಸ್ವಾಗತಿಸಿ, ಶಿಕ್ಷಕ ಹನುಮಗೌಡ ನಿರೂಪಿಸಿದರು. ಪ್ರಾಚಾರ್ಯ ಮಹಮದ್‌ ಇಲಿಯಾಜ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next