Advertisement

BJP: ಯತ್ನಾಳ್‌ ವಿರುದ್ಧ ವರಿಷ್ಠರಿಗೆ ದೂರು: ಹರತಾಳು ಹಾಲಪ್ಪ ಎಚ್ಚರಿಕೆ

12:01 AM Oct 04, 2024 | Team Udayavani |

ಬೆಂಗಳೂರು: ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆಗಳಿಂದ ಪಕ್ಷಕ್ಕೆ ಧಕ್ಕೆಯಾಗುವುದರ ಜತೆಗೆ ಕಾರ್ಯಕರ್ತರಲ್ಲೂ ಗೊಂದಲ ಮೂಡುತ್ತಿದೆ. ಎಲ್ಲವನ್ನೂ ಹೈಕಮಾಂಡ್‌ ಗಮನಿಸುತ್ತಿದೆ. ಅವರ ವರ್ತನೆ ಹೀಗೆಯೇ ಮುಂದುವರಿದರೆ ನಾವೆಲ್ಲರೂ ವರಿಷ್ಠರಿಗೆ ದೂರು ಸಲ್ಲಿಸಬೇಕಾಗುತ್ತದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಎಚ್ಚರಿಸಿದರು.

Advertisement

ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಹಾಲಪ್ಪ, ಯತ್ನಾಳ್‌ ಅವರಲ್ಲಿನ ಗೊಂದಲಗಳನ್ನು ಸರಿಪಡಿಸಿಕೊಳ್ಳಲಿ ಎಂದರಲ್ಲದೆ, ಯತ್ನಾಳ್‌ ಅವರೊಂದಿಗೆ ಗುರುತಿಸಿಕೊಂಡಿರುವ ನಾಯಕರಿಗೂ ಇದೇ ಎಚ್ಚರಿಕೆ ನೀಡಿದರು.

ಬಿ.ವೈ. ವಿಜಯೇಂದ್ರರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರಾಗಿ ಹೈಕಮಾಂಡ್‌ ನೇಮಿಸಿದೆ. ಸರ್ವೇ ಮಾಡಿಸಿ, ಹಲವರ ಅಭಿಪ್ರಾಯ ಪಡೆದೇ ನೇಮಿಸಿದ್ದು, ಒಪ್ಪಿಕೊಳ್ಳಬೇಕು. ರಾಜ್ಯಾಧ್ಯಕ್ಷರ ನೇಮಕದ ಬಗ್ಗೆ ಮಾತನಾಡುವುದು ಹೈಕಮಾಂಡ್‌ ಪ್ರಶ್ನಿಸಿದಂತಾಗುತ್ತದೆ. ವಿಜಯೇಂದ್ರರ ವಯಸ್ಸಿನ ಬಗ್ಗೆ ಮಾತನಾಡುವ ಯತ್ನಾಳ್‌ ಅವರು ಮೊದಲ ಬಾರಿಗೆ ಕೇಂದ್ರ ಸಚಿವರಾದಾಗ ಅವರ ವಯಸ್ಸು ಎಷ್ಟು ಎಂಬುದನ್ನು ನೆನಪು ಮಾಡಿಕೊಳ್ಳಲಿ. ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಹೋದಲ್ಲೂ ಯತ್ನಾಳ್‌ ಹೇಳಿಕೆಗಳು ಚರ್ಚೆ ಆಗುತ್ತಿವೆ. ಇಂದಲ್ಲ ನಾಳೆ ಸರಿಯಾಗುತ್ತಾರೆ ಎಂದುಕೊಂಡರೂ ಅದೇ ಚಾಳಿ ಮುಂದುವರಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next