Advertisement

ಸೇವಾ ಸಿಂಧು ಸೌಲಭ್ಯ ಪಡೆಯಿರಿ

03:42 PM Dec 27, 2021 | Team Udayavani |

ಸುರಪುರ: ನಮ್ಮ ಸಂಸ್ಥೆ ಕೇವಲ ಹಣಕಾಸಿನ ವ್ಯವಹಾರಕ್ಕೆ ಸೀಮಿತವಾಗದೇ ಸಮಾಜಮುಖೀ ಕೆಲಸ ಮಾಡುತ್ತಿದೆ. ಜನರಿಗೆ ಸುಲಭವಾಗಿ ಗ್ರಾಹಕ ಸೇವಾ ಸಿಂಧು ಸೌಲಭ್ಯ ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ಸಂತೋಷ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಿವಳಗುಡ್ಡದ ಹತ್ತಿರ ಕಳೆದ ತಿಂಗಳು ಆರಂಭಿಸಿದ್ದ ಸೇವಾ ಕೇಂದ್ರ ಇದುವರೆಗೆ 1162 ಜನರಿಗೆ ಸೇವೆ ನೀಡಿದೆ. ನಮ್ಮ ಸೇವೆ ಗುರುತಿಸಿ ಜನರು ಕೇಂದ್ರಕ್ಕೆ ಬರುತ್ತಿದ್ದಾರೆ. ಉತ್ತಮ ಜನ ಸೇವಾ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಹುಣಸಗಿ ಮತ್ತು ಸುರಪುರ ಎರಡು ತಾಲೂಕುಗಳಿಗೆ ಹೊಸದಾಗಿ 19 ಸೇವಾ ಸಿಂಧು ಮಂಜೂರಿ ಮಾಡಿದ್ದಾರೆ. ತಿಮ್ಮಪುರ, ರುಕ್ಮಾಪುರ, ಭೋವಿಗಲ್ಲಿ, ಹಸನಾಪುರ, ಸತ್ಯಂಪೇಟ, ಅರಕೇರಾ ಸೇರಿದಂತೆ ನಗರದಲ್ಲಿ 6 ಮತ್ತು ಹುಣಸಗಿ ಕೊಡೇಕಲ್‌ ನಾರಾಯಣಪುರದಲ್ಲಿ 6 ಕೇಂದ್ರ. ಇನ್ನುಳಿದವುಗಳನ್ನು ಕೆಂಭಾವಿ, ಕಕ್ಕೇರಾ ವಲಯದಲ್ಲಿ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು. ಈ ವೇಳೆ ಸಿಎಸ್‌ಸಿ ತಾಲೂಕು ನೋಡಲ್‌ ಅಧಿಕಾರಿ ರಮೇಶ ಕದಂ, ಆಂತರಿಕ ಲೆಕ್ಕ ಪರಿಶೋಧಕಿ ಬಸಮ್ಮ ಕಣದಾಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next