Advertisement
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನು ದ್ದೇಶಿಸಿ ಮಾತನಾಡಿ, ಪ್ರಾಥಮಿಕ ಹಂತದಲ್ಲಿ ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಜೆಡಿಎಸ್ ಮುಖಂಡರ ನಡುವೆ ಮಾತುಕತೆ ನಡೆದಿದೆ. ಶೀಘ್ರದಲ್ಲೇ ಇನ್ನೊಂದು ಸುತ್ತಿನ ಮಾತುಕತೆ ನಡೆಯಲಿದೆ. ಯಾವ ಕ್ಷೇತ್ರದಲ್ಲಿ ಯಾವ ಪಕ್ಷದ ಪ್ರಾಬಲ್ಯವಿದೆಯೋ ಅದಕ್ಕೆ ಆದ್ಯತೆ ಸಿಗಲಿದೆ ಎಂದರು.
ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಜ್ಜುಗೊಂಡಿದೆ. ಕಾಂಗ್ರೆಸ್ ಗೆಲುವು ನಮ್ಮ ಸಂಕಲ್ಪ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲೂ ಬೂತ್ ಅಧ್ಯಕ್ಷರು, ಪದಾಧಿಕಾರಿಗಳು, ಏಜೆಂಟ್‌ಗಳಿಗೆ ತರಬೇತಿ ಆಯೋಜಿ ಸಿದ್ದು, ಮಾ.10ರೊಳಗೆ ಪೂರ್ಣಗೊಳ್ಳ ಲಿದೆ. ಜನಸಂಪರ್ಕ ಅಭಿಯಾನದಲ್ಲಿ ಮತದಾರರ ಮನೆ ಭೇಟಿ ಮಾಡಿ ಕಾಂಗ್ರೆಸ್ ಕೊಡುಗೆ, ಸಾಧನೆಗಳು, ಬಿಜೆಪಿ ಸರಕಾರದ ವೈಫಲ್ಯಗಳನ್ನು ಮನವರಿಕೆ ಮಾಡಲಾಗುತ್ತದೆ. ಮಾ.9 ರಂದು ಹಾವೇರಿ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸುವರು ಎಂದರು. ಪೂಜಾರಿಯವರಿಗೆ ಉನ್ನತ ಸಾœನ
ಜನಾರ್ದನ ಪೂಜಾರಿಯವರಿಗೆ ಟಿಕೇಟು ಸಿಗಲಿದೆಯೇ ಎಂಬುದಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಅವರು ಪಕ್ಷದ ಉನ್ನತ ನಾಯಕರು. ಅವರು ಅಧಿಕಾರ ಇರಲಿ, ಇಲ್ಲದಿರಲಿ; ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನವಿದೆ ಎಂದರು.
ಡಾ| ಜಿ. ಪರಮೇಶ್ವರ್ ನೀಡಿರುವ ಹೇಳಿಕೆ ಕುರಿತು, ಅವರು ಬೇರೆ ಅರ್ಥ ದಲ್ಲಿ ಹೇಳಿರಬಹುದು. ಕಾಂಗ್ರೆಸ್ ಜಾತಿ, ಧರ್ಮ, ಭಾಷೆ ನೋಡದೆ ಅವಕಾಶ ನೀಡುತ್ತಿದೆ. ದಲಿತರಿಗೆ ಹೆಚ್ಚು ಅವಕಾಶ ನೀಡಿದೆ ಎಂದರು.
ಮುಖಂಡರಾದ ಹರೀಶ್ ಕುಮಾರ್, ಜಿ.ಎ. ಬಾವಾ, ಜೆ.ಆರ್. ಲೋಬೋ ಸಹಿತ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Related Articles
ರಾಹುಲ್ ಗಾಂಧಿಯವರೇ ಮುಂದಿನ ಪ್ರಧಾನಿಯಾಗಬೇಕು ಎಂಬುದು ನನ್ನ ಬಯಕೆ. ಮಹಾಮೈತ್ರಿಯಲ್ಲಿ ಯಾವ ಪಕ್ಷ ಹೆಚ್ಚು ಸ್ಥಾನ ಗೆಲ್ಲುತ್ತದೆಯೋ ಆ ಪಕ್ಷಕ್ಕೆ ಸರಕಾರದಲ್ಲಿ ವರಿಷ್ಠ ಸ್ಥಾನ ನೀಡಲಾಗುತ್ತದೆ. ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಲಿದೆ. ಆಗ ಕಾಂಗ್ರೆಸ್‌ಗೆ ಪ್ರಧಾನಿ ಪಟ್ಟ ಸಿಗಲೇ ಬೇಕಾಗುತ್ತದೆ ಎಂದು ಈಶ್ವರ್ ಖಂಡ್ರೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
Advertisement
ಮೋದಿ ಚುನಾವಣಾ ಗಿಮಿಕ್ಪ್ರಧಾನಿ ಮೋದಿ ಪ್ರಚಾರಕ್ಕಾಗಿ ಸಫಾಯಿ ಕರ್ಮಚಾರಿಗಳ ಕಾಲು ತೊಳೆದಿದ್ದಾರೆ. ಇದು ಕೇವಲ ಚುನಾವಣಾ ಗಿಮಿಕ್ ಎಂದು ಈಶ್ವರ ಖಂಡ್ರೆ ಲೇವಡಿ ಮಾಡಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆ. ಜಯಪ್ರಕಾಶ್ ಹೆಗ್ಡೆ ಅವರನ್ನು ಕಾಂಗ್ರೆಸ್ ಯಾವತ್ತಿಗೂ ಸ್ವಾಗತಿಸುತ್ತದೆ. ಅವರು ಒಳ್ಳೆಯ ವ್ಯಕ್ತಿ, ಕಾಂಗ್ರೆಸ್‌ಗೆ ಬರಲಿ ಎಂದರು. ಕರಾವಳಿ ಗೆಲುವು
ಕರಾವಳಿಯಲ್ಲಿ ಕಳೆದ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಅಪಪ್ರಚಾರದಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗಿತ್ತು. ಆದರೆ ಈ ಬಾರಿ ಎಲ್ಲ 3 ಸ್ಥಾನಗಳನ್ನು ಗೆಲ್ಲಲಿದೆ ಎಂದು ಖಂಡ್ರೆ ಹೇಳಿದರು.