Advertisement

ಮೊಬೈಲ್‌ ಬದಿಗಿಟ್ಟು ಕೃಷಿ ಜೀವನ ಅಳವಡಿಸಿಕೊಳ್ಳಿ: ಶ್ರೀಕಾಂತ್‌

07:45 AM Jul 19, 2018 | Team Udayavani |

ಬದಿಯಡ್ಕ: ಪರಂಪರಾಗತ ಕೃಷಿಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗಲು ಆಧುನಿಕ ಯುಗದಲ್ಲೂ ಕೆಸರಿಗಿಳಿಯುವ ಮನೋಭಾವವಿರಬೇಕು. ಮೊಬೆ„ಲ್‌ ಹಾಗೂ ಇಂಟರ್‌ನೆಟ್‌ ಬಳಕೆಯಲ್ಲಿ ಕಾಲಕಳೆಯುವುದರ ಬದಲು ಸಹಜ ವಾದ ಕೃಷಿ ಜೀವನವನ್ನು ಮೈಗೂಡಿಸಿ ಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್‌ ಸದಸ್ಯ ನ್ಯಾಯವಾದಿ ಕೆ. ಶ್ರೀಕಾಂತ್‌ ತಿಳಿಸಿದರು.

Advertisement

ಬದಿಯಡ್ಕ ಗ್ರಾ. ಪಂ. ಮತ್ತು ಕುಟುಂಬಶ್ರೀ ಸಿ.ಡಿ.ಎಸ್‌.ನ ಆಶ್ರಯದಲ್ಲಿ 6ನೇ  ವಾರ್ಡು ಕರಿಂಬಿಲದಲ್ಲಿ ನಡೆದ “ಮಳೆ-ಬೆಳೆ ಮಹೋತ್ಸವ’ದ ಸಮಾ ರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾಲ ಬದಲಾಗುತ್ತಿದ್ದು, ಎಷ್ಟೋ ಜನ ಯುವಕರು ಕೃಷಿಯತ್ತ ಗಮನಹರಿಸು ವುದು ಕಂಡುಬರುತ್ತದೆ. ಸಾವಯವ ಕೃಷಿ ಮಾಡುವುದರಿಂದ ಉತ್ತಮ ಆರೋಗ್ಯ ವಂತರಾಗಿ ಬಾಳಲು ಸಾಧ್ಯ ಎಂದರು.

ಬದಿಯಡ್ಕ ಗ್ರಾಮ ಪಂಚಾಯತ್‌ ಅಧ್ಯಕ್ಷ  ಕೆ.ಎನ್‌. ಕೃಷ್ಣ ಭಟ್‌ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. 
ಬದಿಯಡ್ಕ ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ ಸೆ„ಬುನ್ನೀಸಾ ಮೊಯ್ದಿàನ್‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜನಪ್ರತಿನಿ ಗಳಾದ ಬಾಲಕೃಷ್ಣ ಶೆಟ್ಟಿ ಕಡಾರು, ಜಯಂತಿ, ಲಕ್ಷ್ಮೀನಾರಾಯಣ ಪೈ, ಪ್ರೇಮಾ, ಕೃಷಿ ಅ ಧಿಕಾರಿ ಮೀರಾ, ಕುಟುಂಬಶ್ರೀಯ ಗ್ರೇಸಿ ಡಿ’ಸೋಜಾ ಮೊದಲಾದವರು ಪಾಲ್ಗೊಂಡರು. ವಾರ್ಡ್‌ ಸದಸ್ಯ ವಿಶ್ವನಾಥ ಪ್ರಭು ಕರಿಂಬಿಲ ಸ್ವಾಗತಿಸಿ, ಕುಟುಂಬಶ್ರೀ ಸಿ.ಡಿ.ಎಸ್‌. ಅಧ್ಯಕ್ಷೆ ಸುಧಾ ಜಯರಾಂ ವಂದಿಸಿದರು.

ಜನಪ್ರತಿನಿ ಗಳು ಕೃಷಿಕರೊಂದಿಗೆ ನೇಜಿಯನ್ನು ನೆಟ್ಟು ಸಂಭ್ರಮಿಸಿದರು. ಕೆಸರು ಗದ್ದೆಯಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಬಡ್ಡಿ, ಹಗ್ಗ ಜಗ್ಗಾಟ, 100 ಮೀಟರ್‌ ಓಟ, ಲಿಂಬೆ ಚಮಚ, ನೇಜಿ ನೆಡುವುದು, ವೇಗದ ನಡೆ ಮೊದಲಾದ ಸ್ಪರ್ಧೆಗಳನ್ನು  ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಏರ್ಪಡಿಸಲಾಗಿತ್ತು. 

ಉತ್ತಮ ಕೃಷಿಕರಿಗಿರುವ ಪ್ರಶಸ್ತಿಗೆ  ಆಯ್ಕೆಯಾದ ಕೆ. ಕೇಶವ ಪ್ರಭು ಕರಿಂಬಿಲ, ಮದರು ಪೀಳಿತ್ತಡ್ಕ, ಚಂದ್ರಾವತಿ ವಳಮಲೆ, ಸುಂದರಿ ಕಾಡಮನೆ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.
 
ಮಳೆ-ಬೆಳೆ ಮಹೋತ್ಸವವು ಊರಿನಲ್ಲಿ ಹಬ್ಬದ ವಾತಾವರಣವನ್ನು ಉಂಟುಮಾಡಿತ್ತು. ರವಿಕಾಂತ ಕೇಸರಿ ಕಡಾರು ಹಾಗೂ ಅನಿತಾ ಟೀಚರ್‌ ನಿರ್ಣಾಯಕರಾಗಿ ಪಾಲ್ಗೊಂಡರು. ಸ್ಪರ್ಧೆಗಳಲ್ಲಿ   ವಿಜೇತ‌ರಿಗೆ ಬಹುಮಾನ ವನ್ನು ವಿತರಿಸಲಾಯಿತು.

Advertisement

ಹಿರಿಯರ ಕಾಲದಲ್ಲಿ ಗದ್ದೆ ಬೇಸಾಯವಿಲ್ಲದ ಮನೆಗಳಿರುತ್ತಿರಲಿಲ್ಲ. ತಮ್ಮ ಮನೆಗಾಗಿ ಆಹಾರವನ್ನು ಅವರೇ ಉತ್ಪಾದಿಸಿ ಉಳಿದುದನ್ನು ದಾನಮಾಡುತ್ತಿದ್ದ ಕಾಲವೊಂದಿತ್ತು. ಆದರೆ ಇಂದು ಕಾಲ ಬದಲಾಗಿದ್ದು ಗದ್ದೆ ಬೇಸಾಯದಲ್ಲಿ ನಾವು ಹಿಂದೆ ಉಳಿಯಬಾರದು. ಸರಕಾರವು ನೀಡುತ್ತಿರುವ ಸಹಾಯಧನ ಹಾಗೂ ಪ್ರೋತ್ಸಾಹವನ್ನು ಸಮರ್ಪಕವಾದ ರೀತಿಯಲ್ಲಿ ಬಳಸಿಕೊಂಡು ಉತ್ತಮ ಇಳಿವರಿ ಪಡೆಯಬೇಕು.
– ಕೆ. ಎನ್‌. ಕೃಷ್ಣ ಭಟ್‌ 
ಉಪಾಧ್ಯಕ್ಷ, ಬದಿಯಡ್ಕ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next