Advertisement
ರಾಜಕೀಯವಾಗಿ ಜಟಾಪಟಿಗೆ ಕಾರಣವಾಗ ಬಹುದು ಎಂಬ ನಿರೀಕ್ಷೆ ಇದ್ದ ವಿದ್ಯುತ್ ಖರೀದಿ ಹಗರಣ ಕುರಿತು ವರದಿ ಮಂಡನೆಯಾಯಿತಾದರೂ ಚರ್ಚೆಗೆ ಅವಕಾಶ ಸಿಗದ ಕಾರಣ ಠುಸ್ ಆದಂತಾಯಿತು. ಇನ್ನು ಹತ್ತು ದಿನಗಳ ಕಾಲ ನಡೆದ ಅಧಿವೇಶನದಲ್ಲಿ ನಿರೀಕ್ಷೆಯಂತೆ ಡಿವೈಎಸ್‌ಪಿ ಗಣಪತಿ ಸಾವು ಪ್ರಕರಣದಲ್ಲಿ ಸಚಿವ ಜಾರ್ಜ್ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿರುವುದು, ನೈಸ್ ಹಗರಣ, ಲ್ಯಾಪ್‌ಟಾಪ್ ಹಗರಣ ಸದ್ದು ಮಾಡಿತಾದರೂ ವಿಪಕ್ಷಗಳ ಮನದಾಳದಂತೆ ತಾರ್ಕಿಕ ಅಂತ್ಯ ಕಾಣಲಿಲ್ಲ.
Related Articles
Advertisement
ವಿಧಾನಸಭೆಯಲ್ಲಿ ಹತ್ತು ದಿನಗಳ ಅಧಿವೇಶನದಲ್ಲಿ ಗಣಪತಿ ಪ್ರಕರಣದಲ್ಲಿ ಸಿಬಿಐ ಎಫ್‌ಐಆರ್ ಹಿನ್ನೆಲೆಯಲ್ಲಿ ಜಾರ್ಜ್ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದು ಧರಣಿ ನಡೆಸಿದ್ದರಿಂದ ಒಂದು ದಿನದ ಕಲಾಪ ಬಲಿಯಾದರೆ, ಅಂತಿಮ ದಿನ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಪ್ರಕರಣದಲ್ಲಿ ಸಚಿವ ವಿನಯ ಕುಲಕರ್ಣಿ ರಾಜೀನಾಮೆಗೆ ಒತ್ತಾಯಿಸಿ ವಿಪಕ್ಷ ಬಿಜೆಪಿ ಧರಣಿ ನಡೆಸಿದ್ದರಿಂದ ಕಲಾಪ ಬಲಿಯಾಯಿತು. ಹೀಗಾಗಿ ಸದನ ಆರಂಭ ಮತ್ತು ಅಂತ್ಯ ಎರಡೂ ಗದ್ದಲದಲ್ಲೇ ಆಯಿತು.
ಖಾಸಗಿ ಆಸ್ಪತ್ರೆಗಳಿಗೆ ಮೂಗುದಾರ ಹಾಕುವ ಹಾಗೂ ಸರಕಾರಿ ಆಸ್ಪತ್ರೆಗಳ ಸೇವಾ ಗುಣಮಟ್ಟ ಸುಧಾರಿಸುವ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆ, ವಾಸಿಸುವವನೇ ನೆಲದೊಡೆಯ ಉದ್ದೇಶದ ಹಟ್ಟಿ, ಹಾಡಿ, ತಾಂಡಾ, ಕ್ಯಾಂಪ್‌ಗ್ಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಭೂ ಸುಧಾರಣೆ ತಿದ್ದುಪಡಿ ಮಸೂದೆ ಸಹಿತ 11 ಮಸೂದೆಗಳಿಗೆ ಅಂಗೀಕಾರ ಪಡೆಯುವಲ್ಲಿ ಸರಕಾರ ಯಶಸ್ವಿಯಾಯಿತು. ಕಂಬಳಕ್ಕೆ ಕಾನೂನು ಮಾನ್ಯತೆ ದೊರಕಿಸಿಕೊಡುವ ಮಸೂದೆಗೂ ಅಂಗೀಕಾರ ಪಡೆಯಲಾಯಿತು.