Advertisement

Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ

12:58 PM Nov 08, 2024 | Team Udayavani |

ಹುಬ್ಬಳ್ಳಿ: ಪ್ರಿಯಾಂಕ ಖರ್ಗೆ ಶಾಸಕರಾದರೂ ಕ್ಷೇತ್ರದಲ್ಲಿ ಅವರಿಗೆ ಯಾವುದೇ ಕೆಲಸವಿಲ್ಲ ಅನ್ನಿಸುತ್ತದೆ. ಹುಡುಕಿ ಹುಡುಕಿ ಎಫ್.ಐ.ಆರ್ ಹಾಕಿಸುವುದೇ ಅವರು ಫುಲ್ ಟೈಮ್ ಕೆಲಸ ಮಾಡಿಕೊಂಡಿದ್ದಾರೆ. ಆದರೆ ಅವರು ಹಾಕಿರುವ ಕೇಸ್ ಗಳನ್ನು ಸುಪ್ರೀಂ ಕೋರ್ಟ್ ಛೀಮಾರಿ ಹಾಕಿ ವಾಪಸ್ ಕಳುಹಿಸುತ್ತದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಪಿಸಿ ಸಮಿತಿ ಹಾವೇರಿ ಭೇಟಿ ನೀಡಿದ ಸಂದರ್ಭದಲ್ಲಿ ರೈತನ ಅಹವಾಲು ಪಡೆದಿದ್ದೆವು. ಅವರ ಜಮೀನಿಗೆ ವಕ್ಫ್ ಮೊಹರು ಹಾಕಲಾಗಿತ್ತು. ಇದರಿಂದ ರೈತ ಸಣ್ಣಪ್ಪ ಎಂಬುವರು ರೈತ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಕುಟುಂಬದವರು ಹೇಳಿದ್ದರು. ಇದು ಮಾಧ್ಯಮದಲ್ಲಿ ಪ್ರಸಾರ ಆಗಿತ್ತು. ಇದರ ಬಗ್ಗೆ ಎಕ್ಸ್ (ಟ್ವೀಟ್) ಮಾಡಿದ್ದೆ. ಇದನ್ನೇ ಇಟ್ಟುಕೊಂಡು ನನ್ನ ವಿರುದ್ಧ ಸಚಿವ ಪ್ರಿಯಾಂಕ ಖರ್ಗೆ ಅವರು ಎಫ್.ಐ.ಆರ್ ಮಾಡಿಸಿದ್ದಾರೆ ಎಂದರು.

ನಾನು ಮಾಡಿದ ಟ್ವೀಟ್ ಗೆ ಹಾವೇರಿ ಎಸ್ಪಿ ಅಕೌಂಟ್ ರೀತಿ ಘಟನೆ ಆಗಿಲ್ಲ ಎಂದು ಮರು ಟ್ವೀಟ್ ಮಾಡಿದ್ದರು. ಕಾನೂನು ವ್ಯವಸ್ಥೆಗೆ ಗೌರವ ಇರುವುದರಿಂದ‌ ಟ್ವೀಟ್ ಡಿಲೀಟ್ ಮಾಡಿದೆ. ಆನಂತರ ನಾನು ಪರಿಶೀಲಿಸಿ ಹಾಕಬೇಕಿತ್ತೇನೋ ಎಂದು ಅದನ್ನು ರೀ ಟ್ವೀಟ್ ಮಾಡಿರುತ್ತೇನೆ. ಇಒ ವಿಚಾರದಲ್ಲಿ ನನ್ನನ್ನು ಎ1 ಹಾಗೂ ಆ ವೆಬ್ ಮಾಧ್ಯದವರನ್ನು ಎ2 ಮಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಕುಟುಂಬದವರು ಹಾಗೂ ಮಾಧ್ಯಮದವರು ನನ್ನನ್ನು ಸಂಪರ್ಕಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಪಹಣಿ ಪ್ರಿಂಟ್ ತೆಗದುಕೊಡುತ್ತೇನೆ. ರಾಜಕಾರಣಕ್ಕಾಗಿ ರೈತರ ಭೂಮಿಯನ್ನು ವಕ್ಫ್ ಮಂಡಳಿಗೆ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next