Advertisement

Assembly Session: ಡಿ. 9ರಿಂದ 20ರ ವರೆಗೆ ಚಳಿಗಾಲ ಅಧಿವೇಶನ?

12:54 AM Oct 19, 2024 | Team Udayavani |

ಬೆಳಗಾವಿ: ಈ ಬಾರಿಯ ಚಳಿಗಾಲ ಅಧಿವೇಶನವನ್ನು ಡಿ. 9ರಿಂದ 20ರ ವರೆಗೆ ಸುವರ್ಣ ವಿಧಾನಸೌಧದಲ್ಲಿ ನಡೆಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದೇವೆ. ಸಚಿವ ಸಂಪುಟದಲ್ಲಿ ಅಂತಿಮ ದಿನಾಂಕ ಪ್ರಕಟವಾಗಲಿದೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ದಿನಾಂಕ ಘೋಷಿಸಲಿದ್ದಾರೆ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್‌ ಹಾಗೂ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಚಳಿಗಾಲ ಅಧಿ ವೇಶನ ಹಿನ್ನೆಲೆಯಲ್ಲಿ ಶುಕ್ರವಾರ ಸುವರ್ಣ ವಿಧಾನಸೌಧ ಪರಿಶೀಲನೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಾಜು ದಿನಾಂಕದಂತೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಈಗಿನಿಂದಲೇ ಸಿದ್ಧತೆ ಮಾಡಿಕೊಂಡರೆ ಯಾವುದೇ ಅಡಚಣೆ ಬರಲಾರದು.

ಈ ಬಾರಿಯೂ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ 4 ದಿನಗಳ ಚರ್ಚೆಗೆ ಅವಕಾಶ ನೀಡಲಾಗುವುದು. ಇದಕ್ಕಾಗಿ ಹೆಚ್ಚಿನ ಸಮಯ ಮೀಸಲಿಡಲಾಗುವುದು ಎಂದರು.

ಶಾಸಕರ ಭವನ ನಿರ್ಮಾಣಕ್ಕೆ ಯತ್ನ: ಹೊರಟ್ಟಿ
ಚಳಿಗಾಲ ಅಧಿವೇಶನ ವೇಳೆ ಪ್ರತೀ ವರ್ಷ ವಸತಿಗಾಗಿ ಸುಮಾರು 6 ಕೋಟಿ ರೂ. ವೆಚ್ಚವಾಗುತ್ತಿದೆ. ಈ ವೆಚ್ಚವನ್ನು ತಗ್ಗಿಸಲು ಶಾಸಕ ಭವನ ನಿರ್ಮಿಸುವುದು ಅಗತ್ಯವಿದೆ. ಹೀಗಾಗಿ ಶಾಸಕರ ಭವನ ನಿರ್ಮಾಣಕ್ಕೆ ಪ್ರಯತ್ನ ನಡೆಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

Advertisement

ಬೆಂಗಳೂರಿನ ವಿಧಾನಸೌಧ ಮತ್ತು ಬೆಳಗಾವಿಯ ಸುವರ್ಣ ವಿಧಾನಸೌಧದ ಗೋಪುರಗಳ ಮೇಲೆ ಇರುವ ರಾಷ್ಟ್ರ ಲಾಂಛನದಡಿ “ಸತ್ಯಮೇವ ಜಯತೆ’ ಎಂದು ಬರೆದಿಲ್ಲ ಎಂಬುದು ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲಿಸಿ ಬರೆಸಲಾಗುವುದು.
– ಯು.ಟಿ. ಖಾದರ್‌, ವಿಧಾನ ಸಭಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next