Advertisement

ದಿಲ್ಲಿ ಮೆಟ್ರೋ ಲೈನ್‌ ನಲ್ಲಿ ತಾಂತ್ರಿಕ ಅಡಚಣೆ; ಪ್ರಯಾಣಿಕರ ಪರದಾಟ

10:01 AM Jun 07, 2019 | Team Udayavani |

ಹೊಸದಿಲ್ಲಿ : ದಿಲ್ಲಿ ಮೆಟ್ರೋ ವಯೋಲೆಟ್‌ ಲೈನ್‌ ನಲ್ಲಿ ಇಂದು ಗುರುವಾರ ಬೆಳಗ್ಗೆ ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡ ಕಾರಣ ಸುಮಾರು ಅರ್ಧ ತಾಸು ಮೆಟ್ರೋ ಸೇವೆ ಬಾಧಿತವಾಗಿ ನಿತ್ಯದ ಪ್ರಯಾಣಿಕರು ಪರದಾಡುವಂತಾಯಿತು.

Advertisement

ವಯೋಲೆಟ್‌ ಮೆಟ್ರೋ ಲೈನ್‌ ದಿಲ್ಲಿಯ ಕಶ್‌ಮೇರ್‌ ಗೇಟ್‌ ಸ್ಟೇಶನನ್ನು ಫ‌ರೀದಾಬಾದಿನ ರಾಜಾ ನಗರ ಸಿಂಗ್‌ ಸ್ಟೇಶನ್‌ ಜತೆಗೆ ಸಂಪರ್ಕಿಸುತ್ತದೆ.

ನೆಹರೂ ಪ್ಲೇಸ್‌ ಮತ್ತು ಬಾದರ್‌ಪುರ ಸ್ಟೇಶನ್‌ ನಡುವೆ ಇಂದು ಬೆಳಗ್ಗೆ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತು. 9.30ರ ಸುಮಾರಿಗೆ ವಿಳಂಬ ಉಂಟಾಯಿತು.

ಹಾಗಿದ್ದರೂ ಬೇರೆಲ್ಲ ಲೈನುಗಳಲ್ಲಿ ಮೆಟ್ರೋ ಸೇವೆ ಅಬಾಧಿತವಾಗಿತ್ತು; ಅರ್ಧ ತಾಸಿನ ವಿಳಂಬದ ಬಳಿಕ ವಯೋಲೆಟ್‌ ಲೈನಿನ ಸೇವೆ ಮಾಮೂಲಿಗೆ ಮರಳಿತು ಎಂದು ಹಿರಿಯ ಡಿಎಂಆರ್‌ಸಿ ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next