Advertisement

“ಸೇವಾ ಮನೋಭಾವವೇ ಸಾಮಾಜಿಕ ಪರಿವರ್ತನೆ’

07:30 PM Sep 26, 2021 | Team Udayavani |

ಬೆಳ್ತಂಗಡಿ:ಸಿಕ್ಕ ಹುದ್ದೆಯಲ್ಲಿ ಕೀಳರಿಮೆ ತೋರದೆ ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ಪ್ರಾಮಾಣಿಕವಾಗಿ ದುಡಿದರೆ ಅಪ್ರತಿಮ ಸ್ಥಾನ ಲಭಿಸುತ್ತದೆ ಎಂದು ಬೆಂಗಳೂರು ವಿಭಾಗದ ಸಿಐಡಿ ಎಸ್ಪಿ ರವಿ ಡಿ.ಚೆನ್ನಣ್ಣನವರ್‌ ಹೇಳಿದರು.

Advertisement

ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್‌ ವತಿಯಿಂದ 497ನೇ ಸೇವಾ ಯೋಜನೆಯಾಗಿ ಉಜಿರೆ ಗ್ರಾಮದ ಇಚ್ಚಿಲದ ಕುಶಲಾ ಮತ್ತು ಮಕ್ಕಳಿಗೆ 7.32 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ 33ನೇ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಫಲಾನುಭವಿಗೆ ಕೀ ಹಸ್ತಾಂತರಿಸಿ ಮಾತನಾಡಿದರು.

ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್‌ ಬಿ. ಸುವರ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೂಲಿ ಕಾರ್ಮಿಕರು ತಾವೇ ಸ್ವತಃ ಮನೆ ನಿರ್ಮಿಸಿ ನಿರ್ಗತಿಕರಿಗೆ ಹಸ್ತಾಂತರಿ ಸುತ್ತಿರುವುದು ಅತ್ಯಂತ ಶ್ರೇಷ್ಠ ಕಾರ್ಯ ಎಂದರು.

ಟ್ರಸ್ಟ್‌ನ ಸಂಸ್ಥಾಪಕ ದೀಪಕ್‌ ಜಿ.ಬೆಳ್ತಂಗಡಿ ಅಧ್ಯಕ್ಷತೆ ವಹಿಸಿದ್ದರು. ಉಜಿರೆ ಸಾನ್ನಿಧ್ಯಸೇವಾ ಕೇಂದ್ರದ ಆಡಳಿತಾಧಿಕಾರಿ ಡಾ| ವಸಂತಕುಮಾರ್‌ ಶೆಟ್ಟಿ, ಕಟ್ಟೆಮಾರ್‌ ಶ್ರೀ ಕ್ಷೇತ್ರ ಮಂತ್ರದೇವತೆ ಸಾನ್ನಿಧ್ಯದ ಆಡಳಿತ ಮುಖ್ಯಸ್ಥ ಮನೋಜ್‌ ಕಟ್ಟೆಮಾರ್‌, ಶಿರಹಟ್ಟಿಯ ಸಾವಯವ ಕೃಷಿಕ ಮಹೇಶ್‌ ಛಬ್ಬಿ, ಖಾಸಗಿ ವಾಹಿನಿ ನಿರೂಪಕಿ ದೀಪಿಕಾ ಬಿ., ಉದ್ಯಮಿ ಸೀತಾರಾಮ ಶೆಟ್ಟಿ, ತಾ.ಪಂ. ಸ್ಥಾಯೀ ಸಮಿತಿ ಮಾಜಿ ಅಧ್ಯಕ್ಷ ಶಶಿಧರ ಕಲ್ಮಂಜ, ತಾಲೂಕು ಆಸ್ಪತ್ರೆ ಕಾರ್ಯಕ್ರಮ ಸಂಯೋಜಕ ಅಜಯ್‌, ಉದ್ಯಮಿ ಹೇಮಂತ ಗೌಡ, ಉಜಿರೆ ಗ್ರಾ.ಪಂ. ಸದಸ್ಯ ಗುರುಪ್ರಸಾದ್‌ ಕೋಟ್ಯಾನ್‌, ರಾಜಕೇಸರಿ ಟ್ರಸ್ಟ್‌ ಜಿಲ್ಲಾಧ್ಯಕ್ಷ ಅಶೋಕ್‌ ಪೂಜಾರಿ, ರಾಜ ಕೇಸರಿ ತಾಲೂಕು ಅಧ್ಯಕ್ಷ ಕಾರ್ತಿಕ್‌, ಬಂಟ್ವಾಳ ವಿಭಾಗದ ಅಧ್ಯಕ್ಷ ನವೀನ್‌ ಮಾಣಿ, ಪುತ್ತೂರು ವಿಭಾಗದ ಅಧ್ಯಕ್ಷ ಸಮಿತ್‌ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ಹೊಸ ಶಾಲಾ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Advertisement

ನಾಗೇಶ್‌ ನೆರಿಯ ಸ್ವಾಗತಿಸಿ, ಲೋಹಿತ್‌ ಪ್ರಸ್ತಾವಿಸಿದರು. ಸುರೇಶ್‌ ಎಸ್‌. ನಾಲ್ಕೂರು ಹಾಗೂ ಲೋಹಿತ್‌ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿದರು.

ಸಾಧಕರಿಗೆ ಸಮ್ಮಾನ
ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸರಕಾರಿ ಹಿ.ಪ್ರಾ.ಶಾಲೆ ಕಟ್ಟದಬೈಲಿನ ಶಿಕ್ಷಕ ಎಡ್ವರ್ಡ್‌ ಡಿ’ಸೋಜಾ, 2019-20 ನೇ ಸಾಲಿನ ಮುಖ್ಯಮಂತ್ರಿ ಪದಕ ಪಡೆದ ಪೊಲೀಸ್‌ ಇಲಾಖೆಯ ವೆಂಕಟೇಶ ನಾಯಕ್‌ ಅವರನ್ನು ಟ್ರಸ್ಟ್‌ ವತಿಯಿಂದ ಸಮ್ಮಾನಿಸಲಾಯಿತು.

ದರ್ಪ ತೋರದಿರಿ
ಬೆಂಗಳೂರು ವಿಭಾಗದ ಸಿಐಡಿ ಎಸ್ಪಿ ರವಿ ಡಿ.ಚೆನ್ನಣ್ಣನವರ್‌ ಮಾತನಾಡಿ, ಜನರಿಗೆ ಕೊರತೆಗಳಿಲ್ಲದ ಭಯಮುಕ್ತ ವಾತಾವರಣ ಇರಬೇಕು. ಸರಕಾರಿ ಯೋಜನೆ ಜನರ ಬಳಿ ತಲುಪಿಸುವ ಕಾರ್ಯ ಅಧಿಕಾರಿಗಳಿಂದಾಗಬೇಕು. ನೊಂದ ವ್ಯಕ್ತಿಗಳು ಬಂದಾಗ ದರ್ಪ ತೋರಿ ಅವರ ಶಾಪಕ್ಕೆ ಗುರಿಯಾಗುವ ಕೆಲಸ ಮಾಡದಿರಿ ಎಂದರು.

ಟ್ರಸ್ಟ್‌ನ ಸೇವೆ
ಕೋವಿಡ್ ಸಂದರ್ಭದಲ್ಲಿ 641 ಕಿಟ್‌ ವಿತರಣೆ. ರೋಗಿಗಳಿಗೆ ಆಸ್ಪತ್ರೆಗೆ ಕರೆದೊಯ್ಯಲು ವಾಹನ ವ್ಯವಸ್ಥೆ. ಮೃತರಾದ 42 ಮಂದಿಗೆ ಶವ ಸಂಸ್ಕಾರ .ಮುಕ್ತಿಧಾಮಕ್ಕೆ ಉಚಿತ ಕಟ್ಟಿಗೆ ವ್ಯವಸ್ಥೆ. ಎಂಡೋಸಲ್ಫಾನ್‌ ಪೀಡಿತ ಅಂಗವಿಕಲರಿಗೆ ವೀಲ್‌ ಚೇರ್‌ ವಿತರಣೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next