ಬೆಂಗಳೂರು: ಅಕ್ಷಯಪಾತ್ರ ಪ್ರತಿಷ್ಠಾನವು ಆರಂಭಿಸಿರುವ ಆಹಾರಪರಿಹಾರ ಕೇಂದ್ರದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಆಹಾರ ಸಾಮಗ್ರಿಗಳನ್ನು ಹಾಗೂ ಆಹಾರ ಪಟ್ಟಣಗಳನ್ನು ಸಿದ್ಧಪಡಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಆಹಾರ ಪರಿಹಾರ ಕೇಂದ್ರದ ಮೂಲಕ ಪ್ರತಿಷ್ಠಾನವು ಸಾವಿರಬಿಸಿಯೂಟವನ್ನು ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ,ಕಾರ್ಮಿಕರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ನೀಡುತ್ತಿದೆ.ಹಾಗೆಯೇ ನಿರಂತರ ಹಾಗೆಯೇ ಕೊರೊನಾ ಸಾಂಕ್ರಮಿಕ ಮಧ್ಯೆಸಾರ್ವಜನಿಕರ ಸುರಕ್ಷತೆಗೆ ಕೆಲಸ ಮಾಡುತ್ತಿರುವ ಪೊಲೀಸ್ ಸಿಬ್ಬಂದಿಗೂಪ್ರತಿಷ್ಠಾನವು ನೆರವು ನೀಡುತ್ತಿದೆ.
ಈ ಸಂಬಂಧವಾಗಿ, ಬೆಂಗಳೂರು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಪ್ರತಿದಿನ ಬೆಳಗ್ಗೆಯಿಂದ ಸಂಜೆಯ ವರೆಗೆಆಹಾರದ ಪೊಟ್ಟಣಗಳನ್ನು ಹಾಗೂ ಆಹಾರ ಸಾಮಗ್ರಿಗಳನ್ನುಕಟ್ಟುತ್ತಿದ್ದಾರೆ.
ಇದರ ಜತೆಗೆ ಮಾನವ ಹಕ್ಕುಗಳ ಕಾರ್ಯಕರ್ತರ ಜತೆಹಾಗೂ ಕರ್ನಾಟಕ ಕಾನೂನು ನೆರವು ಸಂಸ್ಥೆಯ ಜತೆ ಸೇವೆಯನ್ನುಸಲ್ಲಿಸುತ್ತಿದ್ದಾರೆ ಬೆಂವಿವಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಸತೀಶ್ ಗೌಡ ತಿಳಿಸಿದರು.
ಅಕ್ಷಯಪಾತ್ರ ಪ್ರತಿಷ್ಠಾನವು ಪ್ರಾರಂಭಿಸುವ ಆಹಾರ ಪರಿಹಾರಕೇಂದ್ರಗಳಲ್ಲಿ ಬಿಸಿಯೂಟ ತಯಾರಿಸಲು ಹಾಗೂ ತಿಂಡಿ ಪೊಟ್ಟಣಗಳನ್ನುಸಿದ್ಧಪಡಿಸಲು ಬೆಂಗಳೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾಯೋಜನೆಯ ಸ್ವಯಂಸೇವಕರು ಮುಂದೆ ಬಂದಿರುವುದುಶ್ಲಾಘನೀಯ ಎಂದು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್ ಹೇಳಿದರು.