Advertisement

ರೋಟರಿ ಕ್ಲಬ್‌ನಿಂದ ಸೇವಾ ಮನೋಭಾವ: ಸಮೀರ್‌ ಹರ್ಯಾನಿ

09:35 AM Jul 04, 2017 | |

ತಿಪಟೂರು: ಶತಮಾನೋತ್ಸವ ಸಮಾರಂಭ ಆಚರಿಸಿರುವ ರೋಟರಿ ಫೌಂಡೇಶನ್‌ ಅಂತಾರಾಷ್ಟ್ರ ಮಟ್ಟದಲ್ಲಿ ಹೆಸರು
ಪಡೆದು ಪ್ರಪಂಚದಲ್ಲಿಯೇ ಮೊದಲ ಸ್ಥಾನಗಳಿಸಿ ವಿಶ್ವಮಾನ್ಯತೆ ಪಡೆದಿದೆ ಎಂದು ರೋಟರಿ ಕ್ಲಬ್‌ನ ಜಿಲ್ಲಾ ನಾಮಿನಿ ಗೌರ್ನರ್‌ ಡಾ.ಸಮೀರ್‌ ಹರ್ಯಾನಿ ತಿಳಿಸಿದರು.

Advertisement

ನಗರದ ಸೀತಾರಾಮಯ್ಯ ಶತಮಾನೋತ್ಸವ ಭವನದಲ್ಲಿ ನಡೆದ ತಿಪಟೂರು ರೋಟರಿ ಕ್ಲಬ್‌ನ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.  ಜನಪರ ಸೇವೆ ಮಾಡಲೆಂದು ಅಸ್ತಿತ್ವದಲ್ಲಿರುವ ರೋಟರಿ
ಫೌಂಡೇಶನ್‌ 100 ವರ್ಷಗಳನ್ನು ಪೂರೈಸಿದ್ದು ಸದಸ್ಯರು ಹೆಚ್ಚಿನ ಸಹಕಾರ ನೀಡುವ ಮುಖಾಂತರ ಸಮಾಜಕ್ಕೆ ಒಳ್ಳೆಯ ಕಾರ್ಯಗಳನ್ನು ಮಾಡಲು ಮುಂದಾಗಬೇಕಿದೆ ಎಂದು ಹೇಳಿದರು.

ರೋಟರಿ ಕ್ಲಬ್‌ನ ಬೆಳವಣಿಗೆ ದೃಷ್ಟಿಯಿಂದ ಸೇವಾ ಮನೋಭಾವ ಹೊಂದಿರುವ ಮಹಿಳೆಯರು ಹಾಗೂ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಿ ಸೇವಾ ಕಾರ್ಯದಲ್ಲಿ ಕ್ಲಬ್‌ ಜೊತೆ ಸೇರಿಸಿಕೊಳ್ಳುವ ಅವಶ್ಯಕತೆಯಿದೆ. ಹೀಗಾಗಿ ಕ್ಲಬ್‌ನ ಸದಸ್ಯತ್ವ ಪಡೆದುಕೊಳ್ಳಲು ಸಹಕರಿಸಬೇಕಿದೆ. ದೇಶದಲ್ಲಿ ಪೋಲಿಯೋ ನಿವಾರಣೆಗಾಗಿ ರೋಟರಿ ಕ್ಲಬ್‌ ಇಲ್ಲಿಯವರೆಗೆ 
ಸರ್ಕಾರದೊಂದಿಗೆ ಕೈಜೋಡಿಸಿ ಸುಮಾರು 10 ಸಾವಿರ ಕೋಟಿ ರೂ., ಸಹಕಾರ ನೀಡುವ ಮುಖಾಂತರ ಸಮಾಜಕ್ಕೆ
ಮರೆಯಲಾರದ ಕೊಡುಗೆ ನೀಡಿದೆ ಎಂದು ತಿಳಿಸಿದರು.

ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷೆ ವಿಜಯಕುಮಾರಿ, ಸೆಂಟಿನಿಯಲ್‌ ಡೈಮಂಡ್‌ ಪ್ರಶಸ್ತಿ ಸೇರಿದಂತೆ 7ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ತಿಪಟೂರು ರೋಟರಿ ಕ್ಲಬ್‌ ತನ್ನ ಮುಡಿಗೇರಿಸಿಕೊಂಡಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ತಿಳಿಸಿದರು.

ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಕ್ಲಬ್‌ ಅಧ್ಯಕ್ಷ ಟಿ.ಎನ್‌.ಅರುಣ್‌ಕುಮಾರ್‌, ಸಮಾಜದಲ್ಲಿ ರೋಟರಿ ತನ್ನದೇ ಆದ ಸ್ಥಾನಮಾನಗಳಿಸಿ ಸಮಾಜಮುಖೀ ಕಾರ್ಯಗಳನ್ನು ಮಾಡುತ್ತಿದೆ. ಅದೇ ರೀತಿ ತಾನೂ ನಿರ್ದಿಷ್ಟ ಗುರಿ ಹಾಗೂ ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದ್ದೇನೆಂದರು. ನೂತನ ಕಾರ್ಯದರ್ಶಿ ಲಕ್ಷ್ಮಣಪ್ಪ ಮಾತನಾಡಿ, ರೋಟರಿ ಸಂಸ್ಥೆ ಸಮಾಜ ಸೇವೆ ಜೊತೆಗೆ ವಿಶ್ವಶಾಂತಿ ಕಾಪಾಡುವ ಸಲುವಾಗಿ  ಅಸ್ತಿತ್ವಕ್ಕೆ ಬಂದಿದೆ. 1907ರಲ್ಲಿ ಚಿಕಾಗೋದಲ್ಲಿ ಪ್ರಾರಂಭವಾದ ರೋಟರಿ ಕ್ಲಬ್‌ ಈಗ ವಿಶ್ವದ ನಂ.1 ಸ್ಥಾನದಲಿದೆ ಎಂದು  ನುಡಿದರು. ಡಾ.ಸುಬ್ಬುರಾವ್‌, ಡಾ.ಎಂ.ಸಿ.ನಾಗರಾಜು, ಡಾ. ರಮೇಶ್‌ಬಾಬು ಮತ್ತಿತರರನ್ನು ಸನ್ಮಾನಿಸಲಾಯಿತು. 
ಬೆಂಗಳೂರಿನ ಹೈ ಗ್ರೌಂಡ್ಸ್‌ ಅಧ್ಯಕ್ಷ ಜಿ.ಎಸ್‌.ಬಸವರಾಜು, ರೋಟರಿ ಕ್ಲಬ್‌ನ ಮಾಜಿ ಕಾರ್ಯದರ್ಶಿ ಎಂ.ಅಪ್ಪೇಗೌಡ,
ರೊಟೇರಿಯನ್‌ಗಳಾದ ಶಿವಕುಮಾರ್‌ ಮತ್ತಿತರರಿದ್ದರು.

Advertisement

ಪ್ರಸ್ತುತ ಸಮಾಜಮುಖೀ ಕಾರ್ಯಕ್ರಮಗಳನ್ನು ಮಾಡುತ್ತಿರುವ ರೋಟರಿ ಕ್ಲಬ್‌ ಪ್ರಪಂಚದಲ್ಲಿ 12ಲಕ್ಷ ಸದಸ್ಯರನ್ನು
ಹೊಂದಿದೆ. ಸೇವೆ ಜೊತೆಗೆ ಪ್ರತಿಯೊಬ್ಬರೂ ಒಂದೊಂದು ಸಸಿ ನೆಡುವ ಮುಖಾಂತರ ಪರಿಸರ ಸಂರಕ್ಷಿಸಬೇಕು. ಅದರ ಅನ್ವಯ ತುಮಕೂರು ಜಿಲ್ಲೆಯಲ್ಲಿಯೇ 2ಲಕ್ಷ ಸಸಿ ನೆಡುವ ಕಾರ್ಯವನ್ನು ಪ್ರಾರಂಭಿಸಿದ್ದು ಎಲ್ಲರ ಸಹಕಾರ ಅಗತ್ಯವಿದೆ.
ಡಾ.ಸಮೀರ್‌ ಹರ್ಯಾನಿ, ರೋಟರಿ ಕ್ಲಬ್‌ ಜಿಲ್ಲಾ ನಾಮಿನಿ ಗೌರ್ನರ್‌ 

Advertisement

Udayavani is now on Telegram. Click here to join our channel and stay updated with the latest news.

Next