Advertisement

ಫ್ರೆಂಚ್‌ ಓಪನ್‌ ಟೆನಿಸ್‌: ಸೆರೆನಾ ವಿಲಿಯಮ್ಸ್‌ ಆಟ ಅನುಮಾನ

06:35 AM May 10, 2018 | Team Udayavani |

ಪ್ಯಾರಿಸ್‌: ಮಾಜಿ ನಂಬರ್‌ ವನ್‌ ಆಟಗಾರ್ತಿ, 23 ಗ್ರ್ಯಾನ್‌ಸ್ಲಾಮ್‌ಗಳ ಒಡತಿ ಅಮೆರಿಕದ ಸೆರೆನಾ ವಿಲಿಯಮ್ಸ್‌ ಈ ತಿಂಗಳ ಅಂತ್ಯದಲ್ಲಿ ಆರಂಭವಾಗಲಿರುವ ಪ್ರತಿಷ್ಠಿತ ಫ್ರೆಂಚ್‌ ಓಪನ್‌ ಟೆನಿಸ್‌ ಪಂದ್ಯಾವಳಿಯಿಂದ ದೂರ ಸರಿಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. 

Advertisement

ಅವರಿನ್ನೂ ಪೂರ್ತಿ ಫಿಟ್‌ನೆಸ್‌ಗೆ ಮರಳದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.ಮೇ 14ರಿಂದ ರೋಮ್‌ನಲ್ಲಿ ಆರಂಭವಾಗಲಿರುವ “ಇಟೆಲಿಯನ್‌ ಓಪನ್‌’ ಕೂಟದಿಂದ ಈಗಾಗಲೇ ಹಿಂದೆ ಸರಿದಿರುವುದರಿಂದ ಫ್ರೆಂಚ್‌ ಓಪನ್‌ನಲ್ಲೂ ಸೆರೆನಾ ವಿಲಿಯಮ್ಸ್‌ ಆಡುವ ಸಾಧ್ಯತೆ ಇಲ್ಲ ಎಂಬುದು ಟೆನಿಸ್‌ ವಲಯದಲ್ಲಿ ಹರಿದಾಡುತ್ತಿರುವ ಸುದ್ದಿ. ಆದರೆ ಇದಿನ್ನೂ ಅಧಿಕೃತಗೊಂಡಿಲ್ಲ.

ರೋಮ್‌ ಚಾಂಪಿಯನ್‌ಶಿಪ್‌ ಮೇ 14ರಿಂದ 20ರ ತನಕ ನಡೆಯಲಿದ್ದು, ಫ್ರೆಂಚ್‌ ಓಪನ್‌ ಮೇ 27ರಿಂದ ಮೊದಲ್ಗೊಳ್ಳಲಿದೆ. ಸೆರೆನಾ ರೋಮ್‌ನಲ್ಲಿ 4 ಸಲ ಚಾಂಪಿಯನ್‌ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next