Advertisement

ಮಗು ಹೆತ್ತು ನಾಲ್ಕೇ ತಿಂಗಳಲ್ಲಿ ಸೆರೆನಾ ಮತ್ತೆ ಟೆನಿಸ್‌ ಅಂಗಳಕ್ಕೆ?

08:51 AM Dec 21, 2017 | Team Udayavani |

ನ್ಯೂಯಾರ್ಕ್‌: ಮಹಿಳಾ ಟೆನಿಸ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ್ತಿಯರಲ್ಲೊಬ್ಬರಾದ ಸೆರೆನಾ ವಿಲಿಯಮ್ಸ್‌ ಮಗು ಹೆತ್ತ ನಾಲ್ಕೇ ತಿಂಗಳಿಗೆ ಮತ್ತೆ ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ. 

Advertisement

ಮತ್ತೆ ಮೈದಾನಕ್ಕಿಳಿಯಲು ಕಠಿನ ಶ್ರಮ ಪಡುತ್ತಿರುವ ಸೆರೆನಾ, ಮುಂದಿನ ಜನವರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ನಲ್ಲಿ ಆಡ ಲಿರುವುದಾಗಿ ಸಂಘಟಕರೇ ಈ ಹಿಂದೆ ತಿಳಿಸಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಸೆರೆನಾ ಟೆನಿಸ್‌ ಅಂಕಣದ ಚಿತ್ರವೊಂದನ್ನು ಪ್ರಕಟಿಸುವ ಮೂಲಕ ಆಡುವ ಸುಳಿವನ್ನೂ ನೀಡಿದ್ದು, ಟೆನಿಸ್‌ ಅಭಿಮಾನಿಗಳು ಖುಷ್‌ ಆಗಿದ್ದಾರೆ.

ಮಹಿಳೆಯರಲ್ಲೇ ಅತೀ ಹೆಚ್ಚು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಸೆರೆನಾ, ಕಳೆದ ವರ್ಷ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಗರ್ಭಿಣಿಯಾಗಿದ್ದಾಗಲೇ ಟೆನಿಸ್‌ ಆಡಿ, ಪ್ರಶಸ್ತಿ ಗೆದ್ದು ಎಲ್ಲರನ್ನೂ ನಿಬ್ಬೆರಗಾಗಿಸಿದ್ದರು. 

ಅನಂತರ ವಿಶ್ರಾಂತಿಗೆ ತೆರಳಿದ್ದ ಆವೆಮಣ್ಣು ಅಂಗಳದ ಒಡತಿ ಸೆರೆನಾ ವಿಲಿಯಮ್ಸ್‌ ಮತ್ತೀಗ ಟೆನಿಸ್‌ ಅಂಗಳಕ್ಕೆ ಕಾಲಿಡುವ ಉತ್ಸಾಹದಲ್ಲಿರುವುದಾಗಿ ಕ್ರೀಡಾ ವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next