Advertisement

SEP: ಚರ್ಚೆಗೆ ಬಿಜೆಪಿ ಪಟ್ಟು

11:38 PM Dec 06, 2023 | Team Udayavani |

ಬೆಳಗಾವಿ: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಬದಲಿಗೆ ರಾಜ್ಯ ಶಿಕ್ಷಣ ನೀತಿ ರೂಪಿಸಲು ಮುಂದಾದ ಸರಕಾರದ ನಡೆ ಮೇಲ್ಮನೆಯಲ್ಲಿ ಬುಧವಾರ ಪ್ರತಿಧ್ವನಿಸಿತು. ನಿಯಮ 59ರಡಿ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟುಹಿಡಿದ ವಿಪಕ್ಷ ಬಿಜೆಪಿ, ಈ ಸಂಬಂಧ ಬಾವಿಗಿಳಿದು ಪ್ರತಿಭಟನೆ ನಡೆಸಿತು.

Advertisement

ಎನ್‌ಇಪಿ ಹಿಂಪಡೆಯಲು ಮುಂದಾದ ಸರಕಾರದ ಕ್ರಮವನ್ನು ಖಂಡಿಸಿದ ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಈ ನಡೆಯಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಲಿದೆ. ಸಮಸ್ಯೆಯ ಗಂಭೀರತೆ ಪರಿಗಣಿಸಿ, ನಿಲುವಳಿ ಸೂಚನೆಗೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದರು.

ನಿಯಮ 59ರಡಿ ಈ ಸಂಬಂಧ ಚರ್ಚೆಗೆ ಅನುಮತಿ ನೀಡುವಂತೆ ಮನವಿ ಮಾಡಿದರು. ಆಗ, ಆಡಳಿತ ಪಕ್ಷದ ಸದಸ್ಯರು, ಇದೇ ನಿಯಮದಡಿ ಚರ್ಚೆಗೆ ಅನುಮತಿ ನೀಡುವಂತೆ ಹೇಳುವುದು ಸರಿ ಅಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವಿಷಯ ಗಂಭೀರವಾಗಿದೆ. ಇದನ್ನು ನಿಯಮ 59ರಡಿಯಲ್ಲೇ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟುಹಿಡಿದರಲ್ಲದೇ ಬಾವಿಗಿಳಿದು ಪ್ರತಿಭಟನೆಗೆ ಮುಂದಾದರು. ಇದಕ್ಕೆ ಸಭಾ ನಾಯಕ ಬೋಸರಾಜ, ಮುಖ್ಯ ಸಚೇತಕ ಸಲೀಂ ಅಹಮ್ಮದ್‌ ಮತ್ತಿರರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಗದ್ದಲದ ವಾತಾವರಣ ನಿರ್ಮಾಣವಾಯಿತು. ಆಗ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು. ಪುನಃ ಸಭೆ ಆರಂಭವಾಗುತ್ತಿದ್ದಂತೆ ವಿಪಕ್ಷದ ಸದಸ್ಯರು ಬಾವಿಗಿಳಿದು ಪ್ರತಿಭಟನೆಗೆ ಮುಂದಾದರು. ಅಂತಿಮವಾಗಿ ಗುರುವಾರ ನಿಯಮ 330ರಡಿ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಗದ್ದಲಕ್ಕೆ ಸಭಾಪತಿ ತೆರೆ ಎಳೆದರು.

Advertisement

Udayavani is now on Telegram. Click here to join our channel and stay updated with the latest news.

Next