Advertisement

ಮೀಟೂ…ಲೈಂಗಿಕ ದೌರ್ಜನ್ಯ ಆರೋಪ; ಪ್ರಭಾವಿ ಸಿಯೋಲ್ ಮೇಯರ್ ಆತ್ಮಹತ್ಯೆಗೆ ಶರಣು

07:08 PM Jul 10, 2020 | Nagendra Trasi |

ಸಿಯೋಲ್: ಇತ್ತೀಚೆಗೆ ಬಾಲಿವುಡ್, ಸ್ಯಾಂಡಲ್ ವುಡ್, ಟಾಲಿವುಡ್ ಸೇರಿದಂತೆ ಭಾರತದಲ್ಲಿ ಭಾರೀ ಸದ್ದು ಮಾಡಿದ್ದ ಮೀಟೂ ಇದೀಗ ದಕ್ಷಿಣ ಕೊರಿಯಾದಲ್ಲಿ ತನ್ನ ಸರದಿಯನ್ನು ಮುಂದುವರಿಸಿದೆ. ಮೀಟೂ ಆರೋಪದ ಹಿನ್ನೆಲೆಯಲ್ಲಿ ಸಿಯೋಲ್ ಮೇಯರ್, ಮಾನವಹಕ್ಕುಗಳ ಮಾಜಿ ವಕೀಲ ಪಾರ್ಕ್ ವೋನ್ ಸೂನ್ ಆತ್ಮಹತ್ಯೆಗೆ ಶರಣಾಗಿರುವುದಾಗಿ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

Advertisement

ದಕ್ಷಿಣ ಕೊರಿಯಾದಲ್ಲಿಯೂ ಮೀಟೂ ಅಭಿಯಾನ ಭಾರೀ ಪ್ರಮಾಣದಲ್ಲಿ ಸದ್ದು ಮಾಡುತ್ತಿದ್ದು, ದೇಶದ ಪ್ರಭಾವಿ ರಾಜಕೀಯ ವ್ಯಕ್ತಿ ಮೇಲೆಯೇ ಆರೋಪ ಕೇಳಿ ಬಂದಿದೆ. ಅದು ಸಿಯೋಲ್ ನಗರದ ಮೇಯರ್ ಪಾರ್ಕ್ ವೋನ್ ಮೇಲೆ! ವೋನ್ ಅವರ ಮಾಜಿ ಕಾರ್ಯದರ್ಶಿ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದು, ದೂರು ಕೂಡಾ ನೀಡಿರುವುದಾಗಿ ವರದಿ ತಿಳಿಸಿದೆ.

ಪಾರ್ಕ್ ವೋನ್ ಅವರ ಶವ ಬೆಟ್ಟದ ಮೇಲೆ ಪತ್ತೆಯಾಗಿದೆ. ಅಷ್ಟೇ ಅಲ್ಲ ಸೂಸೈಡ್ ನೋಟ್ ಬರೆದಿದ್ದು ಅದರಲ್ಲಿ ಕ್ಷಮೆಯಾಚಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲರಲ್ಲಿಯೂ ನಾನು ಕ್ಷಮೆಯಾಚಿಸುತ್ತೇನೆ, ನನ್ನ ಜೀವನದಲ್ಲಿ ಜತೆಯಾಗಿದ್ದ ಪ್ರತಿಯೊಬ್ಬರಿಗೂ ಅಭಿನಂದನೆಗಳು ಎಂದು ಬರೆದಿರುವ ಡೆತ್ ನೋಟ್ ನಲ್ಲಿ, ನನ್ನ ಅಂತ್ಯಸಂಸ್ಕಾರ ನಡೆಸಿ ನಂತರ ಅದರ ಬೂದಿಯನ್ನು ಪೋಷಕರ ಸಮಾಧಿ ಬಳಿ ಹಾಕುವಂತೆ ಉಲ್ಲೇಖಿಸಿದ್ದಾರೆ. ನನ್ನ ಕುಟುಂಬ ವರ್ಗದ ಬಳಿಯೂ ಕ್ಷಮೆಯಾಚಿಸುತ್ತೇನೆ, ನನ್ನ ತಪ್ಪಿಗೆ ನಾನೊಬ್ಬನೇ ನೋವು ಅನುಭವಿಸುತ್ತೇನೆ ಪ್ರತಿಯೊಬ್ಬರಿಗೂ ಬೈ ಎಂದು ಹೇಳಿ ಸಹಿ ಹಾಕಿದ್ದು, ಈ ನೋಟ್ ನಲ್ಲಿ ಎಲ್ಲಿಯೂ ಆರೋಪದ ಬಗ್ಗೆ ನಮೂದಿಸಿಲ್ಲ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next