ಮುಂಬಯಿ:ರಷ್ಯಾ ಮತ್ತು ಉಕ್ರೇನ್ ನಡುವಿನ ರಾಜತಾಂತ್ರಿಕ ಮಾತುಕತೆಯ ನಂತರ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ವಹಿವಾಟು ಚೇತರಿಕೆ ಹಾಗೂ ಪಂಚರಾಜ್ಯ ಚುನಾವಣೆಯ ಫಲಿತಾಂಶದ ಪರಿಣಾಮ ಗುರುವಾರ (ಮಾರ್ಚ್ 10) ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1,300ಕ್ಕೂ ಅಧಿಕ ಅಂಕ ಏರಿಕೆಯಾಗಿದೆ.
ಇದನ್ನೂ ಓದಿ:ಪಾದಯಾತ್ರೆ ಬೇಡ, ತೀರ್ಥಯಾತ್ರೆ ಮಾಡಿ; ಕಾಂಗ್ರೆಸ್ ಬಗ್ಗೆ ವ್ಯಂಗ್ಯವಾಡಿದ ಸಚಿವ ಅಶೋಕ್
ಮುಂಬಯಿ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 1,500.14 ಅಂಕಗಳಷ್ಟು ಏರಿಕೆಯಾಗಿದ್ದು, 56,242.47 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 411.95 ಅಂಕ ಜಿಗಿತದೊಂದಿಗೆ 16,757.30 ಅಂಕಗಳ ಮಟ್ಟ ತಲುಪಿದೆ.
ನಿಫ್ಟಿ ಆಟೋ, ನಿಫ್ಟಿ ಬ್ಯಾಂಕ್ ಷೇರುಗಳು ಲಾಭಕಂಡಿದೆ. ಟಾಟಾ ಮೋಟಾರ್ಸ್, ಆ್ಯಕ್ಸಿಸ್ ಬ್ಯಾಂಕ್, ಗ್ರಾಸಿಂ ಇಂಡಸ್ಟ್ರೀಸ್, ಮಾರುತಿ ಮತ್ತು ಏಷಿಯನ್ ಪೇಂಟ್ಸ್, ಎಸ್ ಬಿಐ, ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ಲಾಭಗಳಿಸಿದೆ.
ಇಂದಿನ ವಹಿವಾಟಿನಲ್ಲಿ ಟಾಟಾ ಸ್ಟೀಲ್ ಷೇರು ಮಾತ್ರ ನಷ್ಟ ಕಂಡಿದೆ. ಇನ್ನುಳಿದಂತೆ ಹಾಂಗ್ ಕಾಂಗ್, ಟೋಕಿಯೋ ಮತ್ತು ಶಾಂಘೈ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಏರಿಕೆಯೊಂದಿಗೆ ವಹಿವಾಟು ನಡೆಸಿದೆ.