ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿನ ಧನಾತ್ಮಕತೆ ಮತ್ತು ಹೆಚ್ಚಿದ ವಿದೇಶೀ ಬಂಡವಾಳದ ಒಳ ಹರಿವು ಇವೇ ಮೊದಲಾದ ಕಾರಣಗಳಿಗೆ ಮುಂಬಯಿ ಶೇರು ಪೇಟೆ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 200ಕ್ಕೂ ಅಧಿಕ ಅಂಕಗಳ ಜಿಗಿತ ದಾಖಲಿಸಿತು.
ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11,600 ಅಂಕಗಳ ಮನೋಪ್ರಾಬಲ್ಯದ ಮಟ್ಟವನ್ನು ದಾಟಿ ಮುನ್ನುಗ್ಗುವಲ್ಲಿ ಸಫಲವಾಯಿತು.
ಬೆಳಗ್ಗೆ 11.15ರ ಸುಮಾರಿಗೆ ಸೆನ್ಸೆಕ್ಸ್ 66.79 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 38,621.51 ಅಂಕಗಳ ಮಟ್ಟದಲ್ಲೂ, ನಿಫ್ಟಿ 18.30 ಅಂಕಗಳ ಮುನ್ನಡೆಯನ್ನು ಉಳಿಸಿಕೊಂಡು 11,588.30 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ ಎಸ್ ಬ್ಯಾಂಕ್, ಮಾರುತಿ ಸುಜುಕಿ, ಎಸ್‌ಬಿಐ, ರಿಲಯನ್ಸ್, ಟಿಸಿಎಸ್‌ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ವೇದಾಂತ, ಎಚ್‌ಪಿಸಿಎಲ್, ಜೆಎಸ್‌ಡಬ್ಲ್ಯು ಸ್ಟೀಲ್, ಟಾಟಾ ಸ್ಟೀಲ್, ಟಾಟಾ ಮೋಟರ್; ಟಾಪ್ ಲೂಸರ್‌ಗಳು : ಇಂಡಸ್ ಇಂಡ್ ಬ್ಯಾಂಕ್, ಟೈಟಾನ್ ಕಂಪೆನಿ, ಗೇಲ್, ಈಶರ್ ಮೋಟರ್, ಬಜಾಜ್ ಆಟೋ.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 15 ಪೈಸೆಗಳ ಏರಿಕೆಯನ್ನು ದಾಖಲಿಸಿ 69.15 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.