ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಧನಾತ್ಮಕ ಸನ್ನಿವೇಶ ಕಂಡು ಬಂದ ಹೊರತಾಗಿಯೂ ವಹಿವಾಟುದಾರರು ಮತ್ತು ಹೂಡಿಕೆದಾರರು ಎಚ್ಚರಿಕೆ ನಡೆ ತೋರಿದ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 150ಕ್ಕೂ ಅಧಿಕ ಅಂಕಗಳ ಕುಸಿತಕ್ಕೆ ಗುರಿಯಾಯಿತು.
ನಿನ್ನೆ ಬುಧವಾರ ಸೆನ್ಸೆಕ್ಸ್ 66.40 ಅಂಕಗಳ ಏರಿಕೆಯನ್ನೂ ನಿಫ್ಟಿ ಅತ್ಯಲ್ಪ ಏರಿಕೆಯನ್ನೂ ದಾಖಲಿಸಿದ್ದವು.
ಬೆಳಗ್ಗೆ 10.50ರ ಸುಮಾರಿಗೆ ಚೇತರಿಕೆ ಕಂಡ ಸೆನ್ಸೆಕ್ಸ್ 101.10 ಅಂಕಗಳ ಏರಿಕೆಯೊಂದಿಗೆ 39,213.84 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 24 ಅಂಕಗಳ ಏರಿಕೆಯೊಂದಿಗೆ 11,715.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಟಾಪ್ ಲೂಸರ್‌ಗಳ ಪೈಕಿ ಎಸ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಟಿಸಿಎಸ, ಮಾರುತಿ, ಇನ್‌ಫೋಸಿಸ್, ಏಶ್ಯನ್ ಪೇಂಟ್, ಟಾಟಾ ಸ್ಟೀಲ್, ಟಾಟಾ ಮೋಟರ್, ಎಕ್ಸಿಸ್‌ಬ್ಯಾಂಕ್, ಎಚ್‌ಸಿಎಲ್ ಟೆಕ್ ಶೇರುಗಳು ಶೇ.1.43ರ ಇಳಿಕೆಯನ್ನು ಕಂಡವು.
ಭಾರ್ತಿ ಏರ್‌ಟೆಲ್, ಕೋಟಕ್ ಬ್ಯಾಂಕ್, ಕೋಲ್ ಇಂಡಿಯಾ, ಆರ್‌ಐಎಲ್, ಎಲ್ ಆ್ಯಂಡ್ ಟಿ, ಪವರ್ ಗ್ರಿಡ್ ಮತ್ತು ಎಚ್ ಡಿ ಎಫ್ ಸಿ ಶೇರುಗಳು ಶೇ.1.10 ಏರಿಕೆಯನ್ನು ಕಂಡವು.
ಇಂದು ಡಾಲರ್ ಎದುರು ರೂಪಾಯಿ 10 ಪೈಸೆಯ ಏರಿಕೆಯನ್ನು ದಾಖಲಿಸಿ 69.58 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಅಂತಾರಾಷ್ಟ್ರೀಯ ಬ್ರೆಂಟ್ ಕಚ್ಚಾ ತೈಲ ಶೇ.1.29ರಏರಿಕೆಯನ್ನು ಕಂಡು ಬ್ಯಾರಲ್ ಗೆ 62.62 ಡಾಲರ್ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.