ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಧನಾತ್ಮಕ ಸನ್ನಿವೇಶ ತೋರಿ ಬಂದಿರುವುದನ್ನು ಅನಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 135 ಅಂಕಗಳ ಜಿಗಿತವನ್ನು ದಾಖಲಿಸಿ ಹೊಸ ಸಾರ್ವಕಾಲಿಕ ಎತ್ತರದ ಮಟ್ಟವಾಗಿ 34,638.42 ಅಂಕಗಳ ಮಟ್ಟವನ್ನು ತಲುಪಿತು.
ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,690.25 ಅಂಕಗಳ ಮಟ್ಟವನ್ನು ತಲುಪುವ ಮೂಲಕ ಹೊಸ ಸಾರ್ವಕಾಲಿಕದಾಖಲೆಯ ಮಟ್ಟವನ್ನು ಸಾಧಿಸಿತು.
ಏಶ್ಯನ್ ವಲಯದಲ್ಲಿನ ಶೇರು ಮಾರುಕಟ್ಟೆಗಳಲ್ಲಿ ಕಂಡು ಬಂದ ತೇಜಿ ಮುಂಬಯಿ ಶೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿತು. ಭಾರತದ ಐಟಿ ದಿಗ್ಗಜ ಟಿಸಿಎಸ್ ಸಂಸ್ಥೆ ಇಂದು ಪ್ರಕಟಿಸಿದ ಡಿಸೆಂಬರ್ ತ್ತೈಮಾಸಿಕ ಫಲಿತಾಂಶವು ನಿರಾಶೆಗೆ ಕಾರಣವಾಯಿತು.
ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 89.41 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 34,592.90 ಅಂಕಗಳ ಮಟ್ಟದಲ್ಲೂ, ನಿಫ್ಟಿ 24.70 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 24.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಎಚ್ ಡಿ ಎಫ್ ಸಿ, ಮಾರುತಿ ಸುಜುಕಿ, ಟಿಸಿಎಸ್, ಇನ್‌ಫೋಸಿಸ್, ಝೀ ಎಂಟರ್‌ಟೇನ್‌ಮೆಂಟ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದು 11 ಪೈಸೆಯಷ್ಟು ಸುಧಾರಿಸಿದ ವಿದ್ಯಮಾನ ಕೂಡ ಮುಂಬಯಿ ಶೇರು ಪೇಟೆಯಲ್ಲಿ ತೇಜಿಗೆ ಕಾರಣವಾಯಿತು.