ನವದೆಹಲಿ: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಮತ್ತು ರಾಷ್ಟ್ರೀಯ ಸಂವೇದಿ ಸೂಚ್ಯಂಕ ಮಂಗಳವಾರವೂ (ಜುಲೈ 04) ಏರಿಕೆ ಕಾಣುವ ಮೂಲಕ ಸಾರ್ವಕಾಲಿಕ ದಾಖಲೆಯ ಗಡಿ ತಲುಪಿದೆ.
ಇದನ್ನೂ ಓದಿ:Tulu Film ಸರ್ಕಸ್ ಸಕ್ಸಸ್; ರೂಪೇಶ್ ಶೆಟ್ಟಿ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್
ಸಂವೇದಿ ಸೂಚ್ಯಂಕ 65,000 ಅಂಕಗಳ ಗಡಿ ದಾಟಿದ್ದು, ನಿಫ್ಟಿ(NSE) 19 ಸಾವಿರ ಅಂಕಗಳ ಗಡಿ ದಾಟಿ ಸಾರ್ವಕಾಲಿಕ ದಾಖಲೆ ಬರೆದಿದೆ. ಬಾಂಬೆ ಷೇರುಪೇಟೆಯ ಬಿಎಸ್ ಇ 274 ಅಂಕ ಏರಿಕೆಯೊಂದಿಗೆ ಮತ್ತು ನಿಫ್ಟಿ 66 ಅಂಕ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ.
ಷೇರುಪೇಟೆಯ ಸಂವೇದಿ ಸೂಚ್ಯಂಕ 274 ಅಂಕ ಏರಿಕೆಯೊಂದಿಗೆ 65,479.05 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದ್ದು, ಎನ್ ಎಸ್ ಇ ನಿಫ್ಟಿ 66.45 ಅಂಕಗಳ ಏರಿಕೆಯೊಂದಿಗೆ 19,389 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಸಂವೇದಿ ಸೂಚ್ಯಂಕ, ನಿಫ್ಟಿ ಏರಿಕೆಯಿಂದ ಪಿಎಸ್ ಯು ಬ್ಯಾಂಕ್, ಐಟಿ ಸೆಕ್ಟರ್, ಮೀಡಿಯಾ, ಫೈನಾಶ್ಶಿಯಲ್ ಸರ್ವೀಸಸ್ ಷೇರುಗಳು ಲಾಭಗಳಿಸಿವೆ. ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್, ಟೆಕ್ ಮಹೀಂದ್ರಾ, ಸನ್ ಫಾರ್ಮಾ, ಡಾ.ರೆಡ್ಡೀಸ್ ಲ್ಯಾಬೋರೇಟರೀಸ್ ಷೇರು ಲಾಭ ಕಂಡಿದೆ.
ಟೈಟಾನ್, ಸಿಪ್ಲಾ, ಎನ್ ಟಿಪಿಸಿ, ವಿಪ್ರೋ ಮತ್ತು ಟಾಟಾ ಕನ್ಸ್ ಲ್ಟೆನ್ಸಿ ಸರ್ವೀಸಸ್ ಷೇರು ಲಾಭಗಳಿಸಿದ್ದು, ಮತ್ತೊಂದೆಡೆ ಈಚರ್ ಮೋಟಾರ್ಸ್, ಹೀರೋ ಮೋಟಾರ್ ಕಾರ್ಪ್, ಭಾರ್ತಿ ಏರ್ ಟೆಲ್, ರಿಲಯನ್ಸ್ ಇಂಡಸ್ಟ್ರೀಸ್, ಒಎನ್ ಜಿಸಿ, ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ನಷ್ಟ ಕಂಡಿದೆ.