Advertisement

ದಾಖಲೆ ಪ್ರಮಾಣಕ್ಕೆ ಏರಿದ ಸೆನ್ಸೆಕ್ಸ್‌, ನಿಫ್ಟಿ

06:30 AM Dec 27, 2017 | Team Udayavani |

ಮುಂಬೈ: ಬಾಂಬೆ ಷೇರುಪೇಟೆ ಮತ್ತು ನಿಫ್ಟಿ ಮಂಗಳವಾರ ದಾಖಲೆಯ ಮಟ್ಟಕ್ಕೆ ಏರಿಕೆ ಕಂಡಿವೆ. ಇದೇ ಮೊದಲ ಬಾರಿಗೆ ಸೆನ್ಸೆಕ್ಸ್‌ ದಿನಾಂತ್ಯಕ್ಕೆ 34,010.61ರಲ್ಲಿ ಮುಕ್ತಾಯವಾಗಿದೆ. ಅಂದರೆ 70 ಅಂಶ ಏರಿಕೆ ಕಂಡಿವೆ. ಶುಕ್ರವಾರ ಸೂಚ್ಯಂಕ 33,940.30ರಲ್ಲಿ ಮುಕ್ತಾಯವಾಗಿತ್ತು. ನಿಫ್ಟಿ ಸೂಚ್ಯಂಕ 38.50ರಷ್ಟು ಏರಿಕೆ ಕಂಡು 10,531.50ರಲ್ಲಿ ಮುಕ್ತಾಯವಾಗಿತ್ತು.

Advertisement

ಉದ್ಯಮಿ ಅನಿಲ್‌ ಅಂಬಾನಿ ನೇತೃತ್ವದ ಆರ್‌ ಕಾಮ್‌ ತಾನು ಹೊಂದಿರುವ ಸಾಲದ ಪ್ರಮಾಣವನ್ನು 25 ಸಾವಿರ ಕೋಟಿ ರೂ.ಗಳಷ್ಟು ತಗ್ಗಿಸುವ ಬಗ್ಗೆ ಘೋಷಣೆ ಮಾಡಿರುವಂತೆಯೇ ಈ ಬೆಳವಣಿಗೆಯಾಗಿದೆ. ಅದಕ್ಕಾಗಿ ತಾನು ಹೊಂದಿರುವ ಸ್ಪೆಕ್ಟ್ರಂ, ಮೊಬೈಲ್‌ ಟವರ್‌ ಮತ್ತು ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿನ ವಹಿವಾಟನ್ನು ಮಾರುವ ಬಗ್ಗೆ ನಿರ್ಧಾರ ಮಾಡಿದೆ. ಹೀಗಾಗಿ ಆರ್‌ ಕಾಮ್‌ ಷೇರುಗಳ ಬೆಲೆ ಕೂಡ ಮಾರುಕಟ್ಟೆಯಲ್ಲಿ ಗಣನೀಯವಾಗಿ ಹೆಚ್ಚಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next