ಹೊಸದಿಲ್ಲಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಮತ್ತು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು ಹೊಸ ಸಾರ್ವಕಾಲಿಕ ದಾಖಲೆಯ ಎತ್ತರದಲ್ಲಿ ಕೊನೆಗೊಳಿಸಿವೆ.
ಸೆನ್ಸೆಕ್ಸ್ ಇಂದಿನ ದಿನದ ವಹಿವಾಟನ್ನು 88.90 ಅಂಕಗಳ ಏರಿಕೆಯೊಂದಿಗೆ 34,592.39 ಅಂಕಗಳ ಮಟ್ಟದಲ್ಲೂ, ನಿಫ್ಟಿ 30.05 ಅಂಕಗಳ ಏರಿಕೆಯೊಂದಿಗೆ 10,681.25 ಅಂಕಗಳ ಸಾರ್ವಕಾಲಿಕ ಎತ್ತರದ ಮಟ್ಟದಲ್ಲೂ ಕೊನೆಗೊಳಿಸಿದವು.
ಶೇರು ಮಾರುಕಟ್ಟೆಯ ಈ ವಿಕ್ರಮಕ್ಕೆ ಹಣಕಾಸು ಮತ್ತು ಇಂಧನ ರಂಗದ ಶೇರುಗಳು ಕಂಡ ಏರಿಕೆಯೇ ಪ್ರಧಾನ ಕಾರಣವಾಯಿತು.
ಅಂತೆಯೇ ಹೂಡಿಕೆದಾರರು ಈಗಿನ್ನು ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆಗೆ ಮಾರ್ಗದರ್ಶಿಯಾಗಿರುವ ಮಾಸಿಕ ಹಣದುಬ್ಬರ ಅಂಕಿ ಅಂಶಗಳು ಬಿಡುಗಡೆಗೊಳ್ಳುವುದನ್ನೇ ಕಾಯುತ್ತಿದ್ದಾರೆ.
ಮುಂಬಯಿ ಶೇರು ಪೇಟೆಯಲ್ಲಿಂದು 3,070 ಶೇರುಗಳು ವಹಿವಾಟಿಗೆ ಒಳಪಟ್ಟವು; 1,354 ಶೇರುಗಳು ಮುನ್ನಡೆ ಸಾಧಿಸಿದವು; 1,561 ಶೇರುಗಳ ಹಿನ್ನಡೆಗೆ ಗುರಿಯಾದವು;155 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.