Advertisement

ಟಿಕೆಟ್ ಬಿಸಿ: ಕಾಂಗ್ರೆಸ್ ಶಿಬಿರಕ್ಕೆ ಗೈರಾದ ಎಸ್.ಆರ್.ಪಾಟೀಲ್, ಬಿ.ಎಲ್.ಶಂಕರ್, ಜಮೀರ್

01:54 PM Jun 02, 2022 | Team Udayavani |

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯ ಕಾರ್ಯತಂತ್ರ ಹಾಗೂ ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಹೋರಾಟ ಕುರಿತು ರೂಪುರೇಷೆ ಸಿದ್ಧಪಡಿಸಲು ಕಾಂಗ್ರೆಸ್‌ ನ ಎರಡು ದಿನಗಳ ಕಾಲ ಚಿಂತನ -ಮಂಥನ ಶಿಬಿರ ಇಂದು ಬೆಂಗಳೂರು ಹೊರವಲಯದ ರೆಸಾರ್ಟ್ ನಲ್ಲಿ ಆರಂಭವಾಗಿದೆ.

Advertisement

ಆದರೆ ಈ ನವ ಸಂಕಲ್ಪ ಶಿಬಿರಕ್ಕೆ ಹಿರಿಯ ನಾಯಕರುಗಳಾ ಎಸ್‌. ಆರ್. ಪಾಟೀಲ್, ಮುದ್ದಹನುಮೇಗೌಡ, ಬಿ.ಎಲ್.ಶಂಕರ್, ಎಂ.ಆರ್.ಸೀತಾರಾಂ ಜಮೀರ್ ಅಹಮದ್ ಖಾನ್ ಗೈರಾಗಿದ್ದಾರೆ. ವಿಧಾನ ಪರಿಷತ್ ಮತ್ತು ರಾಜ್ಯಸಭೆ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿನ ಅಸಮಾಧಾನ ಇದಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಕಾಂಗ್ರೆಸ್ ನವಸಂಕಲ್ಪ ಶಿಬಿರ: 400 ಜನ ಆಹ್ವಾನಿತರಿಗೆ ಮಾತ್ರ ಅವಕಾಶ

ಎರಡನೇ ಬಾರಿಯೂ ವಿಧಾನ ಪರಿಷತ್ ಟಿಕೆಟ್ ಕೈತಪ್ಪಿದ್ದಕ್ಕೆ ಮುನಿಸಿಕೊಂಡಿರುವ ಕಾಂಗ್ರೆಸ್ ನ ಹಿರಿಯ ನಾಯಕ ಎಸ್.ಆರ್.ಪಾಟೀಲ್ ಶಿಬಿರಕ್ಕೆ ಗೈರು ಹಾಜರಾಗಿದ್ದಾರೆ. ಟಿಕೆಟ್ ಸಿಗದಿದ್ದಕ್ಕೆ ಸಿದ್ದರಾಮಯ್ಯ ಮುಂದೆ ಅಸಮಾಧಾನ ಹೊರಹಾಕಿರುವ ಎಂ.ಆರ್.ಸೀತಾರಾಂ, ರಾಜ್ಯಸಭೆ- ಪರಿಷತ್ ಎರಡೂ ಕಡೆ ಪರಿಗಣಿಸದಿರುವುದಕ್ಕೆ ಮುದ್ದಹನುಮೇಗೌಡ ಬೇಸರ ಹೊಂದಿದ್ದಾರೆ.

ಪಕ್ಷದ ಬೆಳವಣಿಗೆಗಳ ಬಗ್ಗೆ ಅಸಮಾಧಾನ ಹೊಂದಿರುವ ಜಮೀರ್ ಅಹಮದ್ ಖಾನ್ ಕೂಡಾ ಪಕ್ಷದ ಚಿಂತನ ಮಂಥನ ಶಿಬಿರಕ್ಕೆ ಗೈರಾಗಿದ್ದಾರೆ.

Advertisement
Tags :
Advertisement

Udayavani is now on Telegram. Click here to join our channel and stay updated with the latest news.

Next