ಉಡುಪಿ: ಹಿರಿಯ ಪತ್ರಕರ್ತ, ಮಣಿಪಾಲ ಮಾಹೆ ಟ್ರಸ್ಟ್ ಮತ್ತು ಡಾ| ಟಿ.ಎಂ.ಎ. ಫೌಂಡೇಶನ್‌ನ ಟ್ರಸ್ಟಿ , ಮಾಹೆ ಬೋರ್ಡ್ ಆಫ್ ಮ್ಯಾನೇಜ್‌ಮೆಂಟ್‌ನ ಮಾಜಿ ಸದಸ್ಯ ಟಿ.ವಿ.ಆರ್. ಶೆಣೈ (77) ಎ. 17ರಂದು ಮಣಿಪಾಲದಲ್ಲಿ ನಿಧನ ಹೊಂದಿದರು.
‘ದ ವೀಕ್’ ನಿಯತಕಾಲಿಕ ಮತ್ತು ‘ಸಂಡೇ ಮೈಲ್’ ಸಂಪಾದಕರಾಗಿದ್ದ ಅವರು ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ಮಲಯಾಳ ಮನೋರಮಾ ಪತ್ರಿಕೆಯಲ್ಲಿಯೂ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪತ್ರಿಕೆ, ವೆಬ್‌ಸೈಟ್, ನಿಯತಕಾಲಿಕಗಳಲ್ಲಿ ರಾಷ್ಟ್ರ ರಾಜಕೀಯ, ಆರ್ಥಿಕತೆ,
ಸಾಮಾಜಿಕ ಪರಿಣಾಮ ಬೀರುವ ವಿಷಯಗಳು, ಅಂತಾರಾಷ್ಟ್ರೀಯ ವಿಚಾರಗಳು ಮತ್ತು ಪ್ರಸಕ್ತ ವಿದ್ಯಮಾನಗಳ ಕುರಿತು ಬರೆಯುತ್ತಿದ್ದರು.
ಇಂಡಿಯನ್ ಎಕ್ಸ್‌ಪ್ರೆಸ್, ಗಲ್ಫ್ ನ್ಯೂಸ್, ರೆಡಿಫ್.ಕಾಮ್, ನ್ಯೂಸ್ ಟೈಮ್, ಮಾತೃಭೂಮಿ ಮತ್ತು ಇಂಡಿಯಾ ಫಸ್ಟ್ ಫೌಂಡೇಶನ್.ಆರ್ಗ್ ಮೊದಲಾದವುಗಳಲ್ಲಿ ಲೇಖನಗಳು ಮತ್ತು ಅಭಿಪ್ರಾಯಗಳನ್ನು ನೀಡುತ್ತಿದ್ದರು. ಇಂಡಿಯಾ ಫಸ್ಟ್ ಫೌಂಡೇ ಶನ್‌ನ ಬೋರ್ಡ್ ಆಫ್ ಟ್ರಸ್ಟಿಯೂ ಆಗಿದ್ದರು. ಶೆಣೈ 2003ರಲ್ಲಿ ಪದ್ಮ ಭೂಷಣ ಪುರಸ್ಕೃತರಾಗಿದ್ದರು.
ಟಿ.ವಿ.ಆರ್. ಶೆಣೈ ಮೂಲತಃ ಕೇರಳ ರಾಜ್ಯದ ಎರ್ನಾಕುಲಂ ನಿವಾಸಿ, ಕಳೆದ 2-3 ತಿಂಗಳಿನಿಂದ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.