Advertisement

Rahul Gandhi ಪಪ್ಪು ಅಲ್ಲ… : ಅಮೆರಿಕದಲ್ಲಿ ಸ್ಯಾಮ್ ಪಿತ್ರೋಡಾ ಹೇಳಿಕೆ

07:08 PM Sep 09, 2024 | Team Udayavani |

ವಾಷಿಂಗ್ಟನ್: ವಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi) ಅವರು ಪಪ್ಪು ಅಲ್ಲ, ಬಿಜೆಪಿ ಅಪಪ್ರಚಾರ ಮಾಡುತ್ತಿರುವುದಕ್ಕೆ ವಿರುದ್ಧವಾಗಿ ಅವರು ವಿದ್ಯಾವಂತ, ರಾಜಕೀಯ ತಂತ್ರಜ್ಞ” ಎಂದು ಕಾಂಗ್ರೆಸ್(Congress) ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.

Advertisement

ಕಾಂಗ್ರೆಸ್ ನ ಸಾಗರೋತ್ತರ ಅಧ್ಯಕ್ಷ ಭಾನುವಾರ(ಸೆ8) ಡಲ್ಲಾಸ್‌ನ ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ರಾಹುಲ್ ಗಾಂಧಿ ಅವರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವಾಗ ಹೇಳಿಕೆಗಳನ್ನು ನೀಡಿದರು.

ಇದನ್ನೂ ಓದಿ: US Tour: 2024ರ ಚುನಾವಣೆ ಬಳಿಕ ಭಾರತದಲ್ಲಿ ಬಿಜೆಪಿ, ಮೋದಿ ಭಯ ಮಾಯವಾಗಿದೆ: ರಾಹುಲ್ ಗಾಂಧಿ

“ಬಿಜೆಪಿ ಕೋಟ್ಯಂತರ ರೂಪಾಯಿ ಹಣವನ್ನು ಖರ್ಚು ಮಾಡುವ ಮೂಲಕ ಬಿಜೆಪಿ ಅಪಪ್ರಚಾರ ಮಾಡುವುದಕ್ಕೆ ವಿರುದ್ಧವಾದ ದೃಷ್ಟಿಕೋನವನ್ನು ರಾಹುಲ್ ಗಾಂಧಿ ಅವರು ಹೊಂದಿದ್ದಾರೆ” ಎಂದು ಪಿತ್ರೋಡಾ ಹೇಳಿದರು.

ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರು ಸೋಮವಾರ (ಸೆ9) ವಾಷಿಂಗ್ಟನ್ ಡಿಸಿಯಲ್ಲಿನ ಭಾರತೀಯ ಡಯಾಸ್ಪೊರಾ ಮತ್ತು ಯುವ ಸಮುದಾಯದೊಂದಿಗೆ ಸಂವಹನ ನಡೆಸಲಿದ್ದಾರೆ. ಯುಎಸ್ ಸರ್ಕಾರದ ಹಿರಿಯ ಅಧಿಕಾರಿಗಳನ್ನೂ ಭೇಟಿ ಮಾಡಲು ಯೋಜಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next