Advertisement

ಸಿಕ್ಕಿಬಿದ್ದ ಪಾನಮತ್ತ ಪೈಲಟ್‌

09:10 AM Nov 12, 2018 | Team Udayavani |

ಮುಂಬಯಿ: ಪಾನಮತ್ತರಾಗಿ ವಿಮಾನ ಚಲಾಯಿಸಲು ಮುಂದಾಗಿದ್ದ ಏರ್‌ ಇಂಡಿಯಾದ ವಿಮಾನದ  ಹಿರಿಯ ಪೈಲಟ್‌ ಕ್ಯಾ. ಅರವಿಂದ್‌ ಕತ್ಪಾಲಿಯಾ ಅವರು ಆಲ್ಕೋಹಾಲ್‌ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದು ಅವರು ಮೂರು ವರ್ಷಗಳ ನಿಷೇಧಕ್ಕೊಳಗಾಗುವ ಸಂಭವವಿದೆ. ಅವರು ರವಿವಾರ ಮಧ್ಯಾಹ್ನ ಮುಂಬಯಿಯಿಂದ ಲಂಡನ್‌ಗೆ ತೆರಳಬೇಕಿದ್ದ ಎಐ-111 ವಿಮಾನ ಚಲಾಯಿಸಬೇಕಿತ್ತು. ಮತ್ತೂಂದು ಘಟನೆಯಲ್ಲಿ, ಬ್ಯಾಂಕಾಕ್‌ನಿಂದ ಹೊಸದಿಲ್ಲಿಗೆ ಹೊರಟಿದ್ದ ಏರ್‌ಇಂಡಿಯಾದ ಮತ್ತೂಂದು ವಿಮಾನದ ಸಹ ಪೈಲಟ್‌ ಒಬ್ಬರು ಆಲ್ಕೋಹಾಲ್‌ ಟೆಸ್ಟ್‌ ತಪ್ಪಿಸಿದ್ದರಿಂದ ಆ ವಿಮಾನವನ್ನು ಹಿಂದಕ್ಕೆ  ಕರೆಯಿಸಲಾಗಿದ್ದು, ಪೈಲಟ್‌ರನ್ನು 3 ತಿಂಗಳು ಅಮಾನತುಗೊಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next