Advertisement

ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಿ: ಶಾಸಕ ಐಹೊಳೆ

12:27 PM Jun 09, 2020 | Suhan S |

ರಾಯಬಾಗ: ಸರಕಾರಿ ಶಾಲೆಯಲ್ಲಿ ಅಧ್ಯಯನ ಮಾಡುವ ಮಕ್ಕಳಿಗೆ ಸರಕಾರ ಬೈಸಿಕಲ್‌, ಮಧ್ಯಾಹ್ನ ಬಿಸಿಯೂಟ, ಹಾಲು, ಬಟ್ಟೆ, ಪುಸ್ತಕ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ನೀಡುತ್ತಿದ್ದು, ಪಾಲಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸಬೇಕೆಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.

Advertisement

ಹುಬ್ಬರವಾಡಿ ಹಾಗೂ ನಂದಿಕುರಳಿ ಗ್ರಾಮಗಳ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಆರ್‌ಐಡಿಎಫ್‌ ನಬಾರ್ಡ್‌ ಯೋಜನೆಯಡಿ ಮಂಜೂರಾದ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಹುಬ್ಬರವಾಡಿ ಶಾಲೆಗೆ 33 ಲಕ್ಷ ರೂ. ವೆಚ್ಚದಲ್ಲಿ 3 ಕೊಠಡಿ ನಿರ್ಮಾಣ ಮತ್ತು ನಂದಿಕುರಳಿ ಶಾಲೆಗೆ 55 ಲಕ್ಷ ರೂ. ವೆಚ್ಚದಲ್ಲಿ 5 ಕೊಠಡಿ ನಿರ್ಮಾಣಕ್ಕಾಗಿ ಅನುದಾನ ಮಂಜೂರಾಗಿದೆ. ಗುತ್ತಿಗೆದಾರರು ಗುಣಮಟ್ಟದ ಕೊಠಡಿಗಳನ್ನು ನಿರ್ಮಿಸಿಕೊಡಬೇಕೆಂದರು.

ಅಣ್ಣಾಸಾಬ ಖೆಮಲಾಪುರೆ, ಸದಾನಂದ ಹಳಿಂಗಳಿ, ಬಿ.ಎಂ. ಕುಂದರಗಿ, ವಸಂತ ಲಬ್ಬೆ, ಅಪ್ಪಣ್ಣ ಪಾಟೀಲ, ಅಮಿತ ಜಾಧವ, ಬಾಳಪ್ಪ ಮಗದನ್ನವರ, ಆರ್‌.ಬಿ. ಶಹಾರೆ, ಹಣಮಂತ ಪಾಟೀಲ, ನಿಂಗಪ್ಪ ಪಾಟೀಲ, ಶ್ರವಣ ಕಾಂಬಳೆ, ಪೃಥ್ವಿರಾಜ ಜಾಧವ, ಬಾಬು ವಂಜಿರೆ, ಆರ್‌.ಕೆ. ನಿಂಗನೂರೆ, ಆರ್‌.ಬಿ.ಮನವಡ್ಡರ, ಅನ್ವರ ಮಿರ್ದೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next