Advertisement

ಗುರುಕುಲ ಶಿಕ್ಷಣ ದೇಶದ ಸಂಸ್ಕೃತಿ

07:46 PM Mar 12, 2021 | Team Udayavani |

ಬಳ್ಳಾರಿ : ಗುರುಕುಲ ಶಿಕ್ಷಣ ಮಾದರಿ ದೇಶದ ಸಂಸ್ಕೃತಿಯಾಗಿದೆ. ಇದರ ಸುಧಾರಿತ ಆವೃತ್ತಿಯಾಗಿ ಹೊಸ ಶಿಕ್ಷಣ ನೀತಿ (ಎನ್‌ ಇಪಿ 2020) ಅನ್ನು ದೇಶದಾದ್ಯಂತ ಜಾರಿ ಮಾಡಲು ಸುದೀರ್ಘ‌ 34 ವರ್ಷಗಳೇ ಬೇಕಾದವು ಎಂದು ರಾಷ್ಟ್ರೀಯ ಶಿಕ್ಷಣ ಮಂಡಳಿ ಜಂಟಿ ಕಾರ್ಯದರ್ಶಿ, ಅಕ್ಕಮಹಾದೇವಿ ವಿವಿಯ ವಿಶ್ರಾಂತ ಕುಲಪತಿ ಪ್ರೊ| ಮೀನಾ ಚಂದಾವರಕರ್‌ ಹೇಳಿದರು.

Advertisement

ನಗರದ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ಭಾರತೀಯ ಶಿಕ್ಷಣ ಮಂಡಳಿ, ನೀತಿ ಆಯೋಗ ನವದೆಹಲಿ ಮತ್ತು ವಿಎಸ್‌ ಕೆ ವಿವಿ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ “ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆಯಲ್ಲಿ ಶಿಕ್ಷಕರ ಪಾತ್ರ; ಅರಿವು ಮತ್ತು ಸವಾಲುಗಳು’ ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು

ಮಾತನಾಡಿದರು. ರಾಷ್ಟ್ರದಲ್ಲಿರುವ ಶಿಕ್ಷಣ ವ್ಯವಸ್ಥೆಯು ಎಲ್ಲರಿಗೂ ಉದ್ಯೋಗ ದೊರಕಿಸುವಲ್ಲಿ ವಿಫಲವಾಗಿದೆ. ರಾಷ್ಟ್ರದ ಪ್ರತಿ ಬಡ ಮತ್ತು ಜನಸಾಮಾನ್ಯನಿಗೆ ಶಿಕ್ಷಣ ಕಲ್ಪಿಸುವ ಧ್ಯೇಯೋದ್ದೇಶವನ್ನು ಈ ನೀತಿ ಹೊಂದಿದೆ. ಇದರಲ್ಲಿ ಬಹುಶಿಸ್ತೀಯ ಅಧ್ಯಯನಕ್ಕೆ ಮುಕ್ತ ಅವಕಾಶ ರೂಪಿಸಲಾಗಿದೆ. ಇದರಿಂದ ಕೌಶಲ್ಯಾಧಾರಿತ ಕಲಿಕೆಗೆ ವಿದ್ಯಾರ್ಥಿಗಳಿಗೆ  ಅನುಕೂಲವಾಗಲಿದೆ ಎಂದರು.

ಎನ್‌ಇಪಿಯ ಮುಖ್ಯ ಧ್ಯೇಯವಾದ ಸಂಶೋಧನೆಗೆ 10 ಸಾವಿರ ಕೋಟಿ ರೂ.ಗಳನ್ನು ಭಾರತ ಸರ್ಕಾರವು ಮೀಸಲಿಟ್ಟಿದೆ. ಅಂತೆಯೇ ದೇಸಿ ಭಾಷೆಗಳಿಗೆ ಉನ್ನತ ಶಿಕ್ಷಣದಲ್ಲಿ ಅವಕಾಶ ಒದಗಿಸಿ ದೇಶದ ಸಾಂಸ್ಕೃತಿಕ ವೈಭವವನ್ನು ಜಗತ್ತಿಗೆ

ಪಸರಿಸುವ ಕೆಲಸ ಮಾಡಲಿದೆ. 2030ರ ವೇಳೆಗೆ ವಿಶ್ವವಿದ್ಯಾಲಯಗಳ ಸಂಲಗ್ನತೆ ಹೊಂದಿರುವ ಕಾಲೇಜುಗಳು ರದ್ದಾಗಿ ಕ್ಲಸ್ಟರ್‌ಗಳ ಆಧಾರದಲ್ಲಿ ಕಾಲೇಜುಗಳು ಕಾರ್ಯ ನಿರ್ವಹಿಸುತ್ತವೆ. ಶಿಕ್ಷಕರು ಸಂಪರ್ಕ, ಸಹಯೋಗ, ಸಂಸ್ಕಾರ, ಸೇವೆ ಮತ್ತು ಸಮರ್ಪಣೆ ಮನೋಭಾವದಿಂದ ಹೊಸ ಶಿಕ್ಷಣ ನೀತಿ ಜಾರಿಗೊಳಿಸಲು ಶ್ರಮಿಸಬೇಕು. ಆಗ ಮಾತ್ರ ಶಿಕ್ಷಕರ ಬೋಧನಾ ನೀತಿಯು ಹೊಸ ಪರ್ವ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

Advertisement

ಬೆಂಗಳೂರಿನ ರಾಮಯ್ಯ ಸಾರ್ವಜನಿಕ ನೀತಿ ಕೇಂದ್ರ (ಆರ್‌ಪಿಸಿಸಿ)ದ ಉಪನಿರ್ದೇಶಕ ಡಾ| ಚೇತನ್‌ ಸಿಂಗೈ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲು ರಾಜ್ಯವು ಪ್ರಥಮ ಹೆಜ್ಜೆ ಇರಿಸಿದೆ. ಇದು ದೇಶಕ್ಕೆ ಮಾದರಿಯಾಗಲಿದೆ. ಸಂಶೋಧನಾ ಲೇಖನಗಳು ಮತ್ತು ಪೇಟೆಂಟ್‌ ಪಡೆಯುವಲ್ಲಿ ಭಾರತೀಯ ಸಂಶೋಧಕರಿಗೆ ಹೆಚ್ಚಿನ ಪ್ರೋತ್ಸಾಹದ ಅವಶ್ಯಕತೆ ಇದ್ದು, ಅದಕ್ಕೆ ಪೂರಕವಾಗಿ ಹೊಸ ಶಿಕ್ಷಣ ನೀತಿಯಲ್ಲಿ ವ್ಯವಸ್ಥಿತವಾಗಿ ಯೋಜನೆಗಳಿವೆ ಎಂದರು. ವಿವಿಯ ಕುಲಪತಿ ಪ್ರೊ| ಸಿದ್ದು ಪಿ ಆಲಗೂರ ಅಧ್ಯಕ್ಷತೆ ವಹಿಸಿದ್ದರು. ವಿಚಾರ ಸಂಕಿರಣದ ನಂತರ ವಿಶ್ವವಿದ್ಯಾಲಯದ ಬೋಧಕರನ್ನು 5 ತಂಡಗಳಾಗಿ ವಿಂಗಡಿಸಿ, ವಿಚಾರಗೋಷ್ಠಿ ಒಳನೋಟ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯ ಸವಾಲುಗಳ ಬಗ್ಗೆ ಚರ್ಚೆ ಮತ್ತು ಅಭಿಪ್ರಾಯ ಸಂಗ್ರಹಿಸಿ ನೀತಿ ಆಯೋಗಕ್ಕೆ ಮಂಡಿಸಲಾಗುವುದು. ಭಾರತೀಯ ಶಿಕ್ಷಣ ಮಂಡಳಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮುಕುಲ್‌ ಜಿ. ಕಾನಿಟ್ಕರ್‌ ಅವರ ವಿಡಿಯೋ ಭಾಷಣವನ್ನು ಈ ಸಂದರ್ಭದಲ್ಲಿ ವೀಕ್ಷಿಸಲಾಯಿತು.

ಉಸ್ತುವಾರಿಯನ್ನು ಪ್ರೊ| ಲೋಕೇಶ್‌ ವಹಿಸಿದ್ದರು. ಕುಲಸಚಿವರು (ಮೌಲ್ಯಮಾಪನ) ಪ್ರೊ| ಶಶಿಕಾಂತ್‌ ಉಡಿಕೇರಿ, ವಿತ್ತಾಧಿ ಕಾರಿ ಡಾ| ಕೆ.ಸಿ.ಪ್ರಶಾಂತ್‌, ವಿವಿಯ ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಬೋಧಕ ಸಿಬ್ಬಂದಿ ಮತ್ತು ಭಾರತೀಯ ಶಿಕ್ಷಣ ಮಂಡಳಿ ಪ್ರೊ| ಸದ್ಯೋಜಾತ ಕೆ.ಎಂ ಮತ್ತು ಪದಾಧಿ ಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next