ಬೆಂಗಳೂರು : ನಗರದ ಖಾಸಗಿ ಹೋಟೆಲ್ ನಲ್ಲಿ ಶುಕ್ರವಾರ (ಏಪ್ರಿಲ್ 29) ನಡೆಯುತ್ತಿರುವ ಸೆಮಿಕಾನ್ ಇಂಡಿಯಾ 2022 ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಆಗಿ ಉದ್ಘಾಟಿಸಿದರು.
ವರ್ಚುವಲ್ ಭಾಷಣ ಮಾಡಿದ ಪ್ರಧಾನಿ, ಭಾರತವನ್ನು ವಿಶ್ವದ ಸೆಮಿಕಂಡಕ್ಟರ್ ಹಬ್ ಮಾಡುವುದು ಮತ್ತು ಭಾರತ ಸೆಮಿಕಂಡಕ್ಟರ್ ಮಿಷನ್ ಅನ್ನು ಕಾರ್ಯರೂಪಕ್ಕೆ ತರಲು ದಾರಿ ಮಾಡಿಕೊಡುವುದು ಸಮ್ಮೇಳನದ ಗುರಿಯಾಗಿದೆ. “ಭಾರತದಲ್ಲಿ ಸೆಮಿಕಾನ್ ಇಂಡಿಯಾ ಸಮ್ಮೇಳನವನ್ನು ನಡೆಸಲಾಗುತ್ತಿದೆ ಮತ್ತು ಉದ್ಘಾಟನಾ ಸೆಮಿಕಾನ್ ಇಂಡಿಯಾ ಸಮ್ಮೇಳನಕ್ಕೆ ನಿಮ್ಮೆಲ್ಲರನ್ನು ಸ್ವಾಗತಿಸಲು ಇಂದು ನನಗೆ ತುಂಬಾ ಸಂತೋಷವಾಗಿದೆ” ಎಂದರು.
ಭಾರತ ವಿಶ್ವದ ಸೆಮಿಕಂಡಕ್ಡರ್ ಉದ್ಯಮಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ. ಆರು ಕಾರಣಗಳಿಗೆ ಭಾರತ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಪಾತ್ರ ವಹಿಸುತ್ತಿದೆ. ಡಿಜಿಟಲ್ ವ್ಯವಸ್ಥೆ ವೇಗವಾಗಿ ಬೆಳೆಯುತ್ತಿದೆ. ಯುಪಿಐ ಅತ್ಯಂತ ಮಹತ್ವದ ಸಾಧನವಾಗಿದೆ. ಭಾರತ ಅತಿದೊಡ್ಡ ಡಾಟಾ ಬಳಕೆದಾರರ ದೇಶ ವಾಗಿದೆ. ಭಾರತ ವಿಶ್ವದ ದೊಡ್ಡ ಡಿಜಿಟಲ್ ಬಳಕೆ ರಾಷ್ಟವಾಗಲಿದೆ ಎಂದರು.
6000 ಗ್ರಾಮಗಳು ಬ್ರಾಡ್ ಬ್ಯಾಂಡ್ ಸಂಪರ್ಕ ಪಡೆದಿವೆ. ಸ್ಟಾರ್ಟ ಅಪ್ ಹೊಂದಿದೆ. 80ಬಿಲಿಯನ್ ಡಾಲರ್ ಭಾರತದಲ್ಲಿ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಹೂಡಿಕೆಯಾಗುತ್ತಿದೆ. ಯುವ ಭಾರತೀಯರನ್ನು ಮುಂದಿನ ಪೀಳಿಗೆಗೆ ತರಬೇತಿಗೊಳಿಸಲಾಗುತ್ತಿದೆ. ಟಾಪ್ 25 ಸೆಮಿಕಂಡಕ್ಟರ್ ಡಿಸೈನ್ ಸಂಸ್ಥೆಗಳು ಭಾರತದಲ್ಲಿವೆ. 26 ಬಿಲಿಯನ್ ಡಾಲರ್ಸ್ ಮುಂದಿನ ಐದು ವರ್ಷದಲ್ಲಿ ಹೂಡಿಕೆಯ ನಿರೀಕ್ಷೆ ಇದೆ ಎಂದರು.
ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಲು ಸರ್ಕಾರ ಬದ್ದವಾಗಿದೆ. ನಾವು ಉದ್ಯಮಕ್ಕೆ ನಿರಂತರ ಬೆಂಬಲ ನೀಡುತ್ತೇವೆ. ನಾವು ಉದ್ಯಮ ಸ್ನೇಹಿ ವಾತಾವರಣ ಸೃಷ್ಟಿಸಲು ನಿರಂತರ ಪ್ರಯತ್ನ ನಡೆಸಿದ್ದೇವೆ. ಉದ್ಯಮಿಗಳಿಂದ ಸಲಹೆಗಳನ್ನು ಸ್ವೀಕರಿಸಲು ನಾವು ಸಿದ್ದರಿದ್ದೇವೆ. ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿ ಬರಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.