Advertisement

ಸ್ವಯಂ ಪ್ರತ್ಯೇಕವಾಗಿರಲು ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ನಿರ್ಧಾರ

11:30 AM Mar 19, 2020 | keerthan |

ಜೋಹಾನ್ಸ್‌ಬರ್ಗ್‌: ಕ್ಷಿಪ್ರ ವೇಗದಲ್ಲಿ ಕೊರೊನಾ ವೈರಸ್‌ ಹಬ್ಬಿದ್ದರಿಂದ ದಕ್ಷಿಣ ಆಫ್ರಿಕಾ ತಂಡ ಭಾರತ ಆತಿಥ್ಯದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ತವರಿಗೆ ತೆರಳಿದೆ.

Advertisement

ಈ ಬೆನ್ನಲ್ಲೇ ಸರಣಿಯಲ್ಲಿ ಪಾಲ್ಗೊಂಡ ಎಲ್ಲ ಆಟಗಾರರು, ಸಿಬ್ಬಂದಿ ಕೆಲವು ದಿನಗಳು ಸ್ವಯಂ ಪ್ರತ್ಯೇಕವಾಗಿರಲು ನಿರ್ಧರಿಸಿದ್ದಾರೆ. ವೈದ್ಯಕೀಯ ತಜ್ಞರ ಸೂಚನೆ ಮೇರೆಗೆ ಆಫ್ರಿಕಾ ತಂಡ ನಿರ್ಧಾರಕ್ಕೆ ಬಂದಿದೆ. ಈ ಬಗ್ಗೆ ಮಾತನಾಡಿದ ಡಾ. ಶುಯೈಬ್‌ ಮಂಜ್ರಾ, “ಕುಟುಂಬ, ಒಟ್ಟಾರೆ ಸಮಾಜದಿಂದ 14 ದಿನ ದೂರ ಇದ್ದು ಅಂತರ ಕಾಯ್ದುಕೊಳ್ಳುವಂತೆ ಆಟಗಾರರಿಗೆ ಶಿಫಾರಸು ಮಾಡಿದ್ದೇವೆ. ಈ ವೇಳೆ ಅನಾರೋಗ್ಯಕ್ಕೆ ತುತ್ತಾದರೆ ಅವರ ಬಗ್ಗೆ ನಿಗಾವಹಿಸಲಾಗುತ್ತದೆ. ಆರೋಗ್ಯ ಸ್ಥಿತಿ ಹತೋಟಿಗೆ ತರಲು ನಿಯಮಾವಳಿಯಂತೆ ಸೂಕ್ತ ಚಿಕಿತ್ಸೆ ನೀಡಬೇಕಾಗುತ್ತದೆ’ ಎಂದು ತಿಳಿಸಿದರು.

ದಕ್ಷಿಣ ಆಫ್ರಿಕಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಧರ್ಮಶಾಲಾದಿಂದ ಆರಂಭಿಸಿತ್ತು. ಮಳೆಯಿಂದಾಗಿ ಒಂದೂ ಎಸೆತ ಕಾಣದಂತೆ ಈ ಪಂದ್ಯ ರದ್ದಾಗಿತ್ತು. ಆ ಬಳಿಕ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದರಿಂದ ಆಫ್ರಿಕಾ ಕ್ರಿಕೆಟಿಗರು ಕೂಟದಿಂದ ದಿಢೀರ್‌ ಹಿಂದಕ್ಕೆ ಸರಿದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next