Advertisement

ಸ್ವಭಾವ ಬಿಚ್ಚಿಡುವ ಸೆಲ್ಫಿ, ನಿಮ್ಮ ಸೆಲ್ಫಿ ಏನ್‌ ಹೇಳುತ್ತೆ?

11:05 AM May 23, 2017 | Team Udayavani |

ಒಂದೊಂದು ಸೆಲ್ಫಿಗಳು ಒಂದೊಂದು ಭಾವವನ್ನು, ವ್ಯಕ್ತಿತ್ವವನ್ನು ಹೇಳುವ ಚಿತ್ರಪಟಗಳಂತಲೇ ಲೆಕ್ಕ. ಹಾಗಾದ್ರೆ, ಸೆಲ್ಫಿಪ್ರಿಯರ ವ್ಯಕ್ತಿತ್ವ ಹೇಗಿರುತ್ತೆ?

Advertisement

ಎದುರೊಬ್ಬ ಕ್ಯಾಮೆರಾ ಹಿಡಿದು, “ಸ್ಮೈಲ್ ಪ್ಲೀಸ್‌’ ಎಂದಾಗ ನಮ್ಮ ತುಟಿ ಬಿರಿಯುತ್ತದೆ. ಕ್ಯಾಮೆರಾದ ಬೆಳಕಿನಂತೆ, ಮೊಗದಲ್ಲಿ ನಗುವೊಂದು ಸಹಜವಾಗಿಯೋ, ಬಲವಂತವಾಗಿಯೋ ಚಿಮ್ಮುತ್ತದೆ. ಅವನ ಕ್ಯಾಮೆರಾದ ಮೆಮೋರಿ ಚಿಪ್ಪಿನೊಳಗೆ ನಮ್ಮ ಫೋಟೋ ಅಚ್ಚಾಗುತ್ತದೆ. “ಆಗ ನಾವು ಫ‌ುಲ್‌ ಜೋಶ್‌ನಲ್ಲಿದ್ದೆವು’ ಎಂದು ಇನ್ನಾéವತ್ತೋ ಹೇಳಿ ಬೀಗುವುದಕ್ಕೆ ಆ ಫೋಟೋ ಬಲವಾದ ಸಾಕ್ಷಿ.

ಈಗ ಅಂಥ ಸಾಕ್ಷಿಗಳು ತೀರಾ ಅಪರೂಪ. ಎದುರೊಬ್ಬ ಕ್ಯಾಮೆರಾ ಹಿಡಿದವನೂ ಇರುವುದಿಲ್ಲ. ನಮ್ಮ ಫೋಟೋ ಸಂಭ್ರಮದಲ್ಲಿ ಸೆಲ್ಫಿ ನುಗ್ಗಿಬಿಟ್ಟಿದೆ. ನಮಗೆ ನಾವೇ ಫೋಟೋಗ್ರಾಫ‌ರ್‌ ಆದಮೇಲೆ, ಅಲ್ಲಿ ನಗುವೊಂದೇ ಕಾಣಸಿಗುವುದಿಲ್ಲ. ಬೇರೆ ಬೇರೆ ಭಾವರಸಗಳು ಆ ಫೋಟೋದಲ್ಲಿ ಇಣುಕುತ್ತವೆ. ಒಂದೊಂದು ಸೆಲ್ಫಿಗಳು ಒಂದೊಂದು ಭಾವವನ್ನು, ವ್ಯಕ್ತಿತ್ವವನ್ನು ಹೇಳುವ ಚಿತ್ರಪಟಗಳಂತಲೇ ಲೆಕ್ಕ. ಹಾಗಾದ್ರೆ, ಸೆಲ್ಫಿಪ್ರಿಯರ ವ್ಯಕ್ತಿತ್ವ ಹೇಗಿರುತ್ತೆ?

1. ಸಿಂಪಲ್‌ ಲಿವಿಂಗ್‌, ಹೈ ಥಿಂಕಿಂಗ್‌!
ಬಹುಶಃ ಇಂಥ ಸೆಲ್ಫಿಗಳನ್ನು ಫೇಸ್‌ಬುಕ್‌ನಲ್ಲಿ ಕಾಣೋದು ಅಪರೂಪ. ಇವರು ನಗುತ್ತಿದ್ದಾರೋ, ಸೀರಿಯಸ್ಸಾಗಿದ್ದಾರೋ ಅಂತ ಹೇಳ್ಳೋದು ಕಷ್ಟ. ಅತಿಸರಳವಾಗಿ ಬದುಕುವ ವ್ಯಕ್ತಿತ್ವ ಇವರದ್ದಾದರೂ, ಚೌಕಟ್ಟಿನಾಚೆ ಆಲೋಚಿಸುವ, ಸ್ಪೆಷೆಲ್‌ ಐಡಿಯಾಗಳನ್ನೇ ಹೊಮ್ಮಿಸುವ ಸ್ವಭಾವ ಇವರದು. ಸೆಲ್ಫಿ ನೋಡುಗರನ್ನು ಆಕರ್ಷಿಸಲು ಸಣ್ಣಗೆ ತೆರೆದುಕೊಂಡ ಇವರ ಕಣ್ಣಿನ ಬೆಳಕೊಂದೇ ಸಾಕು!

2. ಸಣ್ಣ ಸಣ್ಣ ಖುಷಿಗೂ ಥ್ರಿಲ್ಲಾಗ್ತಾರೆ…
ಇವರ ಮುಂದೆ ಕಾಫಿಯೋ, ಇನ್ನಾéವುದೋ ಪೇಯ ಇರುತ್ತೆ. ಸಣ್ಣಪುಟ್ಟ ಖುಷಿಯಲ್ಲೇ ಬದುಕಿನ ಗುಟ್ಟು ಇದೆ ಎಂಬುದನ್ನು ಚೆನ್ನಾಗಿ ಬಲ್ಲರು. ಅಪರೂಪದ ಹವ್ಯಾಸಕ್ಕೆ ಜೋತು ಬಿದ್ದು, ಅಚ್ಚರಿ ಹುಟ್ಟುಹಾಕುವವರು. ಏನನ್ನಾದರೂ ಸಾಧಿಸಿದರೆ, ಯಾರಲ್ಲಿಯೂ ಹೇಳಿಕೊಳ್ಳುವುದಿಲ್ಲ. ಸದಾ ಅರಳುವ ಇವರ ವ್ಯಕ್ತಿತ್ವಕ್ಕೆ ಏಕಾಂತವೇ ಸ್ನೇಹಿತ. ತೀರಾ ಬೋರ್‌ ಆಯ್ತು ಎಂದರೆ, ರಾಂಗ್‌ ನಂಬರ್‌ ಜೊತೆಗೂ ಅರ್ಧ ಗಂಟೆ ಮಾತಾಡಲು ಹಿಂದೆ ಮುಂದೆ ನೋಡೋದಿಲ್ಲ!

Advertisement

3. ಬೇಗನೆ ಗುರಿ ತಲುಪ್ತಾರೆ!
ಬದುಕಿನ ಗೋಲ್‌ ಮುಟ್ಟಲು ಯಾವ ಗುರುವೂ ಬೇಕಿಲ್ಲ ಎಂಬ ಕಾನ್ಫಿಡೆನ್ಸ್‌ ಇವರದು. ಯಾರೂ “ಅಲ್ಲಿಗೆ ಹೋಗಪ್ಪಾ, ಅದನ್ನು ಮಾಡಪ್ಪಾ…’ ಎಂದು ಇವರನ್ನು ನೂಕಬೇಕಿಲ್ಲ. ಗುರಿ ತಲುಪುವುದು ಇವರಿಗೆ ಗೊತ್ತು. ಸದಾ ಚೈತನ್ಯದಿಂದ ಪುಟಿಯುವವರು. ಇವರ ಕೆಲಸಗಳಲ್ಲಿ ಅಪಾರ ಶ್ರಮ ಕಾಣಿಸುತ್ತದೆ. ಬದುಕಿನಲ್ಲಿ ಆಗಾಗ್ಗೆ ಮೈಲುಗಲ್ಲನ್ನು ನೆಡುತ್ತಲೇ ಮುಂದೆ ಹೋಗುತ್ತಾರೆ. ತುಸು ರೇಗಿಸಿದರೆ, ಸಿಟ್ಟಾಗುತ್ತಾರೆ. ಎದುರುತ್ತರ ಕೊಡುವ ಸ್ವಭಾವದ ಹೊರತಾಗಿಯೂ ಇವರು ಅಪ್ಪಟ ಜೆಂಟಲ್‌ವುನ್‌.

4. ಅಲೆಮಾರಿಯ ದೊಡ್ಡ ದೊಡ್ಡ ಕನಸು
ಸದಾ ಪ್ರೈವೇಸಿ ಬೇಕೆಂದು ಹಂಬಲಿಸುವ ಇವರು, ಅಲೆಮಾರಿ ಥರ ಸಂಚಾರ ನಡೆಸುತ್ತಾರೆ. ದೊಡ್ಡ ದೊಡ್ಡ ಕನಸುಗಳನ್ನು ಕಾಣಾ¤ರೆ. ನಿಷ್ಕಲ್ಮಶ ನಗು ಇವರ ಆಭರಣ. ಬಹಳ ಪ್ರಾಮಾಣಿಕರು. ಖುಷಿ ಕೊಡುವ ಸಂಗತಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಪ್ರೀತಿಯ ವಿಚಾರದಲ್ಲಿ ಕೈ ಕೊಟ್ಟರೂ ಕೊಟ್ಟರೇ! ಕೆಲಸಗಳನ್ನು ಬಹಳ ಸ್ಪೀಡಾಗಿ ಮಾಡ್ತಾರೆ. ಅವಲಂಬನೆ ಪದ ಗೊತ್ತಿಲ್ಲ. ಸ್ವಂತ ಜಗತ್ತಿನ ಕನಸು ಕಂಡು, ಅಲ್ಲಿ ತಾವಿಷ್ಟಪಟ್ಟಂತೆ ಎಲ್ಲವೂ ಇರಬೇಕೆಂದು ಹಂಬಲಿಸುವ ಮಹತ್ವಾಕಾಂಕ್ಷಿ ಇವರು.

5. ಭಯಂಕರ ಭಾವುಕ ಜೀವಿ!
ಹುಣ್ಣಿಮೆಗೊಮೆ ಶೇ.100ರ ಪ್ರಮಾಣದಲ್ಲಿ ನಗುತ್ತಾರೆ. ಬೇಗನೆ ಪ್ರೀತಿಗೆ ಬೀಳುತ್ತಾರೆ. ಭಯಂಕರ ಭಾವುಕ ಜೀವಿ. ಯಾವುದೇ ಹೊತ್ತಲ್ಲೂ ನಟಿ ಶ್ರುತಿಯ ಪಾತ್ರಗಳನ್ನು ನೆನೆದು, ಅತ್ತರೂ ಅತ್ತರೇ! ಪಕ್ಕದವರಿಗೆ ಸಮಾಧಾನ ಮಾಡಲು ಸಾಧ್ಯವಾಗದಷ್ಟೂ ಎಮೋಶನಲ್‌ ವ್ಯಕ್ತಿತ್ವ. ಎದುರು ಕುಳಿತವರ ವ್ಯಕ್ತಿತ್ವವನ್ನು ಸೆಕೆಂಡಿನಲ್ಲಿಯೇ ಗ್ರಹಿಸಿಕೊಳ್ಳುವ ಚುರುಕುತನ ಇವರಲ್ಲಿರುತ್ತೆ. ಮಾತು ಕಡಿಮೆ. ಆಳವಾಗಿ ಆಲೋಚಿಸುವುದು ಇವರ ಇನ್ನೊಂದು ಗುಣ.

6. ಐಸಿಯುನಲ್ಲಿ ಇಧ್ದೋರಿಗಿಂತ ಗಂಭೀರ!
ಯಾವುದೇ ಕೆಲಸ ಕೈಗೆತ್ತಿಕೊಳ್ಳಲಿ, ಅವಧಿಗಿಂತ ಆ ಕೆಲಸವನ್ನು ಮುಗಿಸ್ತಾರೆ. ಲೈಫ‌ನ್ನು ತುಂಬಾ ಸೀರಿಯಸ್ಸಾಗಿ ತೆಗೆದುಕೊಳ್ತಾರೆ. ಅವಮಾನ ಸಹಿಸುವುದಿಲ್ಲ. ಕಾಲಹರಣ ಮಾಡುವುದಿಲ್ಲ. ಮಾತು ಬಹಳ ಶಾರ್ಪ್‌ ಇರುತ್ತೆ. ಆಡಂಬರ ಜಾಸ್ತಿ. ಎಲ್ಲಿ, ಹೇಗೆ, ಯಾವಾಗ ಯಾಮಾರಿಸ್ತಾರೆ ಅಂತ ಹೇಳ್ಳೋಕ್ಕೇ ಆಗೋದಿಲ್ಲ. ಬಹಳ ಬೇಗ ಸಿಟ್ಟಾಗ್ತಾರೆ. ಪ್ರೀತಿ- ಗೀತಿ ಅಂತ ಹೇಳಿದ್ರೆ, “ಮುಂದಿನ ಜನ್ಮದಲ್ಲಿ ಹಾಗೇನಾದ್ರೂ ಟೈಮ್‌ ಸಿಕ್ಕರೆ, ಮಾತಾಡೋಣ’ ಅಂತ ಹೇಳುವಷ್ಟು ಬ್ಯುಸಿ.

7. ಗುಂಪಲ್ಲಿದ್ದಾಗಷ್ಟೇ ಜಾಲಿ
ಇಲ್ಲಿ ಎಡಭಾಗದಲ್ಲಿ ಸೆಲ್ಫಿ ತೆಗೆದೊಂಡಿದ್ದಾರಲ್ಲ, ಅವರ ಬಗ್ಗೆ ಹೇಳ್ತಿರೋದು… ಒಂಚೂರು ನಗಬೇಕು, ಲೈಫ‌ನ್ನು ಎಂಜಾಯ್‌ ಮಾಡ್ಬೇಕು ಅನ್ನೋದಿದ್ರೆ ಇವರಿಗೆ ಮೂರ್ನಾಲ್ಕು ಜನರ ಗುಂಪೊಂದು ಬೇಕು. ಅಲ್ಲಿ ಕ್ಯಾಪ್ಟನ್‌ ಥರ ವರ್ತಿಸುತ್ತಾರೆ. ಇವರ ಸೌಂದರ್ಯ, ಮತ್ತೂಬ್ಬರಿಗಿಂತ ಚೆನ್ನಾಗಿರುವ ಕಾರಣದಿಂದ ಸೆಲ್ಫಿ ತೆಗೆದುಕೊಳ್ಳಲು ಅಲ್ಪ ಸೌಂದರ್ಯವಂತರನ್ನೇ ಕಾಯ್ತಾರೆ. ಇನ್ನೊಬ್ಬರ ಮಾತುಗಳನ್ನು ಕೇಳುವವರಲ್ಲ. ಗುರಿಯ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳೋದಿಲ್ಲ. ಗುಂಪಿನಲ್ಲೇ ಯಾರಾದ್ರೂ ಗುರಿಯತ್ತ ಡ್ರಾಪ್‌ ಕೊಡ್ತಾರೆ ಅನ್ನೋ ನಂಬಿಕೆಗೆ ಜೋತುಬಿದ್ದವರು.

Advertisement

Udayavani is now on Telegram. Click here to join our channel and stay updated with the latest news.

Next