Advertisement
ಸುದ್ದಿಗಾರರ ಜತೆ ಮಾತನಾಡಿ, ಜಮೀರ್ ಅವರನ್ನು ರಾಜಕೀಯವಾಗಿ ಬೆಳೆಸಿದ್ದೇ ಕುಮಾರಸ್ವಾಮಿ. ಇದೀಗ ಮಾಡಿದ್ದುಣ್ಣೋ ಮಹರಾಯ ಎಂಬಂತಾಗಿದೆ. ಜಮೀರ್ ಇದೀಗ ಅವರಿಗೇ ಮುಳುವಾಗಿದ್ದಾರೆ. ಮಾತನಾಡುವಾಗ ನಾಲಗೆ ಮೇಲೆ ಹಿಡಿತ ಇರಬೇಕು. ಜಮೀರ್ ಸಾಮಾನ್ಯ ವ್ಯಕ್ತಿಯಲ್ಲ. ಅವರೊಬ್ಬ ಸಚಿವರಾಗಿದ್ದು, ಅವರ ಅಭಿಪ್ರಾಯವೇ ಸರಕಾರದ ಅಭಿಪ್ರಾಯವಾಗುತ್ತದೆ ಎಂದರು.
ಮಂತ್ರಾಲಯ ಮಠಕ್ಕೆ ಜಾಗವನ್ನು ಆದೋನಿ ನವಾಬರು ಕೊಟ್ಟಿದ್ದಾರೆ. ಅದು ವಕ್ # ಬೋರ್ಡ್ನದ್ದು ಎಂದು ಯಾರಾದರು ಕೇಳಲು ಸಾಧ್ಯವೇ ಎಂದು ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹೇಳಿದರು. ಶ್ರೀ ರಾಘವೇಂದ್ರ ಸ್ವಾಮಿಗಳು ನವಾಬರ ಬಳಿ ಬಂದು ಜಾಗ ಕೇಳಿದಾಗ ಆ ಊರಿನ ಖಾಜಿಗೆ ಕೊಟ್ಟ ಜಾಗವನ್ನು ಮರಳಿ ಪಡೆದು ರಾಯರ ಬೃಂದಾವನಕ್ಕೆ ನೀಡಿದ್ದಾರೆ. ಇದನ್ನು ಶ್ರೀಮಠದ ಸ್ವಾಮಿಗಳೇ ಹೇಳುತ್ತಾರೆ. ಶೃಂಗೇರಿ ಶಾರದಾ ಪೀಠಕ್ಕೆ ಪೇಶ್ವೆಗಳು ದಾಳಿಗೆ ಬಂದಾಗ ಟಿಪ್ಪು ಸುಲ್ತಾನ್ ಸೈನ್ಯ ಕಳುಹಿಸಿ ರಕ್ಷಣೆ ಮಾಡಿ ಮತ್ತೆ ಶಾರದಾ ಪೀಠ ಸ್ಥಾಪನೆ ಮಾಡಿದ್ದಾರೆ. ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಸಂಸ್ಕೃತಿ ಹಾಳು ಮಾಡುತ್ತಿದ್ದಾರೆ ಎಂದರು.