Advertisement

ಮೂರೂ ಪಕ್ಷಗಳಲ್ಲಿ ಆಯ್ಕೆ ಕಸರತ್ತು ಬಿರುಸು

02:30 AM Jun 15, 2020 | Sriram |

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಮೂರೂ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಚುರುಕುಗೊಂಡಿದೆ.

Advertisement

ಸೋಮವಾರ ಬಿಜೆಪಿಯ ಕೋರ್‌ ಕಮಿಟಿ ಸಭೆ ನಡೆಯಲಿದ್ದು, ಸಂಭಾವ್ಯರ ಪಟ್ಟಿ ವರಿಷ್ಠರಿಗೆ ಸಲ್ಲಿಕೆಯಾಗಲಿದೆ. ಇನ್ನೊಂದೆಡೆ ಜೆಡಿಎಸ್‌ ನಾಯಕರು ಸೋಮವಾರ ಸಭೆ ಕರೆದಿದ್ದಾರೆ. ಕಾಂಗ್ರೆಸ್‌ ನಾಯಕರು ಮಂಗಳವಾರ ಸಭೆ ನಡೆಸುವ ಸಾಧ್ಯತೆ ಇದೆ.

ಪರಿಷತ್‌ನ ಏಳು ಸ್ಥಾನಗಳ ಪೈಕಿ ಬಿಜೆಪಿಗೆ ನಾಲ್ಕು ಸ್ಥಾನಗಳನ್ನು ಗೆಲ್ಲಲು ಅವಕಾಶವಿದೆ. ಆದರೆ ಇದರ ಎರಡು ಮೂರು ಪಟ್ಟು ಆಕಾಂಕ್ಷಿಗಳಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆ ಯಾಗಿ ವರ್ಷ ಸಮೀಪಿಸುತ್ತಿದ್ದು, ಇದಕ್ಕೆ ಕಾರಣ ರಾದ ವಲಸಿಗರು ಸ್ಥಾನಮಾನಕ್ಕೆ ಪಟ್ಟು ಹಿಡಿದಿದ್ದಾರೆ. ಇನ್ನೊಂದೆಡೆ ರಾಜ್ಯಸಭೆಯ ಮಾದರಿಯಲ್ಲೇ ಪರಿಷತ್‌ ಚುನಾವಣೆಯಲ್ಲೂ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕು ಎಂಬ ಆಗ್ರಹ ಕೇಳಿ ಬರ ಲಾರಂಭಿಸಿದೆ. ರಾಜ್ಯಸಭೆ ಅವಕಾಶ  ವಂಚಿತರೂ ವಿಧಾನ ಪರಿಷತ್‌ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಆರ್‌. ಶಂಕರ್‌ಗೆ ಅವಕಾಶ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ. ಉಳಿದ 3 ಸ್ಥಾನಗಳ ಪೈಕಿ ಕೆಲವನ್ನು ಪ್ರತಾಪಗೌಡ ಪಾಟೀಲ್‌, ಮುನಿರತ್ನ ಅವರಿಗೆ ನೀಡಬೇಕೇ ಅಥವಾ ಉಪಚುನಾವಣೆಯಲ್ಲಿ ಪರಾಭವ ಗೊಂಡ ಎಂ.ಟಿ.ಬಿ. ನಾಗರಾಜ್‌, ಎಚ್‌. ವಿಶ್ವನಾಥ್‌ ಅವರಿಗೆ ನೀಡಬೇಕೇ ಎಂಬ ಚರ್ಚೆ ನಡೆದಿದೆ. ಈ ಪೈಕಿ ಯಾರಿಗೆ ಅವಕಾಶ ನೀಡಿದರೂ ವಲಸಿಗರಿಗೆ ಮಣೆ ಹಾಕಲಾಗಿದೆ ಎಂಬ ಅಪಸ್ವರ ಕೇಳಿ ಬರುತ್ತದೆ. ಮೂಲ ಬಿಜೆಪಿಗರಿಗೆ ಅವಕಾಶ ನೀಡಿದರೆ ವಲಸಿಗರ ತ್ಯಾಗಕ್ಕೆ ಬೆಲೆ ನೀಡಿಲ್ಲ ಎಂಬ ಅಪಪ್ರಚಾರ ನಡೆಯುವ ಸಾಧ್ಯತೆ ಇದೆ.

ಪರಿಷತ್‌ಗೆ ಐವರನ್ನು ನಾಮನಿರ್ದೇಶನ ಮಾಡಲು ಅವಕಾಶವಿದ್ದು, ಈಗ ಚುನಾವಣೆ ಎದುರಾಗಿರುವ 7 ಸ್ಥಾನ
ಗಳಿಗೆ ನಾಲ್ವರನ್ನು ಆಯ್ಕೆ ಮಾಡುವ ಚಿಂತನೆಯೂ ಇದೆ.

Advertisement

ಇಂದು ಬಿಜೆಪಿ ಸಭೆ
ಸೋಮವಾರ ಸಂಜೆ 4ಕ್ಕೆ ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆ ನಡೆಯಲಿದೆ. ಸರಕಾರ ರಚನೆಗೆ ಕಾರಣ ರಾದ ವಲಸಿಗ ಆಕಾಂಕ್ಷಿಗಳಿಗೆ ಸಿಎಂ ಬಿಎಸ್‌ವೈ ನೆರ ವಾಗುವರೇ ಎಂಬ ಕುತೂಹಲ ಇದೆ. ಕೋರ್‌ ಕಮಿಟಿ  ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡಿದರೂ ಅಂತಿಮವಾಗಿ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ. ಸರಕಾರದ ಭವಿಷ್ಯ ಮತ್ತು ವಲಸಿಗರಿಗೆ ಕೊಟ್ಟ ಮಾತು ಉಳಿಸಿ ಕೊಳ್ಳುವ ನಿಟ್ಟಿನಲ್ಲಿ ಬಿಎಸ್‌ವೈ ಅವರ ಆಯ್ಕೆಗೆ ಹೆಚ್ಚಿನ ಮಾನ್ಯತೆ ಸಿಗಲಿದೆ ಎಂಬ ಮಾತು ಕೇಳಿಬರುತ್ತಿದೆ.

ಮಂಗಳವಾರ ಕಾಂಗ್ರೆಸ್‌ ಸಭೆ ಸಾಧ್ಯತೆ
ಕಾಂಗ್ರೆಸ್‌ನಲ್ಲೂ ಆಕಾಂಕ್ಷಿಗಳು ಲಾಬಿ ನಡೆಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿ., ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಹಿರಿಯ ನಾಯಕ ಖರ್ಗೆ ಬಳಿ ಮನವಿ ಮಾಡುತ್ತಿದ್ದಾರೆ. ಅಂತಿಮ ತೀರ್ಮಾನ ಹೈಕಮಾಂಡ್‌ನ‌ದ್ದಾಗಿರುವುದರಿಂದ ಕೆಲವು ಆಕಾಂಕ್ಷಿಗಳು ದಿಲ್ಲಿ ಮಟ್ಟದಲ್ಲೇ ಪ್ರಯತ್ನ ನಡೆಸಿದ್ದಾರೆ. ಮಂಗಳವಾರ ಹಿರಿಯ ನಾಯಕರ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.

ಇಂದು ಜೆಡಿಎಸ್‌ ನಾಯಕರ ಸಭೆ
ಜೆಡಿಎಸ್‌ಗೆ ಒಂದು ಸ್ಥಾನ ಗೆಲ್ಲಲು ಅವಕಾಶವಿದೆ. ಆಕಾಂಕ್ಷಿಗಳು ಹಿರಿಯ ನಾಯಕರಿಗೆ ದುಂಬಾಲುಬಿದ್ದಿ ದ್ದಾರೆ. ಪಕ್ಷದ ಶಾಸಕರು, ಮುಖಂಡರೊಂದಿಗೆ ಚರ್ಚಿಸಿ ಜೆಡಿಎಸ್‌ ಅಧ್ಯಕ್ಷ ದೇವೇ ಗೌಡರು ಅಭಿ ಪ್ರಾಯ ಸಂಗ್ರಹಿಸಿದ್ದಾರೆ. ಸೋಮವಾರ ಶಾಸಕರು, ಮುಖಂಡರ ಸಭೆ ಕರೆದಿದ್ದು, ಅಭ್ಯರ್ಥಿ ಆಯ್ಕೆ ಬಗ್ಗೆ ಮಾತುಕತೆ ನಡೆಸುವ ಸಂಭವ ವಿದೆ. ಒಂದೆರಡು ದಿನದಲ್ಲಿ ಅಭ್ಯರ್ಥಿಗಳು ಅಂತಿಮಗೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next