Advertisement

153 ರೂ.ಗೆ 100 ಚಾನೆಲ್‌ ಆಯ್ಕೆ!​​​​​​​

12:30 AM Jan 15, 2019 | |

ನವದೆಹಲಿ: ಟಿವಿ ಚಾನೆಲ್‌ಗ‌ಳ ಆಯ್ಕೆ ವಿಚಾರದಲ್ಲಿ ಕಳೆದ ಕೆಲವು ದಿನಗಳಿಂದ ಇದ್ದ ಗೊಂದಲ ಈಗ ನಿವಾರಣೆಯ ಹಂತ ತಲುಪಿದೆ. ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಕೈಗೊಂಡ ಹೊಸ ನಿರ್ಧಾರ ಟಿವಿ ವೀಕ್ಷಕರಿಗೆ ಭಾರಿ ಅನುಕೂಲ ಮಾಡಿಕೊಟ್ಟಿದೆ. 

Advertisement

ಈ ಮೊದಲಿದ್ದಂತೆ 100 ಉಚಿತ ಚಾನೆಲ್‌ಗ‌ಳನ್ನು 130 ರೂ. ದರದಲ್ಲಿ ಆಯ್ಕೆ ಮಾಡಿಕೊಳ್ಳುವ ಅವಕಾಶದ ಬದಲಿಗೆ, 100 ಉಚಿತ ಅಥವಾ ಪಾವತಿ ಸಹಿತ ಚಾನೆಲ್‌ಗ‌ಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಟಿವಿ ವೀಕ್ಷಕರಿಗೆ ಟ್ರಾಯ್‌ ನೀಡಿದೆ. ಇದಕ್ಕೆ ಜಿಎಸ್‌ಟಿ ಸಹಿತ 153 ರೂ. ಪಾವತಿ ಮಾಡಬೇಕಾಗುತ್ತದೆ.

ಸದ್ಯದ ನಿಯಮದ ಪ್ರಕಾರ 100 ಉಚಿತ ಚಾನೆಲ್‌ಗ‌ಳನ್ನು 130 ರೂ. ದರದಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಅದರ ನಂತರದಲ್ಲಿ ಪಾವತಿ ಚಾನೆಲ್‌ಗ‌ಳನ್ನು ಪಡೆಯಲು ಪ್ರತಿ ಚಾನೆಲ್‌ಗೆ ಹೆಚ್ಚುವರಿ ಹಣ ತೆರಬೇಕಾಗಿತ್ತು. ಪಾವತಿ ಚಾನೆಲ್‌ಗೆ 25 ಪೈಸೆಯಿಂದ 24 ರೂ.ವರೆಗೂ ದರವಿತ್ತು. ಇದರಿಂದಾಗಿ ಮಾಸಿಕ ಟಿವಿ ವೀಕ್ಷಣೆ ಬಿಲ್‌ ಜಾಸ್ತಿಯಾಗುವ ಆತಂಕ ವೀಕ್ಷಕರಿಗೆ ಎದುರಾಗಿತ್ತು. ಆದರೆ ಹಲವು ಸುತ್ತಿನಲ್ಲಿ ಟಿವಿ ವಾಹಿನಿ ಸಂಸ್ಥೆಗಳು, ಕೇಬಲ್‌ ಹಾಗೂ ಡಿಟಿಎಚ್‌ ಕಂಪನಿಗಳ ಜೊತೆ ಮಾತುಕತೆ ನಡೆಸಿದ ಟ್ರಾಯ್‌ ನಿಯಮಕ್ಕೆ ಪರಿಷ್ಕರಣೆ ಮಾಡಿದೆ. ಜ.31ರೊಳಗೆ ಇದನ್ನು ಪಡೆದುಕೊಳ್ಳಬೇಕಾಗಿದೆ. 

ಇದರೊಂದಿಗೆ ಟ್ರಾಯ್‌ ಕೈಗೊಂಡ ಇನ್ನೊಂದು ಪ್ರಮುಖ ನಿರ್ಧಾರವೆಂದರೆ ಯಾವುದೇ ಚಾನೆಲ್‌ಗೆ ದರವು 19 ರೂ. ಅನ್ನು ಮೀರುವಂತಿಲ್ಲ. ಈ ಹಿಂದೆ 24 ರೂ.ಗಳವರೆಗೂ ಚಾನೆಲ್‌ಗೆ ದರ ನಿಗದಿಪಡಿಸಲಾಗಿತ್ತು.

ಏನಿದು ಹೊಸ ನಿಯಮ?
ಜಿಎಸ್‌ಟಿ ಸೇರಿದಂತೆ ಮಾಸಿಕ 153.40 ರೂ.ಗೆ ಜನರು 100 ಚಾನೆಲ್‌ಗ‌ಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಈ 100 ಚಾನೆಲ್‌ಗ‌ಳಲ್ಲಿ ಪಾವತಿ ಚಾನೆಲ್‌ಗ‌ಳೂ ಇರಬಹುದು. ಆದರೆ ಆಯ್ಕೆ ಮಾಡಿದ ಚಾನೆಲ್‌ಗ‌ಳ ದರವು 130 ರೂ. ಅನ್ನು ಮೀರುವಂತಿಲ್ಲ. ಅಂದರೆ 13 ರೂ. ಬೆಲೆಯ 10 ಚಾನೆಲ್‌ಗ‌ಳನ್ನಷ್ಟೇ ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದು. ಇದೇ 130 ರೂ.ಗಳಲ್ಲಿ ಗ್ರಾಹಕರು ತಮಗೆ ಇಷ್ಟವಾದ ಪ್ಯಾಕ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಎಚ್‌ಡಿ ಚಾನೆಲ್‌ಗ‌ಳ ಬಗ್ಗೆ ಟ್ರಾಯ್‌ ತನ್ನ ಪ್ರಕಟಣೆಯಲ್ಲಿ ಯಾವುದೇ ಮಾಹಿತಿ ನೀಡಿಲ್ಲ. ಒಂದು ಮೂಲದ ಪ್ರಕಾರ ಒಂದು ಎಚ್‌ಡಿ ಚಾನೆಲ್‌ ಅನ್ನು ಎರಡು ಎಸ್‌ಡಿ ಚಾನೆಲ್‌ ಎಂದು ಸಂಖ್ಯೆಯ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ. ಆದರೆ ಇನ್ನೊಂದು ಮೂಲದ ಪ್ರಕಾರ ಈ 130 ರೂ. ಒಳಗೆ ಕೇವಲ ಎಸ್‌ಡಿ ಚಾನೆಲ್‌ ಮಾತ್ರ ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಎಚ್‌ಡಿ ಚಾನೆಲ್‌ಗೆ ಹೆಚ್ಚುವರಿ ಪಾವತಿ ಮಾಡಬೇಕಿರುತ್ತದೆ.

Advertisement

ಸದ್ಯ ಕನ್ನಡದ ಎಚ್‌ಡಿ ಚಾನೆಲ್‌ಗ‌ಳನ್ನು ಹೊರತುಪಡಿಸಿ ಎಲ್ಲ ಪಾವತಿ ಚಾನೆಲ್‌ಗ‌ಳನ್ನು ಲೆಕ್ಕ ಹಾಕಿದರೆ 137 ರೂ. ಆಗಲಿದ್ದು, 15 ಚಾನೆಲ್‌ಗ‌ಳು ಲಭ್ಯವಾಗಲಿವೆ. ಉಳಿದ 85 ಉಚಿತ ಚಾನೆಲ್‌ಗ‌ಳನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next