Advertisement
ರಸ್ತೆ ಕಾಮಗಾರಿ ಬಾಕಿ ಸುಮಾರು ನೂರರಷ್ಟು ಕುಟುಂಬಗಳು ಈ ಪರಿಸರದಲ್ಲಿ ವಿವಿಧ ಕೇರಿಗಳಲ್ಲಿ ವಾಸಿಸುತ್ತಿದ್ದು, ಇವರೆಲ್ಲರೂ ಈ ಮಾರ್ಗವನ್ನೇ ನೆಚ್ಚಿಕೊಂಡಿದ್ದಾರೆ. ರಸ್ತೆಯ ಆರಂಭ ಹಾಗೂ ಕೊನೆಯಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ ಕಾಂಕ್ರೀಟಿಕರಣಗೊಂಡಿದ್ದು ಮಧ್ಯದ ಸುಮಾರು ಮುನ್ನೂರು ಮೀಟರ್ ಕಾಂಕ್ರೀಟಿಕರಣ ಇನ್ನೂ ಅಗಬೇಕಾಗಿದೆ. ಈ ಕಾಂಕ್ರಿಟೀಕರಣ ಆಗದ ರಸ್ತೆಯಲ್ಲಿ ಮಳೆಗಾಲದಲ್ಲಿ ನಡೆದಾಡದ ಪರಿಸ್ಥಿತಿ ಎದುರಾಗಿದೆ. ಕಾಂಕ್ರೀಟಿಕರಣ ಅಸಾಧ್ಯವಾದರೆ ಕನಿಷ್ಠ ಡಾಮರೀಕರಣಗೊಳಿಸಬೇಕೆಂಬುದು ಸ್ಥಳೀಯರ ಬೇಡಿಕೆ.
ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈಗಾಗಲೇ ಈ ರಸ್ತೆಯ ಕಾಮಗಾರಿಗಾಗಿ ರೂ. 25ಲಕ್ಷ ರೂ. ಕಾಮಗಾರಿಯ ಪ್ರಾಸ್ತಾವನೆಯನ್ನು ಕಳುಹಿಸಿದ್ದು ನವೆಂಬರ್ ಅನಂತರ ಕಾಮಗಾರಿ ಆರಂಭವಾಗುವ ನಿರೀಕ್ಷೆಯನ್ನು ಜನರು ಇಟ್ಟುಕೊಂಡಿದ್ದಾರೆ. ಇಲ್ಲಿನ ಜನರು ದೈನಂದಿನ ಚಟುವಟಿಕೆಗೆ ಬಸೂÅರನ್ನೇ ಅವಲಂಬಿಸಿದ್ದು ದೋಣಿಯಲ್ಲಿಯೇ ಸಂಚರಿಸಬೇಕು. ಮಳೆಗಾಲದಲ್ಲಿ ಅದೂ ಕಷ್ಟಕರ. ಈ ಹಿನ್ನೆಲೆಯಲ್ಲಿ ಜನರು ಹಟ್ಟಿಯಂಗಡಿಯ ಮೂಲಕ ಸುತ್ತು ಬಳಸಿ ಸಂಚರಿಸಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಕುದ್ರು ಒಳಗಡೆಯ ಸಂಪರ್ಕ ರಸ್ತೆಯೂ ಸಂಚಾರಕ್ಕೆ ಅಯೋಗ್ಯವಾಗಿ ಕಂಡು ಬಂದಿರುವುದು ಗ್ರಾಮಸ್ಥರ ಬೇಡಿಕೆಗೆ ಕಾರಣ.
Related Articles
ಹಟ್ಟಿಯಂಗಡಿ ಮೊದಲಾದೆಡೆ ಶಾಲಾ ಮಕ್ಕಳು ದಿನನಿತ್ಯ ಸಂಚರಿಸುತ್ತಿದ್ದು, ಮಳೆಗಾಲದಲ್ಲಿ ರಸ್ತೆ ಹೊಂಡಗುಂಡಿಗಳಿಂದ ಕೂಡಿ ಸಂಚಾರಕ್ಕೆ ಅಯೋಗ್ಯವಾಗಿದೆ. ಇದರಿಂದ ಶಾಲಾ ಮಕ್ಕಳು ಹಾಗೂ ಸ್ಥಳೀಯರು ಸೇರಿ ಸೋಮವಾರ ದುರಸ್ತಿ ಕಾರ್ಯಕ್ಕೆ ಮುಂದಾದರು. ಆದರೂ ಸಹ ರಸ್ತೆ ಕೆಸರುಮಯವಾಗಿ ರಾಡಿ ಎದ್ದಿದ್ದು, ರಾತ್ರಿ ವೇಳೆ ಸಂಚರಿಸುವವರಿಗೆ ಅಪಾಯ ಕಟ್ಟಿrಟ್ಟ ಬುತ್ತಿಯಾಗಿದೆ.
Advertisement
ಹಟ್ಟಿಕುದ್ರು-ಮೂಡುಕುದ್ರು ನಡುವೆ ಇರುವ ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ಈ ಮಾರ್ಗದಲ್ಲಿ ವಾಹನಸಂಚಾರ ಅಸಾಧ್ಯವಾಗಿದೆ. ಶಾಲಾ ವಾಹನಗಳಿಗೆ ತೊಂದರೆಯಾಗಿದ್ದು, ರಿಕ್ಷಾಗಳವರು ಈ ರಸ್ತೆಯಲ್ಲಿ ಬರಲು ಹಿಂದೇಟು ಹಾಕುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆ ಆದಷ್ಟು ಶೀಘ್ರ ಈ ರಸ್ತೆ ಕಾಂಕ್ರೀಟೀಕರಣಗೊಳಿಸಿ ಸ್ಥಳೀಯರ ಕಷ್ಟಕ್ಕೆ ಸ್ಪಂದಿಸಬೇಕು.– ಸುಧೀಂದ್ರ, ಸ್ಥಳೀಯರು’ ಹಟ್ಟಿಕುದ್ರು ಸಾಕಷ್ಟು ಜನಸಂಖ್ಯೆ ಇರುವ ಪ್ರದೇಶ. ಉದ್ಯೋಗ, ಶಿಕ್ಷಣ ಸೇರಿದಂತೆ ತಮ್ಮ ಅಗತ್ಯತೆಗೆ ಬಸೂÅರು ಗ್ರಾಮವನ್ನೇ ಅವಲಂಬಿಸಿದ್ದಾರೆ. ಆದ್ದರಿಂದ ಇಲ್ಲಿಗೆ ಸಂಪರ್ಕ ಸೇತುವೆ ಮೊದಲ ಆದ್ಯತೆಯಾಗಿದೆ. ಬಳಿಕ ಹಟ್ಟಿಕುದ್ರು-ಮೂಡುಕುದ್ರು ನಡುವೆ ಸಂಪರ್ಕ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿ ಬಾಕಿ ಇದೆ. ಈಗಾಗಲೇ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಸುಮಾರು ಮುನ್ನೂರು ಮೀಟರ್ ರಸ್ತೆ ಕಾಂಕ್ರಿಟೀಕರಣಕ್ಕೆ ಪ್ರಸ್ತಾವನೆಯನ್ನು ಇಲಾಖೆಯ ಮೂಲಕ ಕಳುಹಿಸಿದ್ದು, ಸುಮಾರು ರೂ. 25 ಲಕ್ಷ ವೆಚ್ಚದಲ್ಲಿ ನವೆಂಬರ್‌ನಲ್ಲಿ ಕಾಮಗಾರಿ ಆರಂಭಿಸುವ ಬಗ್ಗೆ ಭರವಸೆ ನೀಡಿದ್ದಾರೆ.
– ಹಟ್ಟಿಕುದ್ರು ಬಾಬು ಪೂಜಾರಿ, ತಾ.ಪಂ.ಮಾಜಿ ಸದಸ್ಯ – ಉದಯ ಆಚಾರ್ ಸಾಸ್ತಾನ