Advertisement

ಆಫ್ರಿಕಾದಲ್ಲಿ ಭಾರತ ಕ್ರಿಕೆಟಿಗರ ಭದ್ರತೆ ಹೆಚ್ಚಳ

07:00 AM Jan 15, 2018 | Team Udayavani |

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದಲ್ಲಿ 2ನೇ ಟೆಸ್ಟ್‌ ಆಡುತ್ತಿರುವ ಭಾರತೀಯ ತಂಡದ ಭದ್ರತೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಇದಕ್ಕೆ ಕಾರಣ ದ.ಆಫ್ರಿಕಾದಲ್ಲಿ ದಿಢೀರನೆ ತಲೆದೋರಿರುವ ಜನಾಂಗೀಯ ನಿಂದನೆ ವಿರೋಧಿ ಪ್ರತಿಭಟನೆ.

Advertisement

ಆಫ್ರಿಕಾದ ಅಲ್ಲಲ್ಲಿ ಉದ್ರಿಕ್ತ ಜನರು ಶಾಪಿಂಗ್‌ ಮಾಲ್‌ಗ‌ಳಿಗೆ ನುಗ್ಗಿ ಗಲಾಟೆಯೆಬ್ಬಿಸಿದ್ದಾರೆ. ಜೊಹಾನ್ಸ್‌ಬರ್ಗ್‌ನ ಸ್ಯಾಂಡrನ್‌ನಲ್ಲಿ ಭಾರತೀಯ ಕ್ರಿಕೆಟಿಗರು ಉಳಿದುಕೊಂಡಿದ್ದು ಅದಕ್ಕೆ ಅಂಟಿಕೊಂಡಿರುವ ಶಾಪಿಂಗ್‌ ಮಾಲ್‌ ಘಟನೆ ಕೇಂದ್ರಸ್ಥಾನವಾಗಿದೆ. ಬಟ್ಟೆ ಕಂಪನಿಯೊಂದು ಜನಾಂಗೀಯ ಭೇದ ಮಾಡುವ ಜಾಹೀರಾತೊಂದನ್ನು ನೀಡಿದೆ. ಕಂಪನಿ ಅಚಾನಕ್ಕಾಗಿ ಈ ತಪ್ಪು ನಡೆದಿದೆ ಎಂದು ಒಪ್ಪಿಕೊಂಡರೂ ಜನರ ಪ್ರತಿಭಟನೆ ನಿಂತಿಲ್ಲ. 2ನೇ ಟೆಸ್ಟ್‌ನ ಮೊದಲನೇ ದಿನವೇ ಈ ಘಟನೆ ಶುರುವಾಗಿದ್ದು, ಆತಂಕ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next