Advertisement

ಬಿಜೆಪಿ ಶಾಸಕಿಗೆ ಭದ್ರತೆಯೇ ಹೊರೆ! ಗುಡಿಸಲಿನಲ್ಲಿ ವಾಸ, ಪತಿ ದಿನಗೂಲಿ ನೌಕರ

02:55 AM May 27, 2021 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಲದ ಬಂಕುರಾ ಜಿಲ್ಲೆಯ ಸಾಲ್ಟೋರಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಚಂದನಾ ಬೌರಿ ಮೊದಲ ಬಾರಿಗೆ ಆಯ್ಕೆಯಾದವರು. ಕೇಂದ್ರ ಸರಕಾರ ಬಿಜೆಪಿ ಶಾಸಕರಿಗೆ ಭದ್ರತೆ ನೀಡಲು ಕೇಂದ್ರ ಮೀಸಲು ಪಡೆಗಳನ್ನು ನಿಯೋಜಿಸಿದೆ. ಆದರೆ, ಅವರಿಗೆ ಈ ವ್ಯವಸ್ಥೆ ಹೊರೆಯಾಗಿ ಪರಿಣಮಿಸಿದೆ. ಶಾಸಕರಿಗೆ ಭದ್ರತೆ ಹೊರೆಯೇ ಎಂದು ಅಚ್ಚರಿಪಡಬೇಡಿ.

Advertisement

ಶಾಸಕಿ ಚಂದನಾ ಬಡ ಮಹಿಳೆ ಹಾಗೂ ಗೃಹಿಣಿ. ಅವರ ಪತಿ ದಿನಗೂಲಿ ನೌಕರ. ಮಕ್ಕಳ ಜತೆಗೆ ಒಂದು ರೂಮಿನ ಗುಡಿಸಲಿನಲ್ಲಿ ಅವರ ವಾಸ. ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಜಾರಿಯಾಗಿರುವ ಲಾಕ್‌ಡೌನ್‌ನಿಂದಾಗಿ ಪತಿಗೆ ಉದ್ಯೋಗವಿಲ್ಲ. ಹಾಗಾಗಿ, ಆದಾಯಕ್ಕೂ ತೊಂದರೆಯಾಗಿದೆ. ಅವರ ಮನೆಯಲ್ಲಿ ನೀರಿನ ಸೌಲಭ್ಯ ಮತ್ತು ಶೌಚಾಲಯ ಕೂಡಾ ಇಲ್ಲ.

ನೂತನ ಶಾಸಕಿ ಹಾಗೂ ಅವರ ಪತಿಯೇ ದಿನದ ಊಟಕ್ಕೆ ತಡಕಾಡುವ ಹಾಗಿರುವ ಈ ಪರಿಸ್ಥಿತಿಯಲ್ಲಿ ಅವರಿಗೆ ಭದ್ರತೆ ನೀಡಲು ನಿಯೋಜಿತರಾಗಿರುವ ನಾಲ್ವರು ಯೋಧರಿಗೆ ಊಟ ನೀಡಲು, ಅವರಿಗೆ ಆಶ್ರಯ ಕಲ್ಪಿಸಲಾಗದ ಅಸಹಾಯಕತೆ ಅವರನ್ನು ಆವರಿಸಿದೆ ಎಂದು “ದ ನ್ಯೂ ಇಂಡಿಯನ್‌ ಎಕ್ಸ್‌ ಪ್ರಸ್‌’ ಪತ್ರಿಕೆ ವರದಿ ಮಾಡಿದೆ.

ಯೋಧರಿಂದಲೇ ನೆರವು: ಶಾಸಕಿ ಚಂದನಾ ಬೌರಿ ಅವರ ಪರಿಸ್ಥಿತಿ ನೋಡಿ, ಭದ್ರತೆ ನೀಡಲು ಬಂದಿರುವ ಯೋಧರೇ ತಮ್ಮ ಜೇಬಿನಿಂದ ಖರ್ಚು ಮಾಡಿ ಅವರಿಗೆ ಸಮೀಪದ ಕಿರಾಣಿ ಅಂಗಡಿಯಿಂದ ತರಕಾರಿ, ದಿನಸಿ ತಂದು ನೀಡುತ್ತಿದ್ದಾರೆ. ಅದರ ಮೂಲಕವೇ ಅಡುಗೆ ಸಿದ್ಧವಾಗಿ ಊಟ ಮಾಡುತ್ತಿದ್ದಾರೆ. ಇತ್ತೀಚೆಗೆ ಮುಕ್ತಾಯವಾದ ಚುನಾವಣೆಯಲ್ಲಿ ಚಂದನಾ ತಮ್ಮ ಸಮೀಪದ ಪ್ರತಿಸ್ಪರ್ಧಿ ಟಿಎಂಸಿಯ ಸಂತೋಷ್‌ ಕುಮಾರ್‌ ಮೊಂದಾಲ್‌ ವಿರುದ್ಧ 4,145 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next