ಶ್ರೀನಗರ: ಅಮರನಾಥ ಯಾತ್ರೆ ಭಾರೀ ಪ್ರಮಾಣದ ವಿಧ್ವಂಸಕ ಕೃತ್ಯವೆಸಗಲು ಉಗ್ರರು ಸಂಚು ರೂಪಿಸಿದ್ದು, ಈ ಹಿನ್ನಲೆಯಲ್ಲಿ ಜಮ್ಮು – ಕಾಶ್ಮೀರದಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಯಾತ್ರೆಗೆ ಅಡ್ಡಿಪಡಿಸಲು ಭಯೋತ್ಪಾದಕರು, ಭದ್ರತಾ ಪಡೆಗಳು ಮತ್ತು ಅಮರನಾಥ ಯಾತ್ರೆ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸಂಚು ರೂಪಿಸಿದ್ದಾರೆ.
ಮೂಲಗಳ ಪ್ರಕಾರ ಅಮರನಾಥ ಯಾತ್ರೆಯ ದಾಳಿಯ ಹೊಣೆಯನ್ನು ಉಗ್ರರಾದ ರಫೀಕ್ ನಾಯ್ ಮತ್ತು ಮೊಹಮ್ಮದ್ ಅಮೀನ್ ಬಟ್ ಅಲಿಯಾಸ್ ಅಬು ಖುಬೈಬ್ ಅವರಿಗೆ ನೀಡಲಾಗಿದೆ.
ರಫೀಕ್ ನಾಯ್ ಮತ್ತು ಮೊಹಮ್ಮದ್ ಅಮೀನ್ ಬಟ್ ಇಬ್ಬರಿಗೂ ರಾಜೌರಿ,-ಪೂಂಚ್, ಪಿರ್ ಪಂಜಾಲ್ ಮತ್ತು ಚೆನಾಬ್ ಕಣಿವೆ ಪ್ರದೇಶಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜವಾಬ್ದಾರಿಯನ್ನು ಇಬ್ಬರು ಭಯೋತ್ಪಾದಕರಿಗೆ ವಹಿಸಿದೆ ಎಂದು ಮೂಲಗಳು ತಿಳಿಸಿವೆ.
ರಫೀಕ್ ನಾಯ್ ಮೂಲತಃ ಪೂಂಚ್ ಜಿಲ್ಲೆಯ ಮೆಂದಾರ್ ನಿವಾಸಿಯಾಗಿದ್ದರೆ, ಖುಬೈಬ್ ದೋಡಾ ಜಿಲ್ಲೆಯ ನಿವಾಸಿ. ಪ್ರಸ್ತುತ, ಇಬ್ಬರೂ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿ ಇಬ್ಬರು ನೆಲೆಸಿದ್ದಾರೆ.
ಉಗ್ರರಾದ ರಫೀಕ್ ನಾಯ್ , ಅಬು ಖುಬೈಬ್ ಮತ್ತು ಇವರ ಕುಟುಂಬ ಸದಸ್ಯರ ಚಟುವಟಿಕೆಗಳ ಮೇಲೆ ಭದ್ರತಾ ಪಡೆಗಳು ನಿರಂತರವಾಗಿ ಕಣ್ಣಿಟ್ಟಿವೆ.
ಅಮರನಾಥ ದೇವಾಲಯದ ಪವಿತ್ರ ದೇಗುಲಕ್ಕೆ ಭೇಟಿ ನೀಡುವ ನೋಂದಣಿ ಪ್ರಕ್ರಿಯೆಯು ಜುಲೈ 1, 2023 ರಂದು ಪ್ರಾರಂಭವಾಗಲಿದೆ.
ಈ ದೇವಾಲಯವು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದಲ್ಲಿದೆ. ಅಮರನಾಥ ಯಾತ್ರೆಯ ಅವಧಿಯು 62 ದಿನಗಳವರೆಗೆ ಇರುತ್ತದೆ. ಯಾತ್ರೆಯು ಆಗಸ್ಟ್ 31, 2023 ರಂದು ಮುಕ್ತಾಯಗೊಳ್ಳಲಿದೆ.