Advertisement
ನಮಸ್ಕಾರ ಎಂದು ಹೇಳಿ, ಕರ ಜೋಡಿಸಿ ನಿಂತಾಗ, ಇದಿರಾದ ವ್ಯಕ್ತಿ ಪರಿಚಿತನಾಗಿರಲಿ ಅಥವಾ ಅಪರಿಚಿತನೇ ಆಗಿರಲಿ. ಒಂದು ಕ್ಷಣ ಆ ಶಬ್ದ ಬಂದಕಡೆಗೆ ಕೇಂದ್ರೀಕೃತನಾಗುತ್ತಾನೆ. ನಮಸ್ಕಾರ ಎಂಬ ಶಬ್ದದ ಶಕ್ತಿಯೇ ಅಂತಹದ್ದು. ವ್ಯಕ್ತಿಯೊಬ್ಬನನ್ನು ಕಂಡ ಕ್ಷಣದಲ್ಲಿ ಗುರುತಿಸಿಕೊಳ್ಳುವ ಅಥವಾ ಗೌರವಿಸುವ ಸಂಸ್ಕಾರದ ರೂಪವೇ ಈ ನಮಸ್ಕಾರ. ಇದು ನಮ್ಮ ಮೂಲ ಸಂಸ್ಕೃತಿಯ ಮುಖ್ಯ ಭಾಗವೂ ಹೌದು. ಆದರೆ ಇವತ್ತು ನಮಸ್ಕಾರ ಎಂಬುದು ಕೇವಲ ಮೇಲ್ನೋಟಕ್ಕೆ, ಸ್ವಾರ್ಥ ಸಾಧನೆಗೆ ಬಳಸುವ ಪದವಾಗಿಬಿಟ್ಟಿರುವುದು ವಿಪರ್ಯಾಸವೇ ಸರಿ.
Related Articles
ಕ್ಷಣ ನಮ್ಮ ಮನಸ್ಸಿನಲ್ಲಿ ತುಂಬುತ್ತದೆ. ಆಹ್ಲಾದಕರವಾದ ಮನಸ್ಸು ಒಳ್ಳೆಯ ಕೆಲಸವನ್ನಷ್ಟೇ ಮಾಡಲು ದೇಹವನ್ನು ಪ್ರೇರೇಪಿಸುವುದರಿಂದ ನಮ್ಮಿಂದ ಉತ್ತಮ ಕೆಲಸಗಳು ಮಾಡಲ್ಪಡುತ್ತವೆ. ಆಗ ನಮ್ಮ ಸ್ವಾಸ್ಥ್ಯದ ಜೊತೆಗೆ ಕುಟುಂಬದ ಸ್ವಾಸ್ಥ್ಯವೂ ಕೆಡದೆ ನೆಮ್ಮದಿಯ ಜೀವನ ಸಾಧ್ಯವಾಗುತ್ತದೆ. ಜ್ಞಾನೇಂದ್ರಿಯಗಳಾಗಲೀ, ಕರ್ಮೇಂದ್ರೀಯಗಳಾಗಲೀ ಸಂಸ್ಕಾರಯುತವಾಗಿ¨ªಾಗ ಮಾತ್ರ ಎÇÉೆಡೆ ಸುಖಮಯ ವಾತಾವರಣವನ್ನು ಕಾಣಬಹುದು.
Advertisement
ನಮಸ್ಕಾರ ಎಂದು ಕರಜೋಡಿಸುವಾಗ ನಾವು ಸಣ್ಣವರಾದಂತೆ ಕಂಡರೂ ಅದರಷ್ಟು ದೊಡ್ಡತನ ಬೇರೊಂದಿಲ್ಲ. ಒಂದು ಪ್ರಸಂಗವನ್ನು ಇಲ್ಲಿ ಹೇಳಬೇಕು. ಒಬ್ಬ ಪರಮ ನೀಚನಿದ್ದ. ಆತನಿಗೆ ಮರವನ್ನು ಉರುಳಿಸಿ ಆನಂದಪಡುವ ಕೆಟ್ಟ ಅಭ್ಯಾಸವಿತ್ತು. ಅವನ ಈ ಕಾರ್ಯಕ್ಕೇ ಯಾರೇ ಅಡ್ಡಿಬಂದರೂ ಅವರನ್ನು ಕೊಲ್ಲಲೂ ಹೇಸುತ್ತಿರಲಿಲ್ಲ. ಈ ಕೇಡಿಗನ ಸಹವಾಸವೇ ಬೇಡ ಎಂದು ಜನ ದೂರವೇ ಇದ್ದರು. ಹೀಗಿದ್ದಾಗಲೇ, ಮುಂದಿನವಾರ ಆಲದ ಮರವನ್ನು ಕಡಿಯುವುದಾಗಿ ಆ ದುರುಳ ಊರಿನವರೆದುರು ಘೋಷಿಸಿ ಬಿಟ್ಟ. ಆಲದ ಮರವನ್ನು ಊರಿನ ಸೊತ್ತು ಮತ್ತು ದೇವರು ಎಂದೇ ನಂಬಿಕೊಂಡಿದ್ದ, ಆ ಮರವು ಉರುಳುವುದನ್ನು ಸಹಿಸಲಾಗದೇ ಊರ ಜನರೆಲ್ಲರೂ ಬೇಸರದಲ್ಲಿ¨ªಾಗ ಒಬ್ಬ ಸಂತನೊಬ್ಬ ಆ ಊರಿಗೆ ಬಂದ. ಆತನಲ್ಲಿ ಈ ವಿಷಯವನ್ನು ತಿಳಿಸಿದಾಗ ತಾನು ಆ ಮರವನ್ನು ರಕ್ಷಿಸುವುದಾಗಿ ಮಾತುಕೊಟ್ಟ. ಮರಕಡಿಯುವ ದಿನ ಬಂದೇ ಬಿಟ್ಟಿತು. ಊರವರಾರೂ ರಕ್ಷಣೆಗೆ ಬರದ ಕಾರಣ, ಬೇಗ ಕಡಿದು ಮುಗಿಸುವುದಾಗಿ ಯೋಚಿಸಿ ಆ ಪರಮನೀಚ ಮರದ ಬಳಿ ಬಂದಾಗ ಅಲ್ಲಿಯೇ ಕುಳಿತಿದ್ದ ಸಂತ “ನಮಸ್ಕಾರ’ ಎಂದು ಕರಜೋಡಿಸಿದ. ಒಮ್ಮೆ ಗಾಬರಿಯಾದ ಇವನು ಗಲಿಬಿಲಿಗೊಂಡು ಏನು ಮಾಡಬೇಕೆಂದು ತೋಚದೆ ನಾಳೆ ಬರುತ್ತೇನೆ ಎಂದುಕೊಂಡು ಹೊರಟು ಹೋದ.
ಆದರೆ ಮರುದಿನವೂ ಇದು ಪುನರಾವರ್ತಿತವಾಯಿತು. ಒಂದು ವಾರ ಹೀಗೆಯೇ ಕಳೆಯುತ್ತಿದ್ದಂತೆ ಎಂಟನೆಯ ದಿನ ಸಂತ ನಮಸ್ಕರಿಸಿದಾಗ ಆ ಮರ ಕಡಿಯುವವನೂ ಕೊಡಲಿಯನ್ನು ಬದಿಗಿಟ್ಟು ಕರಜೋಡಿಸಿದ. ಆ ಕ್ಷಣದಿಂದ ಆತನಲ್ಲಿ ಬದಲಾವಣೆಯುಂಟಾಯಿತು. ಸಂತನನ್ನು ಮಾತನಾಡಿಸುವ ಮನಸ್ಸಾಯಿತು. ಪ್ರತಿದಿನ ಬಂದು ಸಂತನಿಗೆ ನಮಸ್ಕರಿಸಿ ಹೋಗುತ್ತಿದ್ದ. ಒಂದು ದಿನ ತನ್ನ ತಪ್ಪಿನ ಅರಿವಾಗಿ ಕೊಡಲಿಯನ್ನು ಬಿಸಾಡಿದ.
ಆ ಸಂತನ ಜೊತೆ ತಾನೂ ಸಂತನಾಗಲು ಹೊರಟುಬಿಟ್ಟ. ಈ ಕತೆಯಲ್ಲಿ ದುಷ್ಟತನವನ್ನು ಬದಲಾಯಿಸಿದ್ದು ಕೇವಲ ನಮಸ್ಕಾರ. ಆತ ಪರಮನೀಚನೆಂದು ಯಾರೂ ನಮಸ್ಕಾರ ಕೊಟ್ಟು ಮಾತನಾಡಿಸಿರಲಿಲ್ಲ. ಸಂತನ ನಮಸ್ಕಾರದಿಂದ ಪ್ರೇರಿತನಾಗಿ ಬದಲಾದನೆಂದರೆ ಈ ಕರಜೋಡಿಸುವುದಕ್ಕೆ ಎಷ್ಟು ಶಕ್ತಿಯಿದೆಂಬುದು ತಿಳಿಯುತ್ತದೆ. ನಮನ: ಮನುಷ್ಯನ ಸತ್‌ಶಕ್ತಿ ಆತನ ಸಂಸ್ಕೃತಿಯಲ್ಲಿಯೇ ಇದೆ.
ನಮ್ಮ ಸತ್ ಪದ್ಧತಿ ಆಚರಣೆಗಳೇ ಸುಖಜೀವನದ ಮೂಲ.
||ಸರಳವಾಗಿ ಯೋಚಿಸಿಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ|| ವಿಷ್ಣು ಭಟ್ಟ ಹೊಸ್ಮನೆ.