Advertisement
ಸರಿಯಾದ ದಾರಿ ಆಯ್ದುಕೊಳ್ಳಿಯಾವುದೇ ಕೆಲಸ ಪ್ರಾರಂಭಿಸುವುದಕ್ಕೂ ಮೊದಲು ನಮ್ಮ ಅಭಿರುಚಿಯ ಬಗ್ಗೆ ತಿಳಿದಿರಬೇಕು. ನಮಗೆ ಯಾವ ಕೆಲಸ ಖುಷಿ ಕೊಡುತ್ತದೋ ಅದನ್ನೇ ಉದ್ಯಮವಾಗಿ ಆರಂಭಿಸಬೇಕು. ಹಾಗೇ ಪ್ರಾರಂಭಿಸುವುದಕ್ಕಿಂತ ಮೊದಲು ಸರಿಯಾದ ರೂಪುರೇಷೆಗಳನ್ನು ಹಾಕಿಕೊಳ್ಳಬೇಕು.
ಉದ್ಯಮ ಆರಂಭಿಸುವ ಕ್ಷೇತ್ರದ ಬಗ್ಗೆ ಆಳವಾದ ಸಂಶೋಧನೆಯನ್ನು ಮಾಡುವುದು ಅಗತ್ಯ. ನಿಮ್ಮ ಪ್ರತಿಸ್ಪರ್ಧಿ, ಗ್ರಾಹಕರು, ಹೇಗೆ ಬಂಡವಾಳ ಹೂಡಬಹುದು, ಕಾನೂನು ವ್ಯವಹಾರ ಹಾಗೂ ನಿಮ್ಮ ಉದ್ಯಮಕ್ಕೆ ಸಹಾಯವಾಗುವ ಎಲ್ಲ ಸಣ್ಣ ಸಣ್ಣ ವಿಚಾರಗಳ ಕುರಿತು ಮೊದಲೇ ತಿಳಿದಿರಬೇಕು. ವ್ಯವಹಾರ ಚೆನ್ನಾಗಿರಲಿ
ಎಲ್ಲ ನನಗೇ ತಿಳಿದಿದೆ ಎಂಬ ಭಾವನೆ ನಮ್ಮಲ್ಲಿದ್ದರೆ ಉದ್ಯಮದಲ್ಲಿ ಯಶಸ್ಸು ಲಭಿಸಲು ಸಾಧ್ಯವಿಲ್ಲ. ಪ್ರತಿಯೊಂದನ್ನೂ ಕಲಿಯುವ ಆಸಕ್ತಿ, ಕುತೂಹಲವಿದ್ದಾಗ ಮಾತ್ರ ಗೆಲುವು ನಮ್ಮದಾಗುತ್ತದೆ.
Related Articles
ಕೆಲಸ ಎಷ್ಟೇ ಕಷ್ಟವಾಗಿದ್ದರೂ ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸಿ. ಅದಕ್ಕಾಗಿ ಕಾರಣಗಳನ್ನು ನೀಡದಿರಿ. ನಿಮ್ಮ ಕಾರಣಗಳು ಬೇಜವಾಬ್ದಾರಿತನವನ್ನು ಸೂಚಿಸುತ್ತವೆ. ಎಲ್ಲ ಸಮಸ್ಯೆಗಳನ್ನು ಜಾಣ್ಮೆಯಿಂದ ಪರಿಹರಿಸಿ ಮುನ್ನಡೆಯಿರಿ.
Advertisement
ಸರಿಯಾದ ವ್ಯಕ್ತಿಗಳನ್ನು ಆಯ್ಕೆ ಮಾಡಿನಿಮ್ಮ ಗುಂಪಿಗೆ ಜನರನ್ನು ಆಯ್ಕೆ ಮಾಡುವಾಗ ಎಚ್ಚರಿಕೆಯಿಂದಿರಿ. ಕೆಲಸದ ಮೇಲೆ ನಿಮ್ಮಷ್ಟೇ ಆಸಕ್ತಿ ಇರುವ, ಧನಾತ್ಮಕ ಚಿಂತಕರನ್ನು ಹಾಗೂ ಪ್ರತಿಭಾಶಾಲಿಗಳನ್ನು ಆಯ್ಕೆ ಮಾಡಿ. ನಿಮ್ಮ ಗೈರಿನಲ್ಲಿ ಉದ್ಯಮವನ್ನು ಸೂಕ್ತವಾಗಿ ಮುಂದುವರಿಸುವಂತವರಾಗಿರಬೇಕು. ಲಾಸ್ಟ್ ನಾಟ್ ದ ಲೀಸ್ಟ್
ಯಾವುದೇ ಕೆಲಸವನ್ನು ಆರಂಭಿಸಲು ನಮ್ಮ ಮೇಲೆ ನಮಗೆ ನಂಬಿಕೆಯಿರಬೇಕಾದದ್ದು ಅತೀ ಅಗತ್ಯ. ನಿಮ್ಮ ಚಿಂತನೆಗಳನ್ನು ಬೆಂಬಲಿಸಿ. ಎಲ್ಲರ ಸಲಹೆ ಸೂಚನೆಗಳಿಗೂ ಗೌರವ ನೀಡಿ ಆದರೆ ಕೊನೆಗೆ ಎಲ್ಲವನ್ನೂ ತೂಗಿಸಿ ನೋಡಿ ನಿಮ್ಮ ಮನಸ್ಸಿಗೆ ಸರಿ ಅನಿಸಿದ್ದನ್ನು ಮಾಡಿ. ಸ್ಟೀವ್ ಜಾಬ್ಸ್ ಹೇಳುವ ಪ್ರಕಾರ ನಿಮ್ಮ ಹೃದಯ ಮತ್ತು ಕನಸನ್ನು ಮುಂದುವರಿಸುವ ದ್ಧಿವಂತಿಕೆಯಿರಲಿ. ಅಂತಹವರಿಗೆ ಮಾತ್ರ ಜೀವನದಲ್ಲಿ ಏನು ಬೇಕೆಂಬುದು ಮೊದಲೇ ತಿಳಿದಿರುತ್ತದೆ. ಸುಶ್ಮಿತಾ ಶೆಟ್ಟಿ