Advertisement
ಈ ಬಾರಿ ಪ್ರಕಟಿತ ಅಂಕ ಗಳಿಗಿಂತ ಮರುಮೌಲ್ಯಮಾಪನದ ಬಳಿಕ ಅಂಕಗಳು ವ್ಯತ್ಯಾಸವಾದ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಮರು ಮೌಲ್ಯ ಮಾಪನ ವಾದ ಬಳಿಕ ಬರೋಬ್ಬರಿ 2,047 ವಿದ್ಯಾರ್ಥಿ ಗಳಿಗೆ ಹೆಚ್ಚುವರಿ ಅಂಕ ದೊರೆತಿದ್ದರೆ, 2020 ರಲ್ಲಿ 2,318 ಮಂದಿಗೆ ದೊರಕಿತ್ತು. ಮೌಲ್ಯಮಾಪಕರ ಎಡವಟ್ಟಿನಿಂದ ಸಾವಿರಾರು ವಿದ್ಯಾರ್ಥಿಗಳ ಕೋರ್ಸ್ ಆಯ್ಕೆಗೆ ಹಿನ್ನಡೆಯಾಗಿತ್ತು.
Related Articles
Advertisement
ಮೌಲ್ಯಮಾಪನದಲ್ಲಿ ತೊಂದರೆ ಆದರೆ ದೊಡ್ಡ ನಷ್ಟ. ಅಂತಹ ಮೌಲ್ಯಮಾಪಕರಿಗೆ ವಿಧಿಸುವ ದಂಡದ ಮೊತ್ತವನ್ನು ಏರಿಸಲು ನಿರ್ಧರಿಸಲಾಗಿದೆ. ಈ ಬಾರಿ ಮರುಮೌಲ್ಯಮಾಪನಕ್ಕೆ ಹಾಕಿದ ಎಲ್ಲ ಪತ್ರಿಕೆಗಳನ್ನು ಗುರುತು ಮಾಡಿಕೊಂಡು ಮೌಲ್ಯಮಾಪನ ಮಾಡಿದವರ ಪಟ್ಟಿಯನ್ನು ತಯಾರಿಸಲು ನಿರ್ಧರಿಸಲಾಗಿದೆ.– ಬಿ.ಸಿ. ನಾಗೇಶ್, ಸಚಿವರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕುವವರ ಸಂಖ್ಯೆ ಪ್ರಸ್ತುತ ಅಧಿಕವಿದೆ. ಮೌಲ್ಯಮಾಪನದ ವೇಳೆ ಒತ್ತಡದಿಂದ ಕೆಲವೊಮ್ಮೆ ಅಂಕ ವ್ಯತ್ಯಾಸವಾಗಬಹುದು. ಆದರೆ ಮರುಮೌಲ್ಯಮಾಪನದ ವೇಳೆ ಇದನ್ನು ಹೆಚ್ಚು ಗಮನ ನೀಡಿ ಪರಿಶೀಲಿಸಲಾಗುತ್ತದೆ.
– ಕೆ.ಎನ್. ಗಂಗಾಧರ ಆಳ್ವ, ಅಧ್ಯಕ್ಷರು, ಪದವಿ ಪೂರ್ವ ಕಾಲೇಜು ಸಂಘ, ದ.ಕ. ಮೌಲ್ಯಮಾಪನಕ್ಕೆ ಸಲ್ಲಿಕೆಯಾದ ಮನವಿ
2020 ವಾರ್ಷಿಕ ಪರೀಕ್ಷೆ 12118
2020 ಪೂರಕ ಪರೀಕ್ಷೆ 2519
2021: ಕೊರೊನಾ ಕಾರಣ ಪರೀಕ್ಷೆ ನಡೆದಿಲ್ಲ
2021: ಪೂರಕ ಪರೀಕ್ಷೆ 960
2022 ವಾರ್ಷಿಕ ಪರೀಕ್ಷೆ: 13848 -ದಿನೇಶ್ ಇರಾ