Advertisement
ಸ್ಫೋಟ ಗೊಂಡ ಪೇಜರ್‌ಗಳನ್ನು ಇರಾನ್‌ನ ಸಂಸ್ಥೆಯೇ ಖರೀದಿಸಿತ್ತು ಎಂದು ಅವರು ಹೇಳಿದ್ದಾರೆ. ಇರಾನ್‌ನ ಸುದ್ದಿ ವಾಹಿನಿಯೊಂದರಲ್ಲಿ ಅವರು ಈ ವಿಚಾ ರ ಬಹಿರಂಗ ಪಡಿಸಿದ್ದಾರೆ. ಆದರೆ 1 ಗಂಟೆಯ ಬಳಿಕ ಅದೇ ಸುದ್ದಿ ವಾಹಿನಿಯು ಈ ವಿಚಾರವನ್ನು ನಿರಾಕರಿಸಿದೆ. ತಜ್ಞ ಮಸೌದ್ ಅಸದೊಲ್ಲಾಹಿ, ಹೆಜ್ಬುಲ್ಲಾ ನೇರವಾಗಿ ಪೇಜರ್ ಖರೀದಿಸಿದರೆ ಅನುಮಾನ ಬರುತ್ತದೆ ಎಂಬ ಕಾರ ಣಕ್ಕೆ ಇರಾನ್‌ನ ಸಂಸ್ಥೆಯೊಂದಕ್ಕೆ ಖರೀದಿಸಲು ಹೇಳಿತ್ತು. ಆ ಸಂಸ್ಥೆ ತೈವಾನ್‌ನಿಂದ 5 ಸಾವಿರ ಪೇಜರ್‌ಗಳನ್ನು ಖರೀದಿಸಿ ಹೆಜ್ಬುಲ್ಲಾಗೆ ನೀಡಿತ್ತು’ ಎಂದಿದ್ದರು.
ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡು ವೆಯೇ ಇರಾನ್ ಸರಕಾರದ ಮೇಲೆ ಶನಿವಾರ ದೊಡ್ಡ ಮಟ್ಟ ದಲ್ಲಿ ಸೈಬರ್ ದಾಳಿ ನಡೆದಿದೆ. ದಾಳಿಯಲ್ಲಿ ಸರಕಾರ ಮತ್ತು ಪರ ಮಾಣು ಕೇಂದ್ರಗಳನ್ನು ಗುರಿಯಾಗಿಸಿ ಕೊಳ್ಳಲಾಗಿದೆ ಎಂದು ಇರಾನ್ ಸರಕಾರ ತಿಳಿಸಿದೆ. ಸರಕಾರದ 3 ಅಂಗಗಳಾದ ಶಾಸ ಕಾಂಗ, ಕಾರ್ಯಾಂಗ, ನ್ಯಾಯಾಂಗದ ಮೇಲೆ ಸೈಬರ್ ದಾಳಿ ನಡೆದಿದೆ. ಇಲ್ಲಿದ್ದ ಎಲ್ಲ ಮಾಹಿತಿ ಯನ್ನು ಕದಿಯಲಾಗಿದೆ. ನಮ್ಮ ಅಣು ಕೇಂದ್ರಗಳನ್ನು ದಾಳಿಯಲ್ಲಿ ಗುರಿ ಮಾಡಿ ಕೊಳ್ಳಲಾಗಿದೆ ಎಂದು ಇರಾನ್ ಹೇಳಿದೆ. ದಾಳಿಯಲ್ಲಿ ಇಂಧನ ಪೂರೈಕೆ, ಪೌರಾ ಡಳಿತ, ಸಂಚಾರ, ಬಂದರು ಮತ್ತಿತರ ಪ್ರಮುಖ ವ್ಯವಸ್ಥೆ ಗಳ ಮೇಲೂ ದಾಳಿ ನಡೆದಿದೆ. ಇರಾನ್‌ನ ಪೆಟ್ರೋ ಲಿಯಂ ಉತ್ಪನ್ನಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಈ ಸೈಬರ್ ದಾಳಿಯೂ ನಡೆದಿದೆ.
Related Articles
“ಇಸ್ರೇಲ್‌ಗೆ ನೆರವಾದರೆ ಸುಮ್ಮನಿರಲ್ಲ’ ಎಂದು ತೈಲ ಉತ್ಪಾದಕ ರಾಷ್ಟ್ರ ಗಳು, ಅಮೆರಿಕ ಮಿತ್ರ ರಾಷ್ಟ್ರಗಳಿಗೆ ಇರಾನ್ ಎಚ್ಚರಿಸಿದೆ. ಸೌದಿ ಅರೇಬಿ ಯಾ, ಯುಎಇ, ಜೋರ್ಡಾನ್, ಕತಾರ್ ಮುಂತಾದ ದೇಶಗಳಲ್ಲಿನ ಸೇನಾ ಮೂಲಸೌಕರ್ಯ ಅಥವಾ ವಾಯು ಪ್ರದೇಶ ಬಳಸಿ ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇರಾನ್ ಇಂಥ ಎಚ್ಚರಿಕೆ ನೀಡಿದೆ.
Advertisement