Advertisement

ದೇಶದ ಎರಡನೇ ಕೊರೊನಾ ವೈರಸ್ ಸೋಂಕು ಕೇರಳದಲ್ಲಿ ಪತ್ತೆ

09:57 AM Feb 03, 2020 | keerthan |

ತಿರುವನಂತಪುರ: ಕೇರಳದಲ್ಲಿ ಎರಡನೇ ಕೊರೊನಾ ವೈರಸ್  ರೋಗಿ ಪತ್ತೆಯಾಗಿದ್ದಾರೆ. ಚೀನಾದಲ್ಲಿ ಆರಂಭವಾದ ಮಾರಾಣಾಂತಿಕ ಕೊರೊನಾ ವೈರಸ್ ಗೆ ದಾಳಿಯಾಗಿರುವ ಮೊದಲ ರೋಗಿಯೂ ಕೇರಳದಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಪತ್ತೆಯಾಗಿದ್ದರು.

Advertisement

ಚೀನಾದಿಂದ ಮರಳಿರುವ ಕೇರಳದ ವ್ಯಕ್ತಿಯಲ್ಲಿ ಈ ಕೊರೊನಾ ವೈರಸ್ ಪತ್ತೆಯಾಗಿದೆ. ಸದ್ಯ ರೋಗಿಯನ್ನು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವ್ಯಕ್ತಿಯ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.

ಕೇರಳದಲ್ಲಿ ಒಟ್ಟು 1793 ಜನರ ಮೇಲೆ ನಿಗಾ ಇರಿಸಲಾಗಿದೆ. 70 ಜನರನ್ನು ಪ್ರತ್ಯೇಕ ವಾರ್ಡ್ ಗಳಲ್ಲಿ ಇರಿಸಲಾಗಿದೆ. ಉಳಿದವರಿಗೆ ಮನೆಯಲ್ಲಿಯೇ ನಿಗಾ ಇಡಲಾಗಿದೆ.

ಈ ಹಿಂದೆ ವುಹಾನ್ ಯುನಿವರ್ಸಿಟಿಯಲ್ಲಿ ಓದುತ್ತಿದ್ದ ಕೇರಳದ ವಿದ್ಯಾರ್ಥಿಯಲ್ಲಿ ರೋಗ ಸೋಂಕು ಪತ್ತೆಯಾಗಿತ್ತು. ಇದು ದೇಶದ ಮೊದಲ ಕೊರೊನಾ ಸೋಂಕು ಪತ್ತೆ ಪ್ರಕರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next