Advertisement
ವಿವಿಧ ಗ್ರಾಮಗಳಲ್ಲಿ ಪರಿಶೀಲನೆ: ತಮಿಳುನಾಡಿನ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಎ.ಜಿ.ಪೊನ್ ಮಾಣಿಕ್ಕವೆಲ್, ಕುಣಿಗಲ್‌ನ ಕೊತ್ತಗಿರಿ ಗ್ರಾಮದಲ್ಲಿ ರಾಜ ರಾಜ ಚೋಳ-1 ನೇ ವಂಶಸ್ಥರು 949 ವರ್ಷಗಳ ಹಿಂದೆ ನಿರ್ಮಿಸಿದ್ದ ದೇವಾಲಯದ ಕುರುಹು ಇಲ್ಲವಾಗಿದೆ, ದೇಗುಲದಲ್ಲಿದ್ದ ವಿಗ್ರಹವೂನಾಪತ್ತೆಯಾಗಿದೆ ಎಂದು ತಮಿಳುನಾಡು ಸರ್ಕಾರಕ್ಕೆಪತ್ರ ಬರೆದಿದ್ದರಿಂದ ಕರ್ನಾಟಕ ರಾಜ್ಯದ ಪುರಾತತ್ವ ಇಲಾಖೆ ನಿರ್ದೇಶಕ ಡಾ.ಆರ್.ಗೋಪಾಲ್,ಇತಿಹಾಸ ತಜ್ಞ ಡಾ.ಎಚ್.ಎಸ್.ಗೋಪಾಲ್ ರಾವ್‌ತಾಲೂಕಿನ ಕೊತ್ತಗೆರೆ ಗ್ರಾಮದ ಹಳ್ಳಿಮರ,ಗಂಗೇನಹಳ್ಳಿ, ದೊಡ್ಡಕೆರೆ ಸೋಮೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Related Articles
Advertisement
ದೇವಾಲಯ ಕಂಡುಬಂದಿಲ್ಲ : ಕೊತ್ತಗೆರೆ ಗ್ರಾಮದಲ್ಲಿ ತಮಿಳು ಶಾಸನ ಇದೆ. ಆ ರೀತಿಯ ಯಾವುದೇ ದೇವಾಲಯಗಳು ಕಂಡು ಬಂದಿಲ್ಲ ಹಾಗೂ ಗಂಗೇನಹಳ್ಳಿ ಗ್ರಾಮದಲ್ಲಿ ಮಾಣಿಕ್ಕವೆಲ್ ಉಲ್ಲೇಖದಂತೆ ಶಿವಲಿಂಗ, ವೀರಗಲ್ಲು, ಜೈನ ತೀರ್ಥಕರನ ಶಿಲ್ಪಿ, ಕಲ್ಲಿನ ಬಸವಣ್ಣ,ಸೂರ್ಯನ ವಿಗ್ರಹಗಳು ಮೇಲ್ನೋಟಕ್ಕೆಕಂಡು ಬಂದಿದೆ ಎಂದು ಪುರಾತತ್ವ ಇಲಾಖೆ ನಿರ್ದೇಶಕ ಡಾ.ಆರ್. ಗೋಪಾಲ್, ಇತಿಹಾಸ ತಜ್ಞ ಡಾ.ಎಚ್. ಎಸ್.ಗೋಪಾಲ್ ರಾವ್ ಹೇಳಿದರು.
3 ಸಾವಿರ ವರ್ಷ ಪುರಾತನ :
ಕುಣಿಗಲ್ ಕೆರೆ ಕೋಡಿ ಹಿಂಭಾಗದ ಗಂಗೆನಹಳ್ಳಿ, ಗಂಗೆಹಳ್ಳಿ ದಿಬ್ಬ,ಗಂಗರಹಳ್ಳಿ ಎಂದು ಕರೆಯಲ್ಪಡುವ ಇಂದಿನ ಗಂಗೆನಹಳ್ಳಿ ಸುಮಾರು ಮೂರು ಸಾವಿರ ವರ್ಷಗಳಷ್ಟು ಪುರಾತನವಾಗಿದ್ದು, ಈ ಸ್ಥಳವನ್ನು ಇತಿಹಾಸ ತಜ್ಞರು ಪ್ರಗೈತಿಹಾಸಿಕ ನೆಲೆ ಎಂದು ಗುರುತಿಸಿದ್ದಾರೆ. ಇತಿಹಾಸ ಪೂರ್ವಕಾಲದ ಕುರುಹುಗಳಾದ ನೂತನ ಶಿಲಾಯುಗ ಉಜ್ಜಿ ನಯಗೊಳಿಸಲಾದ ಶಿಲಾಯುಧಗಳು, ಕೆಂಪು ವರ್ಣದ ಮಡಿಕೆ, ಕುಡಿಕೆಗಳು, ಬೂದಿದಿಬ್ಬ, ಕಬ್ಬಿಣದ ಕಿಟ್ಟ, ಅಸ್ಥಿ ಮೂಳೆಗಳು ಕಂಡುಬರುತ್ತವೆ. ಗಂಗರ ಕಾಲಾವಧಿಯಲ್ಲಿ ಗಂಗಾ ಪಟ್ಟಣ, ಗಂಗೇನಹಳ್ಳಿಯಲ್ಲಿ ಜನವಸತಿಯು ನೆಲೆಸಿತ್ತು. ಕಾಲಾನಂ ತರ ಪ್ರಾಕೃತಿಕ ವಿಕೋಪವೋ ಅಥವಾ ಶತ್ರುಗಳ ದಾಳಿಯೋ ಸಂಭವಿಸಿ ಗಂಗಪಟ್ಟಣವು ನಶಿಸಿ ಹೋಗಿರಬಹುದು ಎನ್ನಲಾಗಿದ್ದು, ಪುರಾತತ್ವ ಇಲಾಖೆ ನಿರ್ದೇಶಕರು, ಇತಿಹಾಸ ತಜ್ಞರು ನೀಡುವ ಮಾಹಿತಿಯಿಂದ ಮೂಲ ಇತಿಹಾಸ ತಿಳಿಯ ಬಹುದ್ದಾಗಿದೆ.